ಬೆಳಗಾವಿ – ಇಲ್ಲಿನ ದಕ್ಷಿಣ ಮಹಾರಾಷ್ಟ್ರ ಶಿಕ್ಷಣ ಮಂಡಳಿಯ ಜ್ಯೋತಿ ಕೇಂದ್ರೀಯ ಶಾಲೆಯಲ್ಲಿ
ಪ್ರಾಂಶುಪಾಲರಾದ ಶ್ರೀಮತಿ ಸೋನಾಲಿ ಕಂಗ್ರಾಳ್ಕರ್ ಅವರ ಮಾರ್ಗದರ್ಶನದಲ್ಲಿ ಶಾಲಾ ವಿದ್ಯಾರ್ಥಿಗಳು, ಶಿಕ್ಷಕ ವರ್ಗದವರು ಜಂಟಿಯಾಗಿ ಆಷಾಢಿ ಏಕಾದಶಿಯ ಸಂದರ್ಭದಲ್ಲಿ ನರ್ಸರಿಯಿಂದ 1 ನೇ ತರಗತಿಯ ವಿದ್ಯಾರ್ಥಿಗಳಿಗೆ ವಾರಕರಿ ದಿಂಡಿಯನ್ನು ಆಯೋಜಿಸಿದ್ದರು.
ದಿಂಡಿಯನ್ನು ಶಾಲಾ ಆವರಣದಿಂದ ಪ್ರಾಂಶುಪಾಲರಾದ ಸೋನಾಲಿ ಕಂಗ್ರಾಳ್ಕರ ಮತ್ತು ಶಾಲಾ ಪಿ.ಆರ್.ಓ ಉರ್ಮಿಳಾ ಜಾಧವ ಉದ್ಘಾಟಿಸಿದರು.
ವಿದ್ಯಾರ್ಥಿಗಳು ವಿಠ್ಠಲ ರಖುಮಾಯಿ ಹಾಗೂ ತುಕಾರಾಂ ಮಹಾರಾಜ, ಸೋಪಾನದೇವ, ಜ್ಞಾನದೇವ, ಚೋಖಾ ಮೇಳ, ಮುಕ್ತಾಯಿ, ಜನಾಯಿ ಅವರ ವೇಷಭೂಷಣಗಳನ್ನು ಧರಿಸಿದ್ದರು.