spot_img
spot_img

ವಾರದ ಸತ್ಸಂಗ ಮತ್ತು ಉಚಿತ ಅಕ್ಯುಪ್ರೆಶರ್ ಮತ್ತು ಮ್ಯಾಗ್ನೆಟಿಕ್ ಚಿಕಿತ್ಸಾ ಶಿಬಿರದ ಉದ್ಘಾಟನೆ 

Must Read

spot_img
- Advertisement -

ರವಿವಾರ ದಿ. 4 ರಂದು ಬೆಳಗಾವಿಯ ಫ. ಗು. ಹಳಕಟ್ಟಿ ಭವನದಲ್ಲಿ ಲಿಂಗಾಯತ ಸಂಘಟನೆ ವತಿಯಿಂದ ತುಮಕೂರಿನ ಕರ್ನಾಟಕ ಆಯಸ್ಕಾಂತ ಆರೋಗ್ಯ ಸೇವಾ ಸಂಸ್ಥೆ ಇವರ ಸಹಯೋಗದಲ್ಲಿ 20 ದಿನಗಳ ಉಚಿತ ಅಕ್ಯುಪ್ರೆಶರ್ ಮ್ಯಾಗ್ನೆಟಿಕ್ ಚಿಕಿತ್ಸಾ ಶಿಬಿರ ಉದ್ಘಾಟಿಸಲಾಯಿತು.

ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಶಿಬಿರ ಉದ್ಘಾಟಿಸಿ ಮಾತನಾಡಿದ ಬೆಳಗಾವಿಯ ಕಾರಂಜಿಮಠದ ಗುರುಸಿದ್ಧ ಮಹಾಸ್ವಾಮಿಗಳು ಈಗಿನ ಆಧುನಿಕ ಚಿಕಿತ್ಸಾ ವಿಧಾನದಿಂದ ನಾವು ಪ್ರಾಚೀನ ಚಿಕಿತ್ಸೆಗೆ ಮರಳುತ್ತಿದ್ದೇವೆ. ಆಯುರ್ವೇದದಲ್ಲಿ ಒಂದು ದೊಡ್ಡ ಶಕ್ತಿ ಇದೆ. ನಮ್ಮ ಆಹಾರ ವಿಧಾನಗಳಲ್ಲೇ ರೋಗನಿರೋಧಕ ಶಕ್ತಿ ಇದೆ, ಆ ನಿಟ್ಟಿನಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸಲು ನಮ್ಮ ಆರೋಗ್ಯ ಪದ್ಧತಿಯನ್ನು ವ್ಯವಸ್ಥಿತಗೊಳಿಸಬೇಕು. ಮ್ಯಾಗ್ನೆಟಿಕ್ ಚಿಕಿತ್ಸೆ ನಮ್ಮಲ್ಲಿರುವ ವಿವಿಧ ರೋಗಗಳನ್ನು ಬೇರುಸಹಿತ ಕಿತ್ತೆಸೆಯುವ ಶಕ್ತಿ ಹೊಂದಿದೆ. ಈ ಶಿಬಿರದ ಅನುಕೂಲವನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಶಿಬಿರದ ಮುಖ್ಯಸ್ಥ ಡಾ. ಡಿ ಕೆ ಶ್ರೀನಿವಾಸ ಮಾತನಾಡಿ ಆಯಸ್ಕಾಂತ ವಿಧಾನದ ಮೂಲಕ ಮಂಡಿನೋವು, ನರಗಳ ತೊಂದರೆ ವಾತ, ಪಿತ್ತ,ತಲೆನೋವು, ಮಧುಮೇಹ ಮುಂತಾದ ರೋಗಗಳಿಗೆ ನಿಧಾನವಾಗಿಯಾದರೂ ಶಾಶ್ವತ ಪರಿಹಾರ ನೀಡುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತದೆ. 20 ದಿನಗಳ ಶಿಬಿರದಲ್ಲಿ ಅದರ ಪ್ರಯೋಜನ ಪಡೆಯುವುದರ ಜೊತೆಗೆ ಪರಿಣಾಮ ಗಮನಿಸಬೇಕು ಎಂದು ಶಿಬಿರದ ಕುರಿತು ವಿವರಣೆ ನೀಡಿದರು.

- Advertisement -

ಮುಖ್ಯ ಅತಿಥಿಗಳಾಗಿ ನಗರಸೇವಕರಾದ ರಾಜಶೇಖರ ದೋಣಿ ಮತ್ತು ಹನುಮಂತ ಕೊಂಗಾಲಿ,ಆನಂದ ಕಕಿ೯, ಆಗಮಿಸಿದ್ದರು. ಲಿಂಗಾಯತ ಸಂಘಟನೆ ಅಧ್ಯಕ್ಷ ಈರಣ್ಣ ದೇಯನ್ನವರ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮಲಗೌಡ ಪಾಟೀಲ ದಾಸೋಹ ಸಲ್ಲಿಸಿದರು ವಿ. ಕೆ. ಪಾಟೀಲ, ಸುನೀಲ ಸಾಣಿಕೊಪ್ಪ,ಶಂಕರ ಗುಡಸ, ಶಂಕರ ಗುಡಗನಟ್ಟಿ, ಭರಮಪ್ಪ ಜೇವಣಿ, ಶಿವಾನಂದ ತಲ್ಲೂರ , ಎಂ ವೈ ಮೆಣಸಿನಕಾಯಿ, ಬಸವರಾಜ ಬಿಜ್ಜರಗಿ,ಶೇಖರ ವಾಲಿ ಇಟಗಿ, ಶಿವಾನಂದ ಲಾಳಸಂಗಿ, ಬಸವರಾಜ ಚೆಟ್ಟರ, ಶಿವಾನಂದ ನಾಯಕ, ಬಾಬು ತಿಗಡಿ, ಆನಂದ ಕರ್ಕಿ, ಸುವರ್ಣ ತಿಗಡಿ, ಸುವರ್ಣ ಗುಡಸ, ಶಾಂತಮ್ಮ ತಿಗಡಿ, ಲಲಿತಾ ಸಂಬಣ್ಣವರ ಉಪಸ್ಥಿತರಿದ್ದರು. ಸುರೇಶ ನರಗುಂದ ನಿರೂಪಿಸಿದರು ಕೊನೆಯಲ್ಲಿ ಸಂಗಮೇಶ ಅರಳಿ ವಂದಿಸಿದರು.

- Advertisement -
- Advertisement -

Latest News

೧೫ ನೇ ಅಂತರ ತೋಟಗಾರಿಕೆ ಮಹಾವಿದ್ಯಾಲಯಗಳ ಅಥ್ಲೆಟಿಕ್ಸ ಕ್ರೀಡಾಕೂಟ 

ದಾನವೀರ ಶ್ರೀ ಶಿರಸಂಗಿ ಲಿಂಗರಾಜ ದೇಸಾಯಿ, ಆಹಾರ ಅಭಿಯಂತ್ರಿಕ ತೋಟಗಾರಿಕೆ ಮಹಾವಿದ್ಯಾಲಯ, ದೇವಿಹೊಸುರ, ಹಾವೇರಿಯಲ್ಲಿ ನಡೆದ ೧೫ ನೇ ಅಂತರ ತೋಟಗಾರಿಕೆ ಮಹಾವಿದ್ಯಾಲಯಗಳ ಅಥ್ಲೇಟಿಕ್ಸ ಕ್ರೀಡಾ...
- Advertisement -

More Articles Like This

- Advertisement -
close
error: Content is protected !!
Join WhatsApp Group