ಸಿಂದಗಿ: ಡಾ. ಅಂಬೇಡ್ಕರ ಮತ್ತು ಡಾ. ಬಾಬು ಜಗಜೀವನರಾಮ್ ಅವರು ದಮನಿತರ ಎರಡು ಕಣ್ಣುಗಳಿದ್ದಂತೆ ಅವರ ಹೋರಾಟದ ದಾರಿ ಬೇರೆಯಾಗಿದ್ದರು ಗುರಿ ಮಾತ್ರ ಒಂದೇಯಾಗಿತ್ತು ಅದನ್ನು ಕೆಲವರು ಅವರಿಬ್ಬರಲ್ಲಿ ಭಿನ್ನಾಭಿಪ್ರಾಯ ಹುಟ್ಟಿಸಿ ಸಂಘಟನೆಗಳಲ್ಲಿ ಬಿರುಕು ಹುಟ್ಟಿಸುವ ಕಾರ್ಯಕ್ಕೆ ಮುಂದಾಗಿದ್ದು ಅದಕ್ಕೆ ಯಾರು ಕಿವಿಗೊಡಬಾರದು ಎಂದು ಯಡ್ರಾಮಿ ಸರಕಾರಿ ಪಪೂ ಕಾಲೇಜಿನ ಪ್ರಾಧ್ಯಾಪಕ ಎಸ್.ಎಚ್.ಹುಣಶ್ಯಾಳ ವಿವರಿಸಿದರು.
ಪಟ್ಟಣದ ಡಾ. ಬಾಬು ಜಗಜೀವನರಾಮರ ಉದ್ಯಾನವನದಲ್ಲಿ ತಾಲೂಕು ಅಡಳಿತ, ಸಮಾಜ ಕಲ್ಯಾಣ ಇಲಾಖೆ ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳ ಸಹಯೋಗದಲ್ಲಿ ಹಮ್ಮಿಕೊಂಡ ಡಾ. ಬಾಬು ಜಗಜೀವನರಾಮರ 115ನೇ ಜಯಂತ್ಯುತ್ಸವ ಸಮಾರಂಭದಲ್ಲಿ ಉಪನ್ಯಾಸ ನೀಡಿ, ಸತತ 51 ವರ್ಷಗಳ ಕಾಲ ರಾಜಕೀಯದಲ್ಲಿದ್ದರು ಕೂಡಾ ಅವರನ್ನು ಈ ಸಮಾಜ ಜಾತಿಯಿಂದ ಅಳೆದರೆ ವಿನಃ ವ್ಯಕ್ತಿಯಾಗಿ ಕಾಣಲ್ಲಿಲ್ಲ ಎಲ್ಲಿ ಅಸ್ಪ್ರಶ್ಯತೆ ಇರುತ್ತದೆಯೋ ಅಲ್ಲಿ ಪ್ರತಿಭಟಿಸಲೇಬೇಕು ಅಂದಾಗ ಜಾತೀಯೆತೆಯನ್ನು ಬುಡಸಮೇತ ಕಿತ್ತೊಗೆಯಲು ಸಾಧ್ಯವಾಗುತ್ತದೆ. ಸಂಘಟನೆಗಳ ಹೋರಾಟ ದೇಶದ ಕಟ್ಟಕಡೆಯ ವ್ಯಕ್ತಿಯ ಶೋಷಣೆಯಾಗುತ್ತಿರುವುದನ್ನು ತಡೆಗಟ್ಟಿ ಆ ವ್ಯಕ್ತಿಗೆ ಸರಕಾರಿ ಸೌಲಭ್ಯಗಳನ್ನು ಕೊಡಿಸುವ ಹೋರಾಟ ಆಗಬೇಕು ವಿನಃ ವ್ಯಕ್ತಿಗಳ ಹಾರಾಟವಾಗಬಾರದು ಎಂದು ಹೇಳಿದ ಅವರು ಇಬ್ಬರೂ ಮಹನೀಯರ ಜೀವನದ ಆದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿ ಎಂದು ಕರೆ ನೀಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ರಾಜ್ಯ ಲಿಂಬೆ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಅಶೋಕ ಅಲ್ಲಾಪುರ ಮಾತನಾಡಿ, ಸತತ 31 ವರ್ಷಗಳ ಕಾಲ ಸಂಪುಟ ದರ್ಜೆ ಸಚಿವರಾಗಿ ಅಧಿಕಾರಿ ನಡೆಸಿದವರಲ್ಲಿ ಡಾ. ಬಾಬುಜಿ ಅವರು ಮೊದಲಿಗರು. ಈ ದೇಶದಲ್ಲಿ ಸಂವಿಧಾನದ ಅನುಕರಣೆಯಾಗಿದೆ ಎಂದರೆ ಡಾ. ಅಂಬೇಡ್ಕರ ಹಾಗೂ ಡಾ ಬಾಬುಜಿ ಅವರ ಕೊಡುಗೆ ಅಪಾರವಾಗಿದೆ ಕಾರಣ ಇಬ್ಬರ ಮಹನೀಯರ ಭವನಗಳ ಕಾಮಗಾರಿ ಸೇರಿದಂತೆ ಸರಕಾರಿ ಸವಲತ್ತುಗಳನ್ನು ಸರಕಾರ ಮಟ್ಟದಲ್ಲಿ ಚರ್ಚಿಸಿ ಕಾರ್ಯೋನ್ಮುಖರಾಗೋಣ ಎಂದರು.
