ಮಾಯಾ ನಗರಿಯಲ್ಲಿ ಮಳೆ ನಿಂತು ಹೋದ ಮೇಲೆ; ಸಿಂದಗಿ – ಹಾನಗಲ್ ನಲ್ಲಿ  ರಾಜಕೀಯ ದೊಂಬರಾಟ

Must Read

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕಳೆದ ಒಂದು ವಾರದಿಂದ ಸುರಿಯುತ್ತಿದ್ದ ಮಳೆ ಅಕ್ಟೋಬರ್ 20 ರ ಇಂದು ಕೊಂಚ ಮಟ್ಟಿಗೆ ಕಡಿಮೆಯಾಗಿತ್ತು.ಕಳೆದ ವಾರದಲ್ಲಿ ಸಿಲಿಕಾನ್ ಸಿಟಿ ಜನರು ಮಳೆ ಅಬ್ಬರಕ್ಕೆ ತತ್ತರಿಸಿ ಹೋಗಿದ್ದರು. ಕಳೆದ ವಾರದಿಂದ ದಿನ ನಿತ್ಯ ಮಾಯಾನಗರಿಯಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು ಮಳೆಗೆ ರಸ್ತೆಯಲ್ಲಿ ಹೊಳೆಯಂತೆ ನೀರು ಹರಿಯುತ್ತಾ ಇದ್ದರೆ ಇತ್ತ ಹೆಸರಿಗೆ ಮಾತ್ರ ಬಸ್ ನಿಲ್ದಾಣ ವಾಗಿರುವ ಇಟ್ಟಮಡುವಿನ ಬಸ್ ನಿಲ್ದಾಣದಲ್ಲಿ ಮಧ್ಯಾಹ್ನದ ಹೊತ್ತಿನಲ್ಲಿ ಛತ್ರಿ ಹಿಡಿದು ಪಾದಚಾರಿ ಮಾರ್ಗದಲ್ಲಿ ಬಸ್ ಕಾಯುತ್ತಾ ಕುಳಿತಿತ್ತು ಹಿರಿಯ ಜೀವ , ಗಂಟೆಗಟ್ಟಲೆ ಕಾದರೂ ಇಟ್ಟ ಮಡುವಿನಿಂದ ಎ.ಜಿ.ಎಸ್ ಲೇಔಟ್ ಕಡೆಗೆ ಬಸ್ ಮಾತ್ರ ಬರಲಿಲ್ಲ ಎಂದು ಹಿರಿಯ ಮಹಿಳೆ ಬಿ.ಎಂ.ಟಿ.ಸಿ ಗೆ ಹಿಡಿಶಾಪ ಹಾಕುತ್ತಾ ಕೂತಿದ್ದರು .

ಮಳೆಯ ಹನಿ ಜಿನುಗುತ್ತಿತ್ತು

 

ಬನಶಂಕರಿ 3 ನೆ ಹಂತದ ಜನತಾ ಬಜಾರ್ ನ ಎಸ್.ಜಿ.ಆಸ್ಪತ್ರೆಯ ಮುಂಭಾಗದಲ್ಲಿ ಅಜ್ಜ – ಮೊಮ್ಮಗಳು ರಸ್ತೆ ದಾಟಲು ಮಳೆಯ ಪ್ರಮಾಣ ಕಡಿಮೆ ಆದಾಗ ನಿಂತ ಕ್ಷಣದಲ್ಲಿ ಇಲ್ಲಿ ಒಂದು ಸರಿಯಾದ ಬಸ್ ನಿಲ್ದಾಣ ಇಲ್ಲ ಎಂದು ತಮ್ಮ ಮೊಮ್ಮಗಳಿಗೆ ಹೇಳುತ್ತಾ ಹೋಗುತ್ತಿದ್ದರೆ, ರಸ್ತೆ ಬದಿಯಲ್ಲಿ ನಿಂತಿದ್ದ ಖಾಲಿ ಗಾಡಿಗೆ ಕಟ್ಟಿದ್ದ ಎರಡು ಛತ್ರಿ ಗಳಿಂದ ಮಳೆಯ ಹನಿ ಜಿನುಗುತ್ತಿತ್ತು.

