ಸಿಂದಗಿ: ಉಪ ಚುನಾವಣೆ ಪ್ರಚಾರದ ಸಂದರ್ಭದಲ್ಲಿ ತಮಗೆ ಕೊಟ್ಟ ಮಾತಿನಂತೆ ಕೊಕಟನೂರ ಗ್ರಾಮದಿಂದ ಬ್ಯಾಕೊಡ ಗ್ರಾಮಕ್ಕೆ ಹೋಗಲು ಸುಸಜ್ಜಿತವಾದ ರಸ್ತೆ ಡಾಂಬರಿಕರಣ ಕೆಲವೇ ದಿನಗಳಲ್ಲಿ ಮಾಡುತ್ತೇನೆ ಎಂದು ನೂತನ ಶಾಸಕ ರಮೇಶ್ ಭೂಸನೂರ ಭರವಸೆ ನೀಡಿದರು.
ಸೋಮವಾರ ತಾಲೂಕಿನ ಕೊಕಟನೂರ ಗ್ರಾಮದ ಶ್ರೀ ಹಿರೋಡೇಶ್ವರ ದೇವಸ್ಥಾನ ಜಾತ್ರಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕ್ಷೇತ್ರದ ಜನತೆ ನನ್ನ ಮೇಲೆ ಅತಿಯಾದ ನಂಬಿಕೆ ಇಟ್ಟು ನಿರೀಕ್ಷೆಗಿಂತಲೂ ಹೆಚ್ಚಿನ ಮತಗಳನ್ನು ನೀಡಿ ಆಶೀರ್ವಾದ ಮಾಡಿದ್ದೀರಿ ಆ ಭರವಸೆ ಹುಸಿಯಾಗದಂತೆ ನಡೆದುಕೊಂಡು ರಸ್ತೆ ಡಾಂಬರಿಕರಣ ಅಷ್ಟೇ ಅಲ್ಲ ನಿಮ್ಮೂರಿನ ಇನ್ನಿತರ ಹತ್ತು ಹಲವಾರು ಕುಂದು ಕೊರತೆಗಳನ್ನು ಆಲಿಸಿ ಸರಕಾರದ ಯೋಜನೆಗಳನ್ನು ತಮ್ಮ ಮನೆ ಬಾಗಿಲಿಗೆ ತಲುಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ರವಿಕಾಂತ ನಾಯ್ಕೋಡಿ, ಮಲ್ಲನಗೌಡ ಡಂಬಳ, ನಾಗಪ್ಪ ಶಿವೂರ, ಮಲ್ಲು ಬಗಲಿ, ಪೈಗಂಬರ್ ಮುಲ್ಲಾ, ಮಾಳು ಬಾಗೇವಾಡಿ ಸಂತೋಷ ಬಾಗೇವಾಡಿ ಬೀರು ಕನ್ನೂರ, ಜಟ್ಟೇಪ್ಪ ಹರನಾಳ, ಕಾಸಪ್ಪ ಬಡಿಗೇರ ಇನ್ನೀತರರು ಉಪಸ್ಥಿತರಿದ್ದರು.