spot_img
spot_img

ಜನರು ನೋಡುವುದು ಹಣವನ್ನಷ್ಟೇ, ಅದರ ಹಿಂದಿನ ಕರ್ಮ ಋಣವನ್ನಲ್ಲ

Must Read

spot_img
- Advertisement -

ಹಿಂದೆ ಆಸ್ತಿಯಲ್ಲಿ ಹೆಣ್ಣಿಗೆ ಪಾಲು ಕೊಡುತ್ತಿರಲಿಲ್ಲ. ಈಗ ಸಮಪಾಲು ಸಿಗುವ ಹಾಗೆ ಕಾನೂನು ಇದೆ. ಕೆಲವೆಡೆ ಹೆಣ್ಣಿಗೆ ಮಾತ್ರ ಆಸ್ತಿ ಸಿಗುವ ಹಾಗೆ ಕೆಲವರಷ್ಟೆ ಮಾಡಿಕೊಂಡಿದ್ದಾರೆ. ಉದಾಹರಣೆಗೆ ಕೇರಳದಲ್ಲಿದೆ. ಇಲ್ಲಿ ಆಸ್ತಿಯಿಲ್ಲದೆ ಜೀವನ ನಡೆಸಲಾಗದೆ? ಎನ್ನುವ ಪ್ರಶ್ನೆ ಜೊತೆಗೆ ಆಸ್ತಿಯನ್ನು ಹೇಗೆ ಬಳಸಿದರೆ ಉತ್ತಮ ಜೀವನವಿರುತ್ತದೆ ಎನ್ನುವುದನ್ನು ಗಮನಿಸಬೇಕಿದೆ.

ಇತ್ತೀಚೆಗೆ ಆಸ್ತಿ ಪಡೆದವರೆಲ್ಲರೂ ಸಂತೋಷ ತೃಪ್ತಿ, ಮುಕ್ತಿಯ ಕಡೆಗೆ ನಡೆಯಲಾಗುತ್ತಿಲ್ಲ. ಸಮಸ್ಯೆಗಳನ್ನು ತಲೆಯ ಮೇಲೆ ಹೊತ್ತುಕೊಂಡು ಮಾಡಬಾರದ ಸಾಲ ಮಾಡಿ ಅದರ ಸುಳಿಯಲ್ಲಿ ಸಿಲುಕಿದವರಿಗೆ ಆಸ್ತಿಯ ಹಿಂದಿದ್ದ ಧರ್ಮ ಕರ್ಮ, ಋಣದ ಬಗ್ಗೆ ತಿಳಿದಾಗಲೆ ಮುಕ್ತಿ ಕಡೆಗೆ ನಡೆಯಬಹುದೆನ್ನಬಹುದು. ಆಧ್ಯಾತ್ಮದ ವಿಚಾರಗಳನ್ನು ನಾವು ಪುರಾಣ, ಇತಿಹಾಸದಿಂದ ತಿಳಿಯಲು ಕಷ್ಟವಿದೆ.

ಕಾರಣ ಅಲ್ಲಿ ಕೇವಲ ರಾಜಕೀಯ ಇದ್ದು ರಾಜರ ಕಾಲದಲ್ಲಿದ್ದ ರಾಜ್ಯವಿಸ್ತರಣೆ, ಸಾಮಾಜಿಕ ನ್ಯಾಯ, ಪ್ರಜೆಗಳ ಜವಾಬ್ದಾರಿ ಒಬ್ಬ ರಾಜನ ಪಾಲಿಗೆ ಬರುವ ಅಧಿಕಾರ,ಆಸ್ತಿಯ ಮೇಲಿತ್ತು. ಹೀಗಾಗಿ ಅಲ್ಲಿ ತನ್ನ ರಾಜಧರ್ಮದ ಪ್ರಕಾರ ರಾಜಕೀಯದಿಂದ ಮುಂದೆ ನಡೆಯುವುದಾಗಿತ್ತು. ಆದರೆ, ಇಂದಿನ ಪ್ರಜಾಪ್ರಭುತ್ವದಲ್ಲಿ ರಾಜಕಾರಣಿಗಳು ತಮ್ಮ ಆಸ್ತಿಯನ್ನು ಪ್ರಜೆಗಳ ಸುಖಕ್ಕಾಗಿ ಬಳಸಿಕೊಳ್ಳಲು ಸಾಧ್ಯವೆ? ಕೆಲವರು ಆಸ್ತಿ ಮಾರಿ ರಾಜಕೀಯಕ್ಕೆ ಬಂದು ಪಕ್ಷಕಟ್ಟಿಕೊಂಡು ಸೇವೆ ಎನ್ನುತ್ತಿದ್ದಾರೆ.