ಬಿ.ಜೆ.ಪಿ ಛತ್ರಿ

ಇವೆಲ್ಲರ ನಡುವೆ ರಾತ್ರಿ 8 ರ ಸಮಯ ಜೋರಾಗಿ ಬರುತ್ತಿದ್ದ ಮಳೆಯಲ್ಲಿ ಬಿ.ಜೆ.ಪಿ ಛತ್ರಿ ಹಿಡಿದು ಯುವಕರಿಬ್ಬರು ಸಾಗುತ್ತಾ ಇದ್ದರು. ಛತ್ರಿಯ ಮೇಲೆ ಬಿ.ಜೆ.ಪಿ ಪಕ್ಷದ ಕಮಲದ ಅಚ್ಚು ಮತ್ತು ಬಿ.ಬಿ.ಎಂ.ಪಿ ಯ ಕಚರಕನಹಳ್ಳಿ ವಾರ್ಡ್ ನ ಸದಸ್ಯರು ಹಾಗೂ 29 ನೇ ವಾರ್ಡ್ ನ ಬಿ.ಜೆ ಪಿ ಸದಸ್ಯರು ಆದ ಪದ್ಮನಾಭ್ ಅವರ ಚಿತ್ರದ ಛತ್ರಿ ಹಿಡಿದು ಹೊರಟಿದ್ದರು ಕಾಲೇಜು ವಿದ್ಯಾರ್ಥಿಗಳು. ಬಿ.ಜೆ.ಪಿ ಛತ್ರಿ ಹಿಡಿದು ಸಾಗುತ್ತಿದ್ದ ಮಕ್ಕಳ ಬಳಿ ಪತ್ರಿಕೆ ಮಾತು ಕಥೆ ನಡೆಸಿದಾಗ ಪದ್ಮನಾಭ್ ಅವರು, ನಮ್ಮ ಕುಟುಂಬಕ್ಕೆ ಕರೋನ ಸಂಕಷ್ಟ ಕಾಲದಲ್ಲಿ ಅವರೇ ಕೂಡುಗೆಯಾಗಿ ನೀಡಿದ್ದಾರೆ.

 

ಆದರಿಂದ ಈ ಛತ್ರಿ ಹಿಡಿದು ಸಾಗುತ್ತಿದ್ದೇನೆ ಎಂದು ನುಡಿದರು.
ರಾಜಕೀಯ ದೊಂಬಾರಾಟ ಇವೆಲ್ಲರ ನಡುವೆ ಸಿಂದಗಿ – ಹಾನಗಲ್ ನಲ್ಲಿ ರಾಜಕೀಯ ದೊಂಬಾರಾಟ ಮುಂದುವರಿದಿದ್ದು, ಮಾಯಾನಗರಿಯಲ್ಲಿ ಮಳೆ ಅಬ್ಬರಕ್ಕೆ ರಸ್ತೆಯಲ್ಲಿ ಇರುವ ಹೊಂಡ ಗಳು ಭರ್ತಿಯಾಗಿ ರಸ್ತೆ ತುಂಬಾ ಮೋರಿಯ ನೀರು ಹರಿದು ನಾಗರಿಕರು ರಸ್ತೆಯಲ್ಲಿ ಓಡಾಟ ಮಾಡಲು ಹಾಗೂ ವಾಹನ ಸವಾರರು ಹರಸಾಹಸ ಮಾಡಬೇಕಾಗಿದೆ.

