ಛಲ ಬಿಡದೇ ಗುರಿ ಸಾಧಿಸಿದ ವಿಶಾಲ್

Must Read

ಮುನವಳ್ಳಿಃ ಸಮೀಪದ ಹೂಲಿಕಟ್ಟಿ ಸಿ.ಆರ್.ಸಿ ಯ ಸಂಪನ್ಮೂಲ ವ್ಯಕ್ತಿಯಾದ ಎಸ್.ಸಿ.ಕುರಿ ಇವರ ಸುಪುತ್ರ ವಿಶಾಲ್ ಕುರಿ ಈತನು ೨೦೨೧-೨೨ ನೇ ಸಾಲಿನ ನೀಟ್ ಪರೀಕ್ಷೆಯಲ್ಲಿ ೫೮೦ ಅಂಕಗಳನ್ನು ಪಡೆದು ಎಂ.ಬಿ.ಬಿ.ಎಸ್. ವ್ಯಾಸಂಗಕ್ಕೆ ಸರಕಾರಿ ಕೋಟಾದಡಿ ರಾಜ್ಯದ ಪ್ರತಿಷ್ಠಿತ ವೈದ್ಯಕೀಯ ವಿಜ್ಞಾನ ಸಂಸ್ಥೆಗಳಲ್ಲಿ ಒಂದಾದ ಶಿವಮೊಗ್ಗ (ಸಿಮ್ಸ) ವೈದ್ಯಕೀಯ ಸಂಸ್ಥೆಯಲ್ಲಿ ಪ್ರವೇಶ ಪಡೆದಿರುವನು. ಕಳೆದ ವರ್ಷ ಪ್ರಯತ್ನಿಸಿದ ಇವನು ಸೀಟು ಸಿಗದೇ ನಿರಾಶನಾಗದೇ ಸತತ ಓದಿನ ಮೂಲಕ ತನ್ನ ವೈದ್ಯಕೀಯ ವ್ಯಾಸಾಂಗದ ಕನಸನ್ನು ಈ ವರ್ಷ ನನಸು ಮಾಡಿಕೊಂಡಿರುವನು., ಇವನ ಈ ಸಾಧನೆಗೆ ಸವದತ್ತಿ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಅರ್ಜುನ ಕಂಬೋಗಿ.ಕ್ಷೇತ್ರ ಸಮನ್ವಯಾಧಿಕಾರಿಗಳಾದ ಎಂ.ಬಿ.ಬಳಿಗಾರ.ಹಾಗೂ ಎಲ್ಲಾ ಬಿ.ಆರ್.ಪಿ.ವಿಕಲಚೇತನ ಸಂಪನ್ಮೂಲ ಶಿಕ್ಷಕರು ಮತ್ತು ಸಿ.ಆರ್.ಪಿಯವರು. ಸವದತ್ತಿ ತಾಲೂಕಿನ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಎಚ್.ಆರ್.ಪೆಟ್ಲೂರ.ಹಾಗೂ ಪದಾಧಿಕಾರಿಗಳು ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಘಟಕದ ಅಧ್ಯಕ್ಷರಾದ ಡಾ.ವೈ.ಎಂ.ಯಾಕೊಳ್ಳಿ.ಅಕ್ಷರದಾಸೋಹ ಸಹಾಯಕ ನಿರ್ದೇಶಕರಾದ ಸಿ.ವೈ.ತುಬಾಕಿ. ಮೊದಲಾದವರು ಅಭಿನಂದಿಸಿದ್ದಾರೆ.

Latest News

ಕವನ : ಅನುಬಂಧ

ಅನುಬಂಧಕಾಣದ ದಾರಿಯಲ್ಲಿ ಬೆಸೆದ ನಂಟು, ಹೆಸರಿಲ್ಲದಿದ್ದರೂ ಹೃದಯಕ್ಕೆ ಪರಿಚಿತವಾದ ಬಂಧ… ಕಾಲದ ಹೊಳೆ ಹರಿದರೂ ಕಳೆಯದ ಗುರುತು, ಗಂಟು ಅದು ಅನುಬಂಧ. ಮೌನದಲ್ಲೂ ಮಾತಾಡುವ ಸಂಬಂಧ, ಬಂಧ.. ಕಣ್ಣಂಚಿನ ನೀರನ್ನೂ ಓದುತ್ತದೆ ಒರೆಸುತ್ತದೆ. ಹೃದಯ ಮುರಿದು ನೊಂದ ಕ್ಷಣದಲ್ಲಿ ಅದೃಶ್ಯವಾಗಿ ಕೈ ಹಿಡಿದುಕೊಳ್ಳುತ್ತದೆ. ಮಣ್ಣಿನ ವಾಸನೆಯಂತೆ ಸಹಜ, ಬೆಳಗಿನ ಬೆಳಕಿನಂತೆ ಮೃದುವು. ನಗುವಿನಲ್ಲೂ,...

More Articles Like This

error: Content is protected !!
Join WhatsApp Group