ಹಳ್ಳೂರ – ತಪಸ್ಸು ಪೂಜೆ ಹೋಮ ಹವನಗಳು, ಮೌನ ಅನುಷ್ಠಾನ ಭಕ್ತಿಯಿಂದ ಪೂಜಿಸಿ ಧ್ಯಾನಿಸಿದರೆ ಪಾಪ ಕರ್ಮಗಳು ನಾಶವಾಗಿ ಪುಣ್ಯ ಪ್ರಾಪ್ತಿಯಾಗಿ ಜಗತ್ತು ಉದ್ದಾರವಾಗುತ್ತದೆಂದು ಗೋಕಾಕ ಶೂನ್ಯ ಸಂಪಾದನ ಮಠದ ಶ್ರೀ ಮುರುಘ ರಾಜೇಂದ್ರ ಮಹಾಸ್ವಾಮಿಗಳು ಹೇಳಿದರು.
ಅವರು ಶಿವಾಪೂರ (ಹ) ಗ್ರಾಮದ ಶ್ರೀ ಅಡವಿ ಸಿದ್ದೇಶ್ವರ ಮಠದ ಪೀಠಾಧಿಪತಿಗಳಾದ ಅಡವಿ ಸಿದ್ದರಾಮ ಮಹಾಸ್ವಾಮಿಗಳ 25 ದಿನಗಳ ಕಾಲ ನಡೆದ ಮೌನ ಅನುಷ್ಠಾನದ ಮಹಾ ಮಂಗಲ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ ಅನುಷ್ಠಾನದ ಫಲದಿಂದ ಭಕ್ತರು ಸಮಾಜ ಉದ್ದಾರಾಗುತ್ತದೆ. ಸಮಾಜದಲ್ಲಿನ ಅಂಧಕಾರ ಅಜ್ಞಾನವನ್ನು ಕಳೆಯುವ ಪೂಜ್ಯರ ಮಾರ್ಗ ದರ್ಶನದಲ್ಲಿ ಸಾಗಿರಿ ಕೆಲವು ಸ್ವಾಮೀಜಿಗಳು ರಾಜಕೀಯ, ಜಾತಿ ಬೆನ್ನು ಹತ್ತಿ ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಿದ್ದಾರೆ. ಮಹಾತ್ಮರು ಗುರುವಿಗೆ ಶ್ರೇಷ್ಠ ಸ್ಥಾನ ಮಾನವಿದೆ. ಬೇಧ ಭಾವ ಮಾಡದೆ ಎಲ್ಲರನ್ನು ಪ್ರೀತಿಸಿ ಉಪದೇಶ ನೀಡಿ ಉದ್ದಾರ ಮಾಡುವಕಾರ್ಯಮಾಡಬೇಕು. ಸೂರ್ಯ, ಚಂದ್ರರಿಗೆ ಗ್ರಹಣ ಬರುತ್ತವೆ ದೇವಾದಿ ದೇವತೆಗಳಿಗೂ ಕಷ್ಟ ಕಾರ್ಪಣ್ಯಗಳು ಬಂದಿವೆ. ನಾವು ಸತ್ಯ ಧರ್ಮದ ದಾರಿಯಲ್ಲಿ ಸಾಗಿ ಕಷ್ಟ ಎದುರಿಸಿ ಧೈರ್ಯದಿಂದ ಇದ್ದಾಗ ಮಾತ್ರ ಜಯ ಸಿಗುತ್ತಿದೆಂದು ಹೇಳಿದರು.
ಅಡವಿ ಸಿದ್ದೇಶ್ವರ ಮಠದ ಪೀಠಾಧಿಪತಿಗಳಾದ ಅಡವಿ ಸಿದ್ದರಾಮ ಮಹಾಸ್ವಾಮಿಗಳು ಮಾತನಾಡಿ ಭಕ್ತರ ಕಷ್ಟ ಕಾರ್ಪಣ್ಯಗಳು ಬಯಲಾಗಿ ಜೀವನವು ನೆಮ್ಮದಿಯಿಂದ ಬದುಕಲಿ, ಸುಖ ಸಮೃದ್ಧಿ ದೊರೆಯಿಲಿ ಎಂದು ಶಿವನ ಧ್ಯಾನದಲ್ಲಿ ಮಗ್ನನಾಗಿದ್ದು ಮೌನ ಅನುಷ್ಠಾನದಿಂದ ಎಲ್ಲರಿಗೂ ಶುಭವಾಗಲೆಂದು ಹಾರೈಸಿದರು.
ಜಡಿ ಸಿದ್ದೇಶ್ವರ ಮಠದ ಶಿವಾನಂದ ಮಹಾಸ್ವಾಮಿಗಳು, ಶಿವಲಿಂಗ ಮುರುಘ ರಾಜೇಂದ್ರ ಶಿವಾಚಾರ್ಯ ಸ್ವಾಮೀಜಿ. ಸಂಗಮೇಶ್ವರ ಪೂಜ್ಯರು, ಗಂಗಾಧರ ಮಹಾಸ್ವಾಮಿಗಳು, ವೀರೇಶ ದೇವರು.ವೇದಮೂರ್ತಿ ಶಂಕರಯ್ಯ ಹಿರೇಮಠ ಆಶೀರ್ವಚನ ನೀಡಿದರು.
ಪ್ರಾರಂಭದಲ್ಲಿ ಶಿವಾಪೂರ ಗೊರಗುದ್ದಿ ತೋಟದಿಂದ ಅಡವಿ ಸಿದ್ದೇಶ್ವರ ಮಠದವರೆಗೆ ಅಡವಿ ಸಿದ್ದರಾಮ ಮಹಾಸ್ವಾಗಳನ್ನು ರಥದಲ್ಲಿ ಕುಳ್ಳಿರಿಸಿ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಕುಂಬ ಮೇಳ ಆರತಿ ಭವ್ಯ ಮೆರವಣಿಗೆಯೊಂದಿಗೆ ಶ್ರೀ ಮಠಕ್ಕೆ ಬರಮಾಡಿಕೊಂಡರು. ಧರ್ಮ ಸಭೆ ನಡೆದು ಸರ್ವರಿಗೂ ಮಹಾ ಪ್ರಸಾದ ವ್ಯವಸ್ಥೆ ನಡೆಯಿತು. ಗ್ರಾಮದ ಗುರು ಹಿರಿಯರು ಉಪಸ್ಥಿತರಿದ್ದರು.

