Homeಸುದ್ದಿಗಳುಹಳ್ಳೂರ, ಕಪ್ಪಲಗುದ್ದಿ, ಶಿವಾಪೂರ ಗ್ರಾಮಗಳಲ್ಲಿ ದಿ.17 ರಿಂದ ವಾರ ಹಿಡಿಯುವುದು ಪ್ರಾರಂಭ

ಹಳ್ಳೂರ, ಕಪ್ಪಲಗುದ್ದಿ, ಶಿವಾಪೂರ ಗ್ರಾಮಗಳಲ್ಲಿ ದಿ.17 ರಿಂದ ವಾರ ಹಿಡಿಯುವುದು ಪ್ರಾರಂಭ

spot_img

ಹಳ್ಳೂರ – ಗ್ರಾಮದ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಮಂಗಳವಾರದಂದು ಹಳ್ಳೂರ, ಕಪ್ಪಲಗುದ್ಧಿ, ಶಿವಾಪೂರ ಗ್ರಾಮದ ಹಿರಿಯರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಸಹ ಮಳೆ ಬೆಳೆ ಚೆನ್ನಾಗಿ ಆಗಿ ಜನರಿಗೆ ಸುಖ ಸಮೃದ್ಧಿ ಆ ದೇವರು ಕರುಣಿಸಲೆಂದು ವಾರ ಹಿಡಿಯಲು ತೀರ್ಮಾನಿಸಿದ್ದಾರೆ.

ಮೊದಲನೇ ವಾರ ಮಂಗಳವಾರ ದಿ 17/6/2025 ಪ್ರಾರಂಭ ಮಂಗಳವಾರ ,ಶುಕ್ರವಾರ ಹಿಡಿದು ಕೊನೆಯದು ದಿ. 01/7/ 2025 ಮಂಗಳವಾರ ರಂದು ಮುಕ್ತಾಯಗೊಳ್ಳುತ್ತದೆ. ಹಿಂದಿನ ಸಾಂಪ್ರದಾಯಿಕ ಪದ್ಧತಿ ಅಳವಡಿಸಿಕೊಂಡು ಕಟ್ಟು ನಿಟ್ಟಾಗಿ ನಿಯಮಗಳನ್ನು ಪಾಲಿಸಿ ದೇವರ ಪ್ರೀತಿಗೆ ಪಾತ್ರರಾಗಬೇಕೆಂದು ಗುರು ಹಿರಿಯರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಈ ಸಮಯದಲ್ಲಿ ಹಳ್ಳೂರ, ಕಪ್ಪಲಗುದ್ದಿ, ಶಿವಾಪೂರ ಗ್ರಾಮದ ಗುರುಹಿರಿಯರು, ಅರ್ಚಕರು ಉಪಸ್ಥಿತರಿದ್ದರು.

RELATED ARTICLES

Most Popular

error: Content is protected !!
Join WhatsApp Group