ರಾಜರಾಜೇಶ್ವರಿ ಕಮಾನು ಬಳಿ ಹೊಂಡ

ರಾಜರಾಜೇಶ್ವರಿ ಕಮಾನು ಬಳಿ ಪ್ರಮುಖ ರಸ್ತೆಯಲ್ಲಿ ಹೊಂಡ ಬಿದ್ದಿದ್ದು ತಿಂಗಳು ಕಳೆದರೂ ಮುಚ್ಚುವ ಕೆಲಸ ಬಿ.ಬಿ.ಎಂ.ಪಿ ಮಾಡಿಲ್ಲ. ಹೊಂಡದಲ್ಲಿ ಮಳೆ ಬಂದಾಗ ನೀರು ನಿಂತು ದ್ವಿಚಕ್ರ ವಾಹನ ಸವಾರರು ಸರ್ಕಸ್ ಮಾಡಬೇಕಾಗಿದೆ. ಬಹುಶಃ ಆ ಹೊಂಡಕ್ಕೆ ಬಿದ್ದು ಯಾರಾದರೂ ಪ್ರಾಣ ಕಳೆದುಕೊಂಡ ನಂತರವೇ ಮುಚ್ಚುವ ಕೆಲಸ ಮಾಡೀತೇ ಬಿ.ಬಿ.ಎಂ.ಪಿ ಎಂಬುದು ಯಕ್ಷ ಪ್ರಶ್ನೆಯಾಗಿದೆ.

ಬಸ್ ನಿಲ್ದಾಣ ನಿರ್ಮಾಣವಾದೀತೆ ?

 

ಬೆಂಗಳೂರಿನ ಮೂಲಭೂತ ಸೌಕರ್ಯಗಳ ಕೊರತೆ ಯನ್ನು ಪೂರೈಸಲು ಒಂದೆಡೆ ಸರ್ಕಾರ ಅರ್ಥಾತ್ ಆಡಳಿತ ಪಕ್ಷ ವಿಫಲವಾಗಿದೆ ಹಾಗೂ ಬಿ.ಬಿ.ಎಂ.ಪಿ ಮೈಮರೆತು ಕೂತಿದೆ ಹಾಗೂ ವಿರೋಧ ಪಕ್ಷಗಳು ಮಾತ್ರ ಹೆಸರಿಗೆ ಮಾತ್ರ ಇದ್ದು ಪೊಲೀಸ್ ಇಲಾಖೆ ಟ್ರಾಫಿಕ್ ಸಮಸ್ಯೆಗೆ ಕಾರಣ ವಾಗುತ್ತಿರುವ ರಸ್ತೆ ಹೊಂಡದಲ್ಲಿ ತುಂಬಿರುವ ನೀರನ್ನು ತೆಗೆದು ಹಾಕುವ ಕಾಯಕದಲ್ಲಿ ನಿರತರಾಗಿದ್ದಾರೆ ಟ್ರಾಫಿಕ್ ಪೊಲೀಸ್ ಪೇದೆಗಳು , ಅಧಿಕಾರಿಗಳು , ಇತ್ತ ಪ್ರತಿ ನಿತ್ಯ ಜೀವನದಲ್ಲಿ ಅಬ್ಬರದ ಮಳೆ ಯಲ್ಲಿ ತುಂಬಿದ ರಸ್ತೆಗಳಲ್ಲಿ ಹೊಂಡ ಎಲ್ಲಿದೆ ಎಂದು ತಿಳಿಯದೇ ನಾಗರೀಕರು ಕಂಗಾಲಾಗಿದ್ದಾರೆ.

ಆದರೆ ಸಿಂದಗಿ – ಹಾನಗಲ್ ನಲ್ಲಿ ಕುರ್ಚಿಗಾಗಿ ಆಡಳಿತ ಹಾಗೂ ವಿರೋಧ ಪಕ್ಷಗಳು ಒಬ್ಬರ ಮೇಲೆ ಒಬ್ಬರು ಎಷ್ಟು ಕೀಳು ಮಟ್ಟದ ನಕಾರಾತ್ಮಕ ಮನಸ್ಥಿತಿ ಯಲ್ಲಿ ಮಾತಾನಾಡುತ್ತಾ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳನ್ನು ಮರೆತು ಜೋರಾಗಿ ಸಾಗಿದೆ ರಾಜಕೀಯ ದೊಂಬಾರಾಟ.

