ಸಿಂದಗಿ; ಪಟ್ಟಣದಲ್ಲಿ ಬಹುದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಶ್ರೀ ಸ್ವಾಮಿ ವಿವೇಕಾನಂದರ ಹಾಗೂ ಕಿತ್ತೂರರಾಣಿ ಚೆನ್ನಮ್ಮಳ ಪುತ್ತಳಿಗಳನ್ನು ಪ್ರತಿಸ್ಥಾಪನೆ ಮಾಡಲಾಗಿದ್ದು, ಇನ್ನೂ ಕೆಲ ಕಾಮಗಾರಿಗಳ ಬಾಕಿ ಇದ್ದು ಟಿಪು ಸುಲ್ತಾನ ವೃತ್ತ, ಸ್ವಾಮಿ ವಿವೇಕಾನಂದ ವೃತ್ತ, ಕಿತ್ತೂರು ರಾಣಿ ಚೆನ್ನಮ್ಮ ವೃತ್ತ ಈ ಮೂರು ವೃತ್ತಗಳನ್ನು ಒಂದೇ ವೇದಿಕೆಯಲ್ಲಿ ರಾಜ್ಯದ ಮಂತ್ರಿಗಳು, ಹರಗುರು ಚರಮೂರ್ತಿಗಳ ಸಮ್ಮುಖದಲ್ಲಿ ಅನಾವರಣಗೊಳಿಸಲಾಗುವುದು ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ಪಟ್ಟಣದಲ್ಲಿ ವಿಜಯಪುರ ನಗರಕ್ಕೆ ಹೋಗುವ ಮಾರ್ಗದಲ್ಲಿ ವೀರರಾಣಿ ಕಿತ್ತೂರ ಚನ್ನಮ್ಮ ವೃತ್ತದಲ್ಲಿ ಪುತ್ತಳಿ ಪ್ರತಿಸ್ಥಾಪಿಸಿ ಅವರು ಮಾತನಾಡಿದರು.
ಮೆರವಣಿಗೆಗೆ ಚಾಲನೆ ನೀಡಿದ ಕೂಡಲ ಸಂಗಮದ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯಮೃತ್ಯುಂಜಯ ಮಹಾಸ್ವಾಮಿಜಿ ಮಾತನಾಡಿ, ಬಹುದಿನಗಳಿಂದ ನೆನೆಗುದಿಗೆ ಬಿದ್ದಿರುವ ಶ್ರೀ ಸ್ವಾಮಿವಿವೇಕಾನಂದರ ಹಾಗೂ ಕಿತ್ತೂರರಾಣಿ ಚೆನ್ನಮ್ಮಳ ಪುತ್ತಳಿಗಳನ್ನು ಶಾಸಕ ಅಶೋಕ ಮನಗೂಳಿಯವರ ಪರಿಶ್ರಮದಿಂದ ತಮ್ಮ ಸ್ವಂತ ಹಣದಲ್ಲಿ ಕಿತ್ತೂರ ರಾಣಿ ಚನ್ನಮ್ಮಳ ಕಂಚಿನ ಪುತ್ಥಳಿ 10 ಅಡಿ ಮತ್ತು ಶ್ರೀ ಸ್ವಾಮಿವಿವೇಕಾನಂದರ ಕಂಚಿನ ಪುತ್ಥಳಿ 8 ಅಡಿ ಎತ್ತರದ ಪುತ್ತಳಿಗಳನ್ನು ಪ್ರತಿಸ್ಥಾಪನೆ ಮಾಡಲಾಗಿದೆ ಮುಂದಿನ ದಿನಗಳಲ್ಲಿ ಮೂರು ವೃತ್ತಗಳನ್ನು ಅನಾವರಣಗೊಳಿಸುವ ಭರವಸೆ ಶಾಸಕರು ನೀಡಿದ್ದಾರೆ ಆ ಕಾರ್ಯಕ್ರಮದಲ್ಲಿ ಎಲ್ಲ ಮಠಾದೀಶರ ಆಗಮನ ಆಗಲಿದೆ ಎಂದರು.