ಅಧ್ಯಕ್ಷತೆ ವಹಿಸಿದ ಶಾಸಕ ರಮೇಶ ಭೂಸನೂರ ಮಾತನಾಡಿ, 12ನೇ ಶತಮಾನದಲ್ಲಿ ಬಸವೇಶ್ವರರು ಸಮಸಮಾಜ ಕಟ್ಟಲು ಹೋರಾಟ ನಡೆಸಿದಂತೆ ಡಾ. ಅಂಬೇಡ್ಕರರು ಹಾಗೂ ಡಾ. ಬಾಬುಜಿ ಅವರು ಜಾತಿಯನ್ನು ಹೋಗಲಾಡಿಸಲು ಹೋರಾಟ ನಡೆಸಿದ್ದಾರೆ. ಅಂತೆಯೇ ಕಳೆದ ಅಧಿಕಾರಿದಲ್ಲಿ ಡಾ. ಅಂಬೇಡ್ಕರರ 46, ಡಾ ಬಾಬುಜಿ ಇರ್ವರ 36 ಭವನಗಳನ್ನು ನಿರ್ಮಾಣಕ್ಕೆ ಅನುದಾನ ತಂದಿದ್ದೇನೆ ಅವು ಯಾವ ಹಂತದಲ್ಲಿವೆ ಎನ್ನುವ ಸಂಪೂರ್ಣ ಮಾಹಿತಿ ಪಡೆಯುವಂತೆ ಅಲ್ಲದೆ ಪಟ್ಟಣದಲ್ಲಿ ಡಾ. ಬಾಬು ಜಗಜೀವನರಾಮ್ ಭವನ ನಿರ್ಮಾಣಕ್ಕೆ ನಿರ್ಮಿತ ಕೇಂದ್ರದಲ್ಲಿ ರೂ 1ಕೋಟಿ ಅನುದಾನವಿದೆ ಮತ್ತು ಲೋಕೋಪಯೋಗಿ ಇಲಾಖೆಯಲ್ಲಿ ರೂ. 1 ಕೋಟಿ ಅನುದಾನವಿದೆ ಶೀಘ್ರದಲ್ಲಿ ಕಾಮಗಾರಿಗೆ ಟೆಂಡರ ಕರೆಯುವಂತೆ ಸೂಚಿಸುತ್ತೇನೆ ಮತ್ತು ಪಟ್ಟಣದಲ್ಲಿ ರಸ್ತೆಗಳ ಅಭಿವೃದ್ಧಿಗೆ ರೂ 30 ಕೋಟಿ ಅನುದಾನ ತರಲಾಗಿದ್ದು ಕೂಡಲೇ ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ತಿಳಿಸಿದರು.
ದಸಂಸ ಜಿಲ್ಲಾ ಸಂಚಾಲಕ ವೈ.ಸಿ.ಮಯೂರ, ಸಾಯಬಣ್ಣಾ ಪುರದಾಳ ಮಾತನಾಡಿದರು.
ಈ ಸಂದರ್ಭದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಈ ಕಾರ್ಯಕ್ರಮದಲ್ಲಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಕೆ.ಹೊಂಗಯ್ಯ,, ಕೃಷಿ ಅಧಿಕಾರಿ ಡಾ. ಎಚ್.ವೈ ಸಿಂಗೇಗೋಳ, ಪಿಎಸ್ಐ ನಿಂಗಣ್ಣ ಪೂಜಾರಿ, ಸಿಡಿಪಿಓ ಬಸವರಾಜ ಜಗಳೂರ, ಬಿಇಓ ಎಚ್.ಎಂ.ಹರನಾಳ, ಗ್ರೇಡ್ 2 ತಹಶೀಲ್ದಾರ ಪ್ರಕಾಶ ಸಿಂದಗಿ, ಪಿಡ್ಲ್ಯೂಡಿ ಎಇಇ ತಾರಾನಾಥ ನಾಯ್ಕ, ಪುರಸಭೆ ಮುಖ್ಯಾಧಿಕಾರಿ ಪ್ರಕಾಶ ಮುದುಗೋಳಕರ, ಅಬಕಾರಿ ಅಧಿಕಾರಿ ಆರತಿ ