ಭಾರತ ಮಾತೆಗೆ ನಾವೆಲ್ಲರೂ ಧನ್ಯರಾಗಿರಬೇಕು

Must Read

ಭಾರತ ದೇಶದಲ್ಲಿ ಜನಿಸಿದ ನಾವೆಲ್ಲರೂ ನಿಜವಾಗಿ ಭಾಗ್ಯಶಾಲಿಗಳು. ಪ್ರಜಾಪ್ರಭುತ್ವದ ಆಡಳಿತದಲ್ಲಿ ಇಂದು ಜಗತ್ತಿನಲ್ಲಿಯೇ ಅತ್ಯಂತ ಯಶಸ್ವಿಯಾಗಿ ಮುನ್ನಡೆಯನ್ನು ಸಾಧಿಸಿ ಅಭಿವೃದ್ಧಿ ಪಥದಲ್ಲಿ ಸಾಗುತ್ತಿರುವ ಭವ್ಯ ಭಾರತ ದೇಶದ ಪ್ರಜೆಗಳು ನಾವೆಲ್ಲಾ ಎಂದು ಹೇಳಲು ಹೆಮ್ಮೆ ಎನಿಸುತ್ತದೆ ಎಂದು ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಶ್ರೀಮತಿ ಮಂಗಲಾ ಶ್ರೀ. ಮೆಟಗುಡ್ಡ ಮಾತನಾಡಿದರು.

ಬೆಳಗಾವಿಯ ನೆಹರು ನಗರದಲ್ಲಿರುವ ಕನ್ನಡ ಭವನದಲ್ಲಿ ಧ್ವಜಾ ರೋಹಣವನ್ನು ನೆರವೇರಿಸಿ ೭೫ ನೇ ಗಣರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸ್ವಾತಂತ್ರ್ಯ ಪೂರ್ವದಲ್ಲಿ ಹಂಚಿ ಹೋಗಿದ್ದ ರಾಜ್ಯದ ಅನೇಕ ಭಾಗಗಳನ್ನು ಒಂದುಗೂಡಿಸಿ ಭಾಷಾವಾರು ಪ್ರಾಂತಗಳನ್ನು ರಚನೆ ಮಾಡುವುದು ಅಷ್ಟು ಸುಲಭದ ಕೆಲಸವಾಗಿರಲಿಲ್ಲ. ಅಂತಹ ಕಠಿಣ ಜವಾಬ್ದಾರಿಯನ್ನು ನಿಭಾಯಿಸಿ ಒಳ್ಳೆಯ ಪ್ರಜಾಪ್ರಭುತ್ವದ ಆಡಳಿತವನ್ನು ನಮಗೆ ಕೊಟ್ಟಿದ್ದಾರೆ. ಅದಕ್ಕಾಗಿ ನಾವು ಸ್ವಾತಂತ್ರ್ಯ ಹೋರಾಟಗಾರರಿಗೆ ಮತ್ತು ಸಂವಿಧಾನಕ್ಕೆ ಕೃತಜ್ಞರಾಗಿರಬೇಕು ಎಂದರು. 

ಕಾರ್ಯದರ್ಶಿ ಎಮ್ ವಾಯ್ ಮೆಣಸಿನಕಾಯಿಯವರು ಧನ್ಯವಾದಗಳನ್ನು ಸಲ್ಲಿಸಿದರು. ಸಂಘಟನಾ ಕಾರ್ಯದರ್ಶಿ ವೀರಭದ್ರ ಅಂಗಡಿ ಇವರು ನಿರೂಪಿಸಿದರು. ಸಾಹಿತ್ಯ ಪರಿಷತ್ತಿನ ಗೌರವ ಕೋಶಾಧ್ಯಕ್ಷರಾದ ಶ್ರೀಮತಿ ರತ್ನಪ್ರಭಾ ಬೆಲ್ಲದ, ಹಿರಿಯ ಸಾಹಿತಿಗಳಾದ ಯ ರು ಪಾಟೀಲ,  ಪ್ರವೀಣ ಕಡಬಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಹಿಳಾ ಪ್ರತಿನಿಧಿಗಳಾದ ಶ್ರೀಮತಿ ಹೇಮಾವತಿ ಸೊನೋಳಿ, ಪೂಜಾರಿ, ಜ್ಯೋತಿ ಬಾದಾಮಿ, ಗೀತಾ ಶೆಟ್ಟರ್, ಪ್ರತಿಭಾ ಕಳ್ಳಿಮಠ, ಮುಂತಾದ ಅನೇಕ ಕನ್ನಡಾಭಿಮಾನಿಗಳು ಭಾಗವಹಿಸಿದ್ದರು. ರಾಷ್ಟ್ರಧ್ವಜವನ್ನು ಹಿಡಿದು ಕೊಂಡು ನೆಹರು ನಗರದಲ್ಲಿ ಪಥ ಸಂಚಲನ ನಡೆಸಲಾಯಿತು.

Latest News

ಕವನ : ಪ್ರೀತಿಸಿದ ತಪ್ಪಿಗೆ

ಪ್ರೀತಿಸಿದ ತಪ್ಪಿಗೆ... ಇಂದು ಈ ಮುಸ್ಸಂಜೆಯಲಿ.... ಯಾರೋ ಎಲ್ಲೋ ಪ್ರೀತಿಸುವ ಹೃದಯಕೆ ನೋವುಣಿಸಿರಬೇಕು... ಅಕಾಲದಲ್ಲಿ ಆಕಾಶ ಆರ್ಭಟಿಸಿ ಭೋರ್ಗರೆದು ಹೀಗೆ ಸುರಿಯಬೇಕಾದರೆ... ಸದ್ದಿಲ್ಲದೇ ಒಡೆದ ಎದೆ ತುಣುಕುಗಳು ಮುಗಿಲಲಿ ಶೋಕಗೀತೆ ನುಡಿಸುತಿವೆ....ಯಾರೋ ಎಲ್ಲೋ ಹೂವಂತ ಮನಸನು ಮಾತಿನ ಮುಳ್ಳುಗಳಿಂದ ಚುಚ್ಚಿ ನೋಯಿಸಿರಬೇಕು... ಹೆಪ್ಪುಗಟ್ಟಿದ ದುಃಖ ಕಪ್ಪು ಮೋಡದ ಒಡಲ ಬಗೆದು...

More Articles Like This

error: Content is protected !!
Join WhatsApp Group