- Advertisement -

ಆದರೆ ಇಲ್ಲಿ ಸೇವೆಗೆ ಸಾತ್ವಿಕ ಸಂಪಾದನೆಯ ಅಗತ್ಯವಿತ್ತು.ಇದು ಸಾಧ್ಯವಿಲ್ಲದ ಮಾತು. ಆದರೂ ಕಷ್ಟಪಟ್ಟು ರಾಜಕಾರಣಿ ಆಗೋದು ಎಲ್ಲರಿಗೂ ಸಾಧ್ಯವಿಲ್ಲ. ಆದರೆ,ಅವರನ್ನು ದಾರಿ ತಪ್ಪಿಸುವ ಮಧ್ಯವರ್ತಿಗಳಿಂದ ದೇಶ ಸಾಲದ ಹೊರೆ ಹೊತ್ತಿದೆ. ಪ್ರಜೆಗಳಲ್ಲಿ ಸಾಕಷ್ಟು ಆಸ್ತಿಪಾಸ್ತಿ ಇದ್ದರೂ ದೇಶದ ಋಣ ತೀರಿಸಲು ಸಾಧ್ಯವಾಗದ ಅಜ್ಞಾನ, ಅಧರ್ಮ, ಅಸತ್ಯ ಒಳಗಿದೆ. ಹೀಗಾಗಿ ಪ್ರಜೆಗಳ ಸಮಸ್ಯೆಗಳಿಗೆ ಪರಿಹಾರ ಕೊಡಲಾಗದ ಪರಿಸ್ಥಿತಿ ಸರ್ಕಾರದ ಮುಂದಿದೆ.

ಎಲ್ಲರಿಗೂ ಸರ್ಕಾರ ನನಗೇನು ಕೊಡುತ್ತದೆ? ನಮಗೇನು ಸರ್ಕಾರದಿಂದ ಲಾಭವಿದೆ? ಹೀಗೇ ಚಿಂತನೆಯಿದ್ದು ಸಮಾಜದಲ್ಲಿ ಇದ್ದರೂ ಇಲ್ಲದ ಹಾಗೆ ತಮ್ಮದೇ ಆದ ಚೌಕಟ್ಟಿನಲ್ಲಿ ರಾಜಕೀಯ ನಡೆಸಿಕೊಂಡು ಭೌತಿಕದಲ್ಲಿ ಶ್ರೀಮಂತರಾಗಿರುವವರ ಹಿಂದೆ ನಡೆದಿದ್ದಾರೆ. ಆಸ್ತಿಯಿಂದ ಮಕ್ಕಳಿಗೆ ಭವಿಷ್ಯ ವಿದೆ ಎನ್ನುವವರೊಮ್ಮೆ ಯೋಚಿಸಿ, ಆಸ್ತಿಯನ್ನು ಯಾವ ರೀತಿಯಲ್ಲಿ ಗಳಿಸಲಾಗಿದೆ? ಅವರ ಧರ್ಮ ಕಾರ್ಯ ಹೇಗಿತ್ತು? ಅವರ ಮೂಲ ಕರ್ಮ ಯಾವುದಿತ್ತು? ಇದನ್ನು ಗಳಿಸಲು ಅವರು ಶಿಷ್ಟಾಚಾರದಲ್ಲಿದ್ದರೆ ಪಡೆದವರೂ ಅದನ್ನು ಹಾಗೇ ಬಳಸಿದರೆ ಉತ್ತಮ.

