Homeಸುದ್ದಿಗಳುಶಿಲ್ಪಕಲೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮ ಮೇಲಿದೆ - ತಹಶೀಲ್ದಾರ ದಾಸರ

ಶಿಲ್ಪಕಲೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮ ಮೇಲಿದೆ – ತಹಶೀಲ್ದಾರ ದಾಸರ

ಸಿಂದಗಿ: ಅಮರಶಿಲ್ಪಿ ಜಕಣಾಚಾರಿ ಯವರು ಅತ್ಯಂತ ನಾಜೂಕಾದ ಶಿಲ್ಪಕಲೆಯಿಂದ ಹಲವಾರು ದೇವಾಲಯಗಳನ್ನು ನಿರ್ಮಿಸಿ ದಂತಕಥೆಯಾದ ಶಿಲ್ಪಿ,ಇವರು ಕಲ್ಯಾಣಿ ಚಾಲುಕ್ಯರ ಹಾಗೂ ಹೊಯ್ಸಳರ ಶೈಲಿಯ ದೇವಾಲಯಗಳನ್ನು ಬೇಲೂರು ಹಾಗೂ ಹಳೇಬೀಡಿನಲ್ಲಿ ನಿರ್ಮಿಸಿದ್ದಾರೆ. ಇಂತೆಲ್ಲ ಶಿಲ್ಪಗಳನ್ನು ನಿರ್ಮಿಸಿ ಪ್ರವಾಸಿ ತಾಣಗಳಾಗಿ ಮಾಡಿದ್ದಾರೆ ಅವುಗಳನ್ನು ಸಂರಕ್ಷಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ತಹಶೀಲ್ದಾರ ಸಂಜೀವಕುಮಾರ ದಾಸರ ಹೇಳಿದರು.

ಪಟ್ಟಣದ ತಹಶೀಲ್ದಾರ ಕಾರ್ಯಾಲಯದಲ್ಲಿ ತಾಲೂಕಾಡಳಿತದ ವತಿಯಿಂದ ಹಮ್ಮಿಕೊಂಡ ಅಮರಶಿಲ್ಪಿ ಜಕಣಾಚಾರ್ಯರ ಜಯಂತ್ಯುತ್ಸದಲ್ಲಿ ಪೂಜೆ ಸಲ್ಲಿಸಿ ಮಾತನಾಡಿ, ತುಮಕೂರು ಜಿಲ್ಲೆಯ ಕೈದಾಳೆಯಲ್ಲಿ ಜನಿಸಿದ ಜಕಣಾಚಾರಿಯವರು ತಮ್ಮ ಜೀವನವನ್ನು ಕಲೆಗಾಗಿ ಮುಡಿಪಾಗಿಟ್ಟಿದ್ದರು. ಅವರು ತಮ್ಮ ವೃತ್ತಿ ಜೀವನವನ್ನು ನೃಪ, ಹಯರು ಆ ಪ್ರದೇಶವನ್ನು ಆಳುತ್ತಿರುವಾಗ ಪ್ರಾರಂಭಿಸಿದರು. ತಮ್ಮ ಮದುವೆಯಾದ ನಂತರವೇ ಅವರು ಕೆಲಸ ಹುಡುಕುತ್ತಾ ಮನೆಬಿಟ್ಟು ಹೊರಟು ಹಲವಾರು ದೇವಾಲಯಗಳನ್ನು ನಿರ್ಮಿಸುತ್ತ ಮುನ್ನಡೆದರು ಅಲ್ಲದೆ ತಮ್ಮ ಹೆಂಡತಿಯನ್ನು ಸಹ ತಮ್ಮ ಕೆಲಸದಲ್ಲಿ ಮರೆತರು.