ಇತ್ತ ಸಿಲಿಕಾನ್ ಸಿಟಿ ಯಲ್ಲಿ ಸಮಸ್ಯೆಗಳ ಸುಳಿಯಲ್ಲಿ ಬೆಂಗಳೂರಿನ ನಗರದಲ್ಲಿ ಆಗಸದೆಡೆಗೆ ಮುಖ ಮಾಡಿ ನೋಡುತ್ತಾ ನಿಂತಿದ್ದಾರೆ ನಾಗರಿಕರು. ಮಳೆ ನಿಂತು ರಸ್ತೆ ಹೊಂಡದ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕೀತೆ ಎಂಬ ಆಶಾ ಭಾವನೆ ಇದೆ ಹಾಗೂ ಬನಶಂಕರಿ 3ನೇ ಹಂತದ ಜನತಾ ಬಜಾರ್ ನಿಂದ ಇಟ್ಟ ಮಡು , ಎ.ಜಿ.ಎಸ್ ಲೇಔಟ್ , ಅರೆಹಳ್ಳಿ , ಉತ್ತರಹಳ್ಳಿ ಗೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದ್ದು ಜನತಾ ಬಜಾರ್ ನಲ್ಲಿ ( ಬಸ್ ನಿಲ್ದಾಣದಲ್ಲಿ) ಸರಿಯಾದ ರೀತಿಯಲ್ಲಿ ಒಂದು ಕಟ್ಟಡ ನಿರ್ಮಾಣ ವಾದೀತೆ , ಸದಾಕಾಲವೂ ಮುಚ್ಚಿರುವ ಶೌಚಾಲಯವನ್ನು ಒಡೆದು ನಾಗರಿಕರಿಗೆ ಅನುಕೂಲವಾಗುವಂತೆ ಬಸ್ ನಿಲ್ದಾಣ ನಿರ್ಮಾಣ ವಾದೀತೆ ?

ಬಿ.ಬಿ.ಎಂ.ಪಿ ಯವರು ಹಾಗೂ ಬಿ.ಜಿ.ಪಿ ಯ ಆರ್ .ಅಶೋಕ್ ಮನಸ್ಸು ಮಾಡುವವರೇ ಎಂದು ನೋಡುತ್ತಾ ನಿಂತಿದ್ದಾರೆ ನಾಗರಿಕರು.


ಚಿತ್ರ: ಬರಹ: ತೀರ್ಥಹಳ್ಳಿ ಅನಂತ ಕಲ್ಲಾಪುರ

Latest News

ಗುಣಾತ್ಮಕ ಶಿಕ್ಷಣದ ಮೌಲ್ಯವನ್ನು ಪ್ರತಿಬಿಂಬಿಸಿದ ಜ್ಞಾನ ಗಂಗೋತ್ರಿಯ ವಾರ್ಷಿಕ ಸ್ನೇಹ ಸಮ್ಮೇಳನ

ಸಂಸ್ಕಾರ ಮತ್ತು ಸಾಧನೆಯ ಅನನ್ಯ ಸಂಗಮವಾಗಿ ಮೂಡಿಬಂದ ‘ಸ್ಪಂದನ’ ಕಾರ್ಯಕ್ರಮಮೂಡಲಗಿ: ಕಳೆದ ಹಲವು ವರ್ಷಗಳಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇಕಡಾ ೧೦೦ರಷ್ಟು ಫಲಿತಾಂಶ ದಾಖಲಿಸುತ್ತಾ ಬಂದಿರುವ ರಾಜಾಪೂರ...

More Articles Like This

error: Content is protected !!
Join WhatsApp Group