ಕೇವಲ ಸ್ವಾರ್ಥಕ್ಕೆ ಬಳಸಿದರೆ ನಷ್ಟ ಕಷ್ಟ ಮುಂದೆ ಮಕ್ಕಳವರೆಗೆ ಅನುಭವಿಸಲೇಬೇಕು. ಕಾರಣವಿಷ್ಟೆ ಯಾವುದೇ ಹೆಚ್ಚಿನ ಆಸ್ತಿ ಭೂಮಿಯಮೇಲೆ ಬಿಟ್ಟು ಹೋದ ಜೀವಾತ್ಮನಿಗೆ ಮುಕ್ತಿ ಸಿಗಬೇಕಾದರೆ ಅದರ ಸದ್ಬಳಕೆಯಾಗಬೇಕು. ಹಾಗೇ ಕೊಳೆತು ಒಂದು ಮೂಲೆ ಸೇರಿದ್ದರೆ ಅದರ ಫಲ ಹೋದ ಜೀವದ ಜೊತೆಗೆ ಪಡೆದ ಜೀವವೂ ಅನುಭವಿಸಲೇಬೇಕು. ಸನ್ಮಾರ್ಗದಲ್ಲಿ ದುಡಿದು ಸಾತ್ವಿಕ ಜೀವನ ನಡೆಸಿದವರ ಆಸ್ತಿಯಂತೂ ಬಹಳ ಉತ್ತಮ ರೀತಿಯಲ್ಲಿ ಬಳಸಬೇಕಿದೆ. ಸ್ತ್ರೀಯರಿಗೆ ಆಸ್ತಿ ಪಾಲು ಹಿಂದೆ ಮಾಡುತ್ತಿರಲಿಲ್ಲ.

- Advertisement -

ಅಂದಿನ ಅವಿಭಕ್ತ ಕುಟುಂಬ ಹೆಚ್ಚು ಮಕ್ಕಳನ್ನು ಪಡೆದು,ಕಡಿಮೆ ಆಸ್ತಿಯನ್ನು ಹೊಂದಿತ್ತು. ಹೆಣ್ಣು ಇನ್ನೊಂದು ಮನೆಗೆ ಹೋದಾಗ ಅಲ್ಲಿ ಆಸ್ತಿಯನ್ನು ಸದ್ಬಳಕೆ ಮಾಡಿಕೊಳ್ಳಲು ಸಂಸ್ಕಾರ ನೀಡಿ ಅವಳನ್ನು ಗೃಹಲಕ್ಮಿ ಎನ್ನುತ್ತಿದ್ದರು. ಪುರುಷರಿಗೆ ಇಂದಿನ ಹಾಗೆ ಹೆಚ್ಚಿನ ವಿದ್ಯಾಭ್ಯಾಸ, ವಿದೇಶಿ ಜ್ಞಾನ,ವಿಜ್ಞಾನದ ಅರಿವಿಲ್ಲದ ಕಾರಣ ಇದ್ದದ್ದರಲ್ಲಿಯೇ ಪಾಲು ಮಾಡಿಕೊಂಡು ಶ್ರಮವಹಿಸಿ ದುಡಿದು ತನ್ನ ಧರ್ಮ ಕರ್ಮದಿಂದ ಜೀವನ ನಡೆಸಬೇಕಿತ್ತು.