ಜಕಣಾಚಾರ್ಯನ ಮಗನ ಹೆಸರು ಡಂಕಣಾಚಾರ್ಯ. ಡಂಕಣಾಚಾರ್ಯನು ಆತನ ತಂದೆಯನ್ನು ಹುಡುಕುವುದಕ್ಕಾಗಿ ತಾನೇ ಒಬ್ಬ ಪ್ರಖ್ಯಾತ ಶಿಲ್ಪಿಯಾಗಿ ಬೆಳೆದನು. ಬೇಲೂರಿನಲ್ಲಿ ಅವನು ಶಿಲ್ಪಿಯ ಕೆಲಸಕ್ಕಾಗಿ ನೇಮಿಸಲ್ಪಟ್ಟನು, ಮಹಾನ್ ಶಿಲ್ಪಿ ಜಕಣಾಚಾರಿ ನಿರ್ಮಿಸಿದ ಒಂದು ಶಿಲ್ಪದಲ್ಲಿ ಒಂದು ಒಡಕನ್ನು ಆತನು ಕಂಡನು. ಇದರಿಂದ ಕೋಪಗೊಂಡ ಜಕಣಾಚಾರ್ಯರು ಅವರು ಕೆತ್ತಿದ ಶಿಲ್ಪದಲ್ಲಿ ದೋಷವಿದ್ದರೆ ತನ್ನ ಬಲಗೈಯನ್ನು ಕತ್ತರಿಸಿಕೊಳ್ಳುವುದಾಗಿ ಆ ಯುವ ಶಿಲ್ಪಿಗೆ ಮಾತನ್ನಿತ್ತರು. ಆ ಶಿಲ್ಪವನ್ನು ಪರೀಕ್ಷಿಸಿದ ನಂತರ, ಆ ದೋಷವಿರುವುದು ನಿಜವೆಂದು ಗೊತ್ತಾಗಿ ಜಕಣಾಚಾರ್ಯರು ತಮ್ಮ ವಾಗ್ದಾನದಂತೆ ತಮ್ಮ ಬಲಗೈಯನ್ನು ಕತ್ತರಿಸಿಕೊಂಡರು. ಕೊನೆಯಲ್ಲಿ, ಆ ಇಬ್ಬರು ಶಿಲ್ಪಿಗಳು ತಂದೆ, ಮಗನೆಂಬ ಸಂಬಂಧವನ್ನು ತಿಳಿದುಕೊಂಡರು.

ಜಕಣಾಚಾರ್ಯರು ತಮ್ಮ ಹುಟ್ಟೂರಾದ ಕ್ರೀಡಾಪುರದಲ್ಲಿ ಚನ್ನಕೇಶವ ದೇವಾಲಯವನ್ನು ನಿರ್ಮಿಸುವ ಆಶೆ ಹೊಂದಿದರು. ಇದು ಮುಗಿದ ನಂತರ, ಅವರ ಬಲಗೈಯನ್ನು ದೇವರು ಕರುಣಿಸಿದನೆಂದು ದಂತಕಥೆ ಹೇಳುತ್ತದೆ. ಈ ಘಟನೆಯನ್ನು ಸಂತೋಷದಿಂದ ಆಚರಿಸಿದ ನಂತರ ಈ ಕ್ರೀಡಾಪುರ ಊರಿಗೆ ಕೈದಾಳ ಎಂಬ ಹೆಸರು ಬಂತು ಎನ್ನಲಾಗಿದೆ. ಅದಕ್ಕಾಗಿ ಕೈ ಎನ್ನುವ ಪದವನ್ನು ಇಲ್ಲಿ ಬಳಸಲಾಗಿದೆ. ಕರ್ನಾಟಕ ಸರ್ಕಾರವು ೧೯೯೫ರಿಂದ ಪ್ರತಿವರ್ಷ ಶಿಲ್ಪಕಲೆಗೆ ಅತಿ ಹೆಚ್ಚಿನ ಕೊಡುಗೆ ನೀಡುವ ಕಲೆಗಾರನಿಗೆ ಜಕಣಾಚಾರಿ ಪ್ರಶಸ್ತಿ ನೀಡಿ ಗೌರವಿಸುತ್ತದೆ ಅವರು ನೀಡಿದ ಕೊಡುಗೆಗೆಗಳನ್ನು ಉಳಿಸಿ ಬೆಳೆಸುವ ಕಾರ್ಯದಲ್ಲಿ ತೊಡಗಿದ್ದಾಗಬೇಕಾಗಿದೆ ಎಂದರು.

ಈ ಸಂದರ್ಭದಲ್ಲಿ ಶಿರಸ್ತೆದಾರ ಸುರೇಶ ಮ್ಯಾಗೇರಿ, ನಿಕೀಲ ಖಾನಾಪುರ, ಎ.ಎಸ್.ಬಾಗೇವಾಡಿ, ಗುರಪ್ಪ ರಡ್ಡಿ ಸೇರಿದಂತೆ ಸಿಬ್ಬಂದಿ ಹಾಗೂ ವಿಶ್ವಕರ್ಮ ಸಮಾಜದ ಅಧ್ಯಕ್ಷ ದಯಾನಂದ ಪತ್ತಾರ, ಮೋಹನ ಪತ್ತಾರ, ಶಾಮ ಪತ್ತಾರ, ಸಿದ್ದಲಿಂಗ ಪತ್ತಾರ, ನಾಗು ಪತ್ತಾರ, ಚಿದಾನಂದ ಆಚಾರ್ಯ, ಉಮೇಶ ಯರನಾಳ ಸೇರಿದಂತೆ ಹಲವರು ಇದ್ದರು.

RELATED ARTICLES

Most Popular

error: Content is protected !!
Join WhatsApp Group