ಸ್ಯಾಂಟ್ರೋ ರವಿ ಕೇಸ್ ನಲ್ಲಿ ಯಾರ್ಯಾರು‌ ಇದ್ದಾರೆ ಕಾದು ನೋಡಿ

Must Read

ಬೀದರ್ ನಲ್ಲಿ ಸಿಎಂ ಸಿಡಿಸಿದ ಹೊಸ ಬಾಂಬ್

ಬೀದರ: ಸ್ಯಾಂಟ್ರೋ ರವಿ ಕೇಸ್ ಬಗ್ಗೆ ತನಿಖೆಯಾಗಲಿ ಎಂದು ನಾನು ಹೇಳಿದ್ದೇನೆ ಇದರಲ್ಲಿ ಯಾರ್ಯಾರು‌ ಇದ್ದಾರೆ ಎಂಬುದು ಹೊರಬೀಳುತ್ತದೆ ಕಾದು ನೋಡಿ ಎಂದು ಬೀದರ್ ನಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಹೊಸ ಬಾಂಬ್ ಹಾಕಿದ್ದಾರೆ.

ಈಗಲೇ ಯಾರು ಏನೆ ಹೇಳಿದರೂ ತನಿಖೆಯಲ್ಲಿ ಸಂಪೂರ್ಣವಾಗಿ ಮಾಹಿತಿ ಬರುತ್ತದೆ ಹೀಗಾಗೀ ನಾನು ಈಗೀನದಷ್ಟೇ ಅಲ್ಲ, 20 ವರ್ಷದಿಂದ ಯಾರ್ಯಾರು ರವಿಗೆ ಸಂಬಂಧವಿದ್ದಾರೆ ಎಂದು ಗೊತ್ತಾಗುತ್ತದೆ ಎಂದು ಮಾಜಿ ಸಿಎಂ ಎಚ್ಡಿಕೆ ಗೆ ಸಿಎಂ ಬಸವರಾಜ್ ಬೊಮ್ಮಾಯಿ ಟಾಂಗ್ ಕೊಟ್ಟರು.

ಮಾಜಿ ಸಿಎಂ ಸಿದ್ದರಾಮಯ್ಯ ಕೋಲಾರದಲ್ಲಿ ಸ್ಪರ್ಧೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಿಎಂ ಪ್ರತಿಯೊಬ್ಬ ರಾಜಕಾರಣಿಗಳನ್ನು ಜನ ನೋಡುತ್ತಾರೆ, ಜನರೇ ತೀರ್ಮಾನ ಮಾಡುತ್ತಾರೆ ಎಂದು ಹೇಳಿದರು.

ನಾನು ಕರ್ನಾಟಕದ‌‌ ಕಿರೀಟ ಖ್ಯಾತಿಯ ಬೀದರ್ ಉತ್ಸವದ ಸಮಾರೋಪ ಸಮಾರಂಭಕ್ಕೆ ಬಂದಿದ್ದು ಎಲ್ಲಾ‌ ಕಲಾವಿದರಿಗೆ ಉತ್ಸವದಲ್ಲಿ ಅವಕಾಶ ನೀಡಲಾಗಿದೆ… ಬೀದರ್ ಉತ್ಸವ ಬಹಳ ಅರ್ಥಪೂರ್ಣವಾಗಿ ಹಾಗೂ ಉತ್ಸಾಹ ದಿಂದ ನಡೆದಿದ್ದು ಅಪಾರವಾದ ಜನಸಂಖ್ಯೆ ಸೇರಿದ್ದು ನೋಡಿದಾಗ ಬಹಳಷ್ಟು ಸಂತೋಷ ವಾಗಿದೆ ಎಂದು ಬೀದರ್ ನಲ್ಲಿ ಸಿಎಂ ಬಸವರಾಜ್ ಬೋಮ್ಮಾಯಿ ಹೇಳಿದರು.


ವರದಿ: ನಂದಕುಮಾರ ಕರಂಜೆ, ಬೀದರ

Latest News

ಕವನ : ಹೃದಯ ವೀಣೆ

ಹೃದಯ ವೀಣೆಶುರುವಾಗಿದೆ ಆಸೆಗಳ ಆಂದೋಲನ ಅತಿಯಾಗಿ ಹೇಳಲಾಗದೆ ಉಳಿದಿವೆ ಅದೆಷ್ಟೋ ಮಾತುಗಳು ಮುದುರಿ ಹೋಗಿವೆ ಎದೆಯ ಗೂಡೊಳಗೆ ಬಂದೊಮ್ಮೆ ಮೀಟು ಹೃದಯ ವೀಣೆ ಕಾಯುತಿವೆ ನಿನ್ನ ಬರುವಿಗಾಗಿ ಭಾವಲತೆಗಳು ನೀ ಬಂದು ಸಂತೈಸು ಮಿಡಿಯುವ ಮನವ ಬಂದುಬಿಡೊಮ್ಮೆ ಅಂತರಂಗದ ಹೂ ಬನಕೆ ಮಧುವರಿಸಿ ಬರುವ ದುಂಬಿಯಂತೆ ಮಿಲನವಾಗಲಿ ಮಧುರ ಪ್ರೇಮಕಾವ್ಯ ಕಾಯುತಿದೆ ಮನವು ಬಾಹುಬಂಧನದ ಬೆಸುಗೆ ತವಕದ...

More Articles Like This

error: Content is protected !!
Join WhatsApp Group