ಹೀಗಾಗಿ ಅಂದು ಸ್ತ್ರೀ ತವರಿನ ಯಾವುದೇ ಆಸ್ತಿಯಿಲ್ಲದೆಯೋ ತನ್ನ ಜ್ಞಾನ ಬಳಸಿಕೊಂಡು ಸಂಸಾರ ನಡೆಸೋ ಮಹಾಶಕ್ತಿ ಪಡೆದಿದ್ದಳು. ಕಾಲದ ಪ್ರಭಾವದಿಂದಾಗಿ ಭೌತಿಕಾಸಕ್ತಿ ಹೆಚ್ಚಾದಂತೆ ಪುರುಷರು ಸ್ತ್ರೀ ಶಕ್ತಿಯನ್ನು ದುರ್ಬಳಕೆ ಮಾಡಿಕೊಂಡು ತವರಿನ ಆಸ್ತಿ ತರದ ಸ್ತ್ರೀ ಗೆ ಹಿಂಸೆ ನೀಡುವ ಹಂತಕ್ಕೆ ಬಂದ ನಂತರದ ದಿನಗಳಲ್ಲಿ ಸ್ತ್ರೀ ಗೂ ಆಸ್ತಿಯನ್ನು ಭಾಗಮಾಡುವ  ಕಾರ್ಯ ನಡೆಯಿತು.

ಆದರೆ, ಈಗ ಪರಿಸ್ಥಿತಿ ಬದಲಾಗಿದೆ. ಸ್ವಯಂ ಸ್ತ್ರೀ ಯೆ ದುಡಿದು ಸಂಪಾದಿಸಿ ಸಂಸಾರ ನಡೆಸೋ ಶಕ್ತಿ ಪಡೆದರೂ ತವರಿನ ಆಸ್ತಿಯೂ ಪಡೆಯುತ್ತಾಳೆ. ಗಂಡನ ಮನೆಯ ಆಸ್ತಿಯೂ ಪಡೆಯುತ್ತಾಳೆ. ಆದರೆ ಅವಳ ಸಮಸ್ಯೆಗಳಿಗೆ ಸಂಕಟಗಳಿಗೆ ಯಾವುದೇ ಆಸ್ತಿ,ಹಣ,ಸಂಪತ್ತು ಪರಿಹಾರ ನೀಡುತ್ತಿಲ್ಲ.ಇದು ಪುರುಷರಿಗೂ ಅನ್ವಯಿಸುತ್ತದೆ.

ಇಲ್ಲಿ ಸಮಸ್ಯೆಯ ಮೂಲವೇ ಆಸ್ತಿಯಾಗಿರುವಾಗ ಅದನ್ನು ಪಡೆದವರಿಗೆ ಸಮಸ್ಯೆ ಇದ್ದೇ ಇರುತ್ತದೆ. ಅಜ್ಜನ ಆಸ್ತಿ ಅಪ್ಪನಿಗೆ,ಅಪ್ಪನ ಆಸ್ತಿ ಮಕ್ಕಳಿಗೆ ಯಾವುದೇ ಅಡೆತಡೆ ಇಲ್ಲದೆ ವರ್ಗ ವಾಗುತ್ತದೆ. ಆದರೆ ಅಜ್ಜನ ಧರ್ಮ ಕರ್ಮ ಅಪ್ಪನಿಗೆ ತಿಳಿದಿರೋದಿಲ್ಲ. ಇನ್ನು ಮಕ್ಕಳಿಗೆ ಯಾರು ತಿಳಿಸಬೇಕು? ಭೂಮಿಯ ಋಣ ತೀರಿಸಲು ಧರ್ಮ ಕರ್ಮದಿಂದ ಮಾತ್ರ ಸಾಧ್ಯವಿದೆ. ಸ್ತ್ರೀ ಭೂಮಿಯ ಒಂದು ಶಕ್ತಿ.

