ಮೂಡಲಗಿ: ಶ್ರೀರಾಮಚಂದ್ರನಿಗೆ ಹನುಮಂತ ಹೇಗೆ ಸೇವೆ ಸಲ್ಲಿಸಿದರೋ ಹಾಗೆ ಹನುಮಂತನ ಭಕ್ತರು ಸೇವೆಸಲ್ಲಿಸಿ ನಮ್ಮ ದೇಶದ ರಕ್ಷಣೆಗಾಗಿ ಎಲ್ಲ ಹನುಮ ಮಾಲಾಧಾರಿಗಳು ಸೇವೆ ಸಲ್ಲಿಸೋಣ ಎಂದು ಚಿಕ್ಕೋಡಿ ಜಿಲ್ಲಾ ವಿಶ್ವಹಿಂದೂ ಪರಿಷತ್-ಭಜರಂಗದಳದ ಧರ್ಮ ಪ್ರಸಾರ ಪ್ರಮುಖರಾದ ಸಿದ್ದಪ್ಪ ತಿಗಡಿ ಹೇಳಿದರು.
ಮೂಡಲಗಿ ತಾಲೂಕಿನ ರಂಗಾಪೂರ ಗ್ರಾಮದ ಹನುಮಾನ ಮಂದಿರದಲ್ಲಿ ವಿಶ್ವಹಿಂದೂ ಪರಿಷತ್-ಭಜರಂಗದಳ ಕಾರ್ಯಕರ್ತರಿಂದ ಜರುಗಿದ ಹನುಮ ಮಾಲಾಧಾರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಹನುಮಂತನ ಭಕ್ತರು ಭಕ್ತಿಯ ಮಾರ್ಗದಲ್ಲಿ ನಡೆದು ಸಮಾಜದಲ್ಲಿ ನಮ್ಮ ಸಂಸ್ಕೃತಿ ಮತ್ತು ಧರ್ಮವನ್ನು ಕಾಪಾಡಲು ಮುಂದಾಗಬೇಕೆಂದರು.
ತಾಲೂಕಾ ಕಾರ್ಯದರ್ಶಿ ದಯಾನಂದ ಸವದಿ ಮಾತನಾಡಿ, ಹನುಮ ಮಾಲಾಧಾರಿಗಳು ಪ್ರತಿದಿನ ಸೂರ್ಯೋದಯ ಮುಂಚೆ ಹನಮಂತ ಪೂಜೆಯೊಂದಿಗೆ ಚಾಲೀಸಾ ಪಠಣ ಮಾಡಬೇಕು, ಹನುಮ ಮಾಲೆ ಧರಿಸುವದರಿಂದ ಮನುಷ್ಯನಲ್ಲಿ ಒಳ್ಳೆಯ ಚೈತನ್ಯ, ಆತ್ಮಸ್ಥೈರ್ಯ, ಸಂಸ್ಕಾರವಂತರಾಗುವದರೊಂದಿಗೆ ದುಷ್ಟಶಕ್ತಿಗಳು ದೂರಾಗುತ್ತವೆ ಎಂದ ಅವರು ಮಾಲಾ ಧಾರಿಗಳು ಮಾಲೆಯನ್ನು ವಿಸರ್ಜನೆ ನಂತರವು ಹನುಮಂತನ ಭಕ್ತಿ ಸೇವೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದರು.
ಪವಮಾನ ಹೋಮವನ್ನು ನೆರವೇರಿಸಿದ ಮೂಡಲಗಿಯ ರಾಘವೇಂದ್ರಾಚಾರ್ಯ ತೆಗ್ಗಿ ಹಾಗೂ ಮೂಡಲಗಿ ತಾಲೂಕಾ ವಿಶ್ವಹಿಂದೂ ಪರಿಷತ್-ಭಜರಂಗದಳದ ಸಂಯೋಜಕ ಶ್ರೀಧರ ಬಡಿಗೇರ ಮಾತನಾಡಿದರು. ಕಾರ್ಯಕ್ರಮದಲ್ಲಿ ಹನುಮ ಮಾಲೆ ಧರಿಸಿದ ಸುಮಾರು 200 ಮಾಲಾಧಾರಿಗಳು ಹನುಮಾನ ಚಾಲೀಸಾ ಪಠಣ ಮಾಡಿದರು.
ಈ ಸಮಯಲ್ಲಿ ಮೂಡಲಗಿ ಭಜರಂಗದಳ ಪ್ರಮುಖ ಕಾರ್ಯಕರ್ತರಾದ ದುಂಡಪ್ಪ ಹಳ್ಳೂರ, ಮಾರುತಿ ಶಿಂಧೆ, ಬಸವರಾಜ ಗುಡ್ಲಿ, ಸಚೀನ ತಳವಾರ, ಮಹಾಂತೇಶ ಮುಗಳಖೋಡ, ರಾಮಚಂದ್ರ ಪಾಟೀಲ, ಶಿವಾನಂದ ಪೂಜೇರಿ, ಕೃಷ್ಣಾ ಸೋನವಾಲಕರ, ಸಚೀನ ಮುಗಳಖೋಡ, ಸಂಗಯ್ಯಾ ಹಿರೇಮಠ, ರಜನಿಕಾಂತ ಪಾತ್ರೋಟ, ರಾಮು ವೆಂಕಟಾಪೂರ, ಹನಮಂತ ಗಿಡ್ಡನವರ, ಮಂಜು ಹೆಳವರ, ಪವನಕುಮಾರ ಮುನ್ಯಾಳ, ಶಿವಾನಂದ ಕೊಪ್ಪದ ಸೇರಿದಂತೆ ಮೂಡಲಗಿ, ರಂಗಾಪೂರ, ಮುನ್ಯಾಳ, ಹಳ್ಳೂರ, ಗುರ್ಲಾಪೂರ, ಪಟಗುಂದಿ, ಧರ್ಮಟ್ಟಿ, ತುಕ್ಕಾನಟ್ಟಿ, ಹುಣಶ್ಯಾಳ, ನಾಗನೂರ, ಕಲ್ಲೋಳಿ, ತಳಕಟನಾಳ ಮತ್ತು ಮೂಡಲಗಿ ತಾಲೂಕಿನ ವಿವಿಧ ಗ್ರಾಮದಿಂದ ಹನುಮಂತ ಮಾಲೆಯನ್ನು ಧರಿಸಿದರು.