ಭವ್ಯ ಮೆರವಣಿಗೆ; ಶ್ರೀ ಸ್ವಾಮಿ ವಿವೇಕಾನಂದರ ಹಾಗೂ ಕಿತ್ತೂರರಾಣಿ ಚೆನ್ನಮ್ಮಳ ಪುತ್ತಳಿಗಳ ಮೆರವಣಿಗೆಯು ಪಟ್ಟಣದ ಕನಕದಾಸ ವೃತ್ತದಿಂದ ಪ್ರಾರಂಭಗೊಂಡು ಶ್ರೀ ಸ್ವಾಮಿ ವಿವೇಕಾನಂದ ವೃತ್ತದಲ್ಲಿ ಪುತ್ತಳಿ ಸ್ಥಾಪನೆಗೊಂಡು ನಂತರ ಬಸವೇಶ್ವರ ವೃತ್ತದ ಮಾರ್ಗವಾಗಿ ತೆರಳಿ ಕಿತ್ತೂರರಾಣಿ ಚೆನ್ನಮ್ಮಳ ವೃತ್ತದಲ್ಲಿ ಪುತ್ತಳಿ ಪ್ರತಿಸ್ಥಾಪನೆಗೊಂಡಿತು.
ವಾದ್ಯ ಮೇಳ; ಗೊಂಬೆ ಕುಣಿತ, ಜೋಗಮ್ಮ ಕುಣಿತ, ಚಿಟ್ಟ ಹಲಗಿ ವಾದ್ಯ ಮೇಳ, ಕುದುರೆ ಕುಣಿತ, ಡೊಳ್ಳು ಕುಣಿತ ಬೆಂಡು ಬಾಜಿಯೊಂದಿಗೆ ಅದ್ದೂರಿ ಮೆರವಣಿಗೆಯು ಜನಮನ ಸೂರೆಗೊಂಡಿತು.
ಈ ಸಂದರ್ಭದಲ್ಲಿ ಸಾರಂಗಮಠದ ಡಾ. ಪ್ರಭು ಸಾರಂಗದೇವ ಶಿವಾಚಾರ್ಯರು, ಆದಿಶೇಷ ಮಠದ ರಾಜಯೋಗಿ ವೀರರಾಜೇಂದ್ರ ಸ್ವಾಮಿಗಳು, ಊರಿನ ಹಿರೇಮಠದ ಶಿವಾನಂದ ಶಿವಾಚಾರ್ಯರು, ಆಸಂಗಿಹಾಳ ಆರೂಢಮಠದ ಪಂಚಮಸಾಲಿ ಸಮಾಜದ ಅದ್ಯಕ್ಷ ಎಂ.ಎಂ.ಹಂಗರಗಿ, ಸೋಮನಗೌಡ ಬಿರಾದಾರ, ಲಿಂಬೆ ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಅಶೋಕ ಅಲ್ಲಾಪೂರ, ಪುರಸಭೆ ಮಾಜಿ ಅಧ್ಯಕ್ಷ ಡಾ.ಶಾಂತವೀರ ಮನಗೂಳಿ, ಜಿಪಂ ಮಾಜಿ ಉಪಾಧ್ಯಕ್ಷ ಸಿದ್ದರಾಮ ಪಾಟೀಲ ಹೂನಳ್ಳಿ, ಮುಖಂಡರಾದ ಸಂಗನಬಸು ಬಿರಾದಾರ, ಸಂಗನಗೌಡ ಪಾಟೀಲ, ಮಲ್ಲನಗೌಡ ಪಾಟೀಲ ಬ್ಯಾಕೋಡ, ವ್ಹಿ.ಬಿ.ಕುರುಡೆ, ರಮೇಶ ಬಂಟನೂರ, ಗುರುಗೌಡ ಬಿರಾದಾರ, ಅಶೋಕ ತೆಲ್ಲೂರ, ರವಿ ಬಿರಾದಾರ, ಸುರೇಶ ಹಳ್ಳೂರ, ಅಶೋಕ ಕೊಳಾರಿ, ಮಲ್ಲನಗೌಡ ಪಾಟೀಲ ಇಬ್ರಾಹೀಂಪೂರ, ಚಂದ್ರಶೇಖರ ನಾಗರಬೇಟ್ಟ, ಗುರು ಬಸರಕೋಡ, ಸ್ವಾಮಿ ವಿವೇಕಾನಂದ ವೃತ್ತದ ಸಮಿತಿಯ ಶಿವಾನಂದ ನಿಗಡಿ, ಬಸವರಾಜ ಪಾಟೀಲ, ಸಂತೋಷ ಭಜಂತ್ರಿ, ಗಂಗಾಧರ ರುಕುಂಪುರ ಸೇರಿದಂತೆ ಅನೇಕ ಗ್ರಾಮಗಳಿಂದ ಸಾವಿರಾರು ಸಾರ್ವಜನಿಕರು ಪಾಲ್ಗೊಂಡಿದ್ದರು.