ಭೌತಿಕದಲ್ಲಿ ಆಸ್ತಿ ಪಡೆದವರು ಸ್ತ್ರೀ ಶಕ್ತಿಯನ್ನು ದುರ್ಬಳಕೆ ಮಾಡಿಕೊಂಡು ಅಧರ್ಮದಿಂದ ಪರರ ಆಸ್ತಿ ಪಡೆದು ಶ್ರೀಮಂತರಾದರೂ ಅದರೊಳಗೆ ಸೇರಿಕೊಂಡ ಎಷ್ಟೋ ಪಾಪದ ಫಲ ಜೀವವೆ ಅನುಭವಿಸುತ್ತದೆ. ಇದಕ್ಕೆ ಸಹಕರಿಸಿದ ಸ್ತ್ರೀ ಗೂ ಇದು ಅಂಟುತ್ತದೆ. ಹೀಗಾಗಿ,ಸ್ತ್ರೀ ಯನ್ನು ಭೌತಿಕ ವ್ಯವಹಾರದಿಂದ ದೂರವಿಡುತ್ತಿದ್ದರು.

ವ್ಯವಹಾರವೇ ಮುಖ್ಯ ವಾಗಿ ಅಜ್ಞಾನದ ಅಹಂಕಾರ, ಸ್ವಾರ್ಥ ಹೆಚ್ಚಾಗಿ ಪುರುಷರ ರಾಜಕೀಯ ಶಕ್ತಿ ಬೆಳೆದಂತೆಲ್ಲಾ ಭೂಮಿಯ ಋಣವೂ ಹೆಚ್ಚಾಯಿತು. ಶಿವಶರಣೆಯರು ತಮ್ಮ ತಮ್ಮ ಪತಿಗೆ ಸನ್ಮಾರ್ಗದಲ್ಲಿ ನಡೆಯಲು ಹೇಗೆ ಸಹಕಾರ ನೀಡಿ ಜೀವನದ ಮುಖ್ಯ ಉದ್ದೇಶ ತಿಳಿಸಿದ್ದರೋ ಹಾಗೆ ಇಂದು ಸ್ತ್ರೀ ಶಕ್ತಿಗೆ ಆಸ್ತಿ,ಅಂತಸ್ತು, ಹಣ, ಅಧಿಕಾರ, ಹೆಸರು ಎಲ್ಲಾ ಇದ್ದರೂ ಪತಿಯನ್ನು ಸನ್ಮಾರ್ಗದಲ್ಲಿ ನಡೆಸೋ ಜ್ಞಾನವಿಲ್ಲದೆ ಭೌತಿಕದಲ್ಲಿ ಸುಖವನ್ನು ಅರಸಿಕೊಂಡು ಹೊರಗೆ ನಡೆಯುವಂತಾಗಿರೋದು ವಿರುದ್ದ ಪರಿಣಾಮ ಮನುಕುಲ ಎದುರಿಸುವಂತಾಗಿದೆ ಹಾಗಾದರೆ ಆಸ್ತಿ ಬೇಕೆ? ಬೇಡವೆ? ಜ್ಞಾನದಿಂದ ಆಸ್ತಿಯನ್ನು ಬಳಸಿದರೆ ಉತ್ತಮ. ಭೂಮಿ ಮೇಲಿರುವ ಸ್ಥಿರಾಸ್ತಿ ಹೆಚ್ಚಾದಂತೆ ಭೂಮಿ ಋಣ ಹೆಚ್ಚುತ್ತದೆ ಜೀವ ಮತ್ತೆ ಮತ್ತೆ ಭೂಮಿಗೆ ಬಂದು ಋಣ ತೀರಿಸಲೇಬೇಕು ಎನ್ನುವ ಆಧ್ಯಾತ್ಮಸತ್ಯ ಅರ್ಥ ಮಾಡಿಕೊಂಡರೆ ಪಾಲಿಗೆಬಂದದ್ದು ಪಂಚಾಮೃತ ಎಂದು ಮುಂದೆ ನಡೆಯಬಹುದು.

ಇಲ್ಲಿ ಯಾರನ್ನೂ ಮೆಚ್ಚಿಸಿ ರಾಜಕೀಯ ನಡೆಸೋದೆ ಅಜ್ಞಾನವೆಂದಾಗ ಜ್ಞಾನ ಯಾವುದು? ತನ್ನ ತಾನರಿತು ನಡೆಯೋದೆ ಜ್ಞಾನ ಹೀಗಾಗಿ ಹಿಂದಿನ ಮಹಾತ್ಮರುಗಳು ಎಲ್ಲಾ ದಾನ ಮಾಡಿ ಸ್ವತಂತ್ರರಾಗಿ ಆಧ್ಯಾತ್ಮ ಸಾಧನೆಕಡೆಗೆ ನಡೆದರು. ಈಗ ಕೊನೆ ಉಸಿರಿರುವವರೆಗೆ ಆಸ್ತಿ, ಅಂತಸ್ತು, ಅಧಿಕಾರದ ದಾಹ ಹೆಚ್ಚಾಗಿರೋದು ಕಾಲಪ್ರಭಾವವಷ್ಟೆ. ಇದಕ್ಕೆ ತಕ್ಕ ಸಹಕಾರ ಸಿಕ್ಕರೆ ಹಿಡಿಯೋರಿಲ್ಲ. ತಾಯಿ ಋಣ ತೀರಿಸಲು ತಾಯಿ ಸೇವೆ, ಭೂಮಿ ಋಣಕ್ಕೆ ಭೂಸೇವೆ.

ಗುರುಋಣ ತೀರಿಸಲು ಗುರುಸೇವೆ,ದೇಶದ ಋಣ ತೀರಿಸಲು ದೇಶಸೇವೆ, ಜನರ ಋಣ ತೀರಿಸಲು ಜನಸೇವೆ. ಸೇವೆಯನ್ನು ಹಣದಿಂದ ತೀರಿಸಬೇಕಾದರೆ ಹಣವಿರಬೇಕೆನ್ನುವ ಕಾರಣಕ್ಕಾಗಿಯೇ ಭ್ರಷ್ಟರ ಹಣ ಪಡೆದರೆ ಸೇವಾಫಲ ಭ್ರಷ್ಟಾಚಾರಕ್ಕೆ ಸಿಗುತ್ತದೆ.‌ಅದಕ್ಕೆ ಎಷ್ಟೇ ಅಪರಾಧ ಮಾಡಿದರೂ ಶಿಕ್ಷೆ ಆಗದೆ ಹೊರಬರೋದು.‌ಕಾರಣವಿಷ್ಟೆ ಜನರು ಯಾವಾಗಲೂ ಕಾಣೋದು ಹಣವನ್ನಷ್ಟೆ ಅದರ ಹಿಂದಿರುವ ಕರ್ಮ, ಋಣವನ್ನಲ್ಲ.

ಶ್ರೀಮತಿ ಅರುಣ ಉದಯಭಾಸ್ಕರ, ಬೆಂಗಳೂರು

- Advertisement -
- Advertisement -

Latest News

ಕವನಗಳು

ಬಸವನೆಂಬುದೇ ಮಂತ್ರ -------------------------------- ದಿನ ದಲಿತರ ಅಪ್ಪಿಕೊಂಡನು ನ್ಯಾಯ ನಿಷ್ಠುರಿ ಬಸವನು ಜಾತಿ ಭೇದ ತೊಡೆದು ಹಾಕಿ ಶಾಂತಿ ಸಮತೆ ಕೊಟ್ಟನು ವರ್ಗ ವರ್ಣ ಕಿತ್ತು ಹಾಕಿ ಲಿಂಗ ಭೇದವ ತೊರೆದನು ಗುಡಿ ಗೋಪುರ ಜಡ ಜಗಕೆ ಕೊನೆ...
- Advertisement -

More Articles Like This

- Advertisement -
close
error: Content is protected !!
Join WhatsApp Group