ಧಾರವಾಡ – ಧಾರವಾಡ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಶ್ರೀ ಸಿದ್ಧರಾಮೇಶ್ವರ ಪ್ರೌಢ ಶಾಲೆ ಕಲ್ಯಾಣ ನಗರ ಧಾರವಾಡ ಇವರ ಸಂಯುಕ್ತಾಶ್ರಯದಲ್ಲಿ ಸಾಪ್ತಾಹಿಕ ಸಾಹಿತ್ಯ ಮಾಲಿಕೆ 23 ರ ಅಡಿಯಲ್ಲಿ ಉಪನ್ಯಾಸ ಕಾರ್ಯಕ್ರಮ ನೆರವೇರಿಸಲಾಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಎಚ್ ಎಸ್ ಬಡಿಗೇರ ಇವರು ಮಾಡಿ, ವಿದ್ಯಾರ್ಥಿಗಳಿಗೆ ಅಧ್ಯಯನದ ಮಹತ್ವ, ಸಮಯ ಪರಿಪಾಲನೆ, ವೈಯಕ್ತಿಕ ವೇಳಾಪಟ್ಟಿ ಹಾಕಿಕೊಳ್ಳಿ. ಪ್ರಸಿದ್ಧ ಪ್ರಭಾವಿ ವ್ಯಕ್ತಿಗಳ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದು,ಪ್ರಭಾವಿತರಾಗಿ ಉನ್ನತ ಮಟ್ಟದಲ್ಲಿ ಹೆಸರು ಮಾಡಿ ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ನರಸಪ್ಪ ಭಜಂತ್ರಿಯವರು ಇದೊಂದು ಉತ್ತಮ ಶ್ಲಾಘನೀಯ ಕಾರ್ಯಕ್ರಮ ಆಯೋಜನೆ ಮಾಡಿರುವಿರಿ ಧನ್ಯವಾದಗಳು ಇದರ ಉಪಯೋಗವನ್ನು ವಿದ್ಯಾರ್ಥಿಗಳು ಬಳಸಿಕೊಳ್ಳಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮಹಾಂತೇಶ್ ನರೇಗಲ್ ಅಧ್ಯಕ್ಷರು ಧಾರವಾಡ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಇವರು, ಮಹಾಪ್ರಸಾದಿ ಕಾಯಕಯೋಗಿ ಮನ್ನಿರಂಜನ ಪ್ರಣಮ ಸ್ವರೂಪಿ ಡಾ ಶಿವಬಸವ ಮಹಾಸ್ವಾಮಿಗಳು ರುದ್ರಾಕ್ಷಿಮಠ ನಾಗನೂರ ಬೆಳಗಾವಿ ಇವರ ಪರಿಚಯವನ್ನು ಮಾಡುತ್ತ ಇಂದು ಹೆಮ್ಮರವಾಗಿ ಬೆಳೆದಿರುವ ಪ್ರಸಾದ ನಿಲಯದಲ್ಲಿ ಜ್ಞಾನಪೀಠ ಪುರಸ್ಕೃತರು ಆದ ಡಾ. ಚಂದ್ರಶೇಖರ ಕಂಬಾರ ಹಾಗೂ ಸೃಜನಶೀಲ ಸಾಹಿತಿಗಳು ಆದ ಬಸವರಾಜ ಕಟ್ಟೀಮನಿ ಮಹಾನ್ ವ್ಯಕ್ತಿಗಳು ಪ್ರಸಾದವನುಂಡು ಪ್ರಸಿದ್ಧರಾಗಿದ್ದಾರೆ.. ನಿಮ್ಮಲ್ಲಿ ಅಂತಹ ಪ್ರತಿಭೆಗಳು ಜನಿಸಲಿ ಎಂಬುದೇ ನಮ್ಮೆಲ್ಲರ ಆಶಯವಾಗಿದೆ ಎಂದರು.
ಬಿ ಇಡಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಗಿರಿಜಾ ಹಿರೇಮಠ ವೇದಿಕೆಯ ಮೇಲೆ ಇದ್ದರು ಮುಖ್ಯಾಧ್ಯಾಪಕರಾದ ನಾಗಯ್ಯ ಹಿರೇಮಠ ಸ್ವಾಗತಿಸಿದರು.ಶ್ರೀಮತಿ ಕವಿತಾ ಬಳ್ಳಾರಿ ನಿರೂಪಿಸಿದರು.ಮಮತಾ ಹುಲ್ಲೂರ ವಂದಿಸಿದರು.
ನೈತಿಕ ಬಿದರಿ ವಚನ ವಾಚನ ಮಾಡಿದನು ರಾಜೇಶ್ವರಿ ಚನ್ನೋಜಿ ಪುಷ್ಪಾರ್ಪಣೆ ನೆರವೇರಿಸಿದರು, ರೆಹನಾ ಇವರು ಬಹುಮಾನ ವಿತರಣೆ ಕಾರ್ಯ ನಿರ್ವಹಿಸಿದರು, ಕಾರ್ಯಕ್ರಮದಲ್ಲಿ ರವಿ ಮಡಿವಾಳರ, ಬಿ. ಇಡಿ ಪ್ರಶಿಕ್ಷಣಾರ್ಥಿಗಳು,ಹಾಜರಿದ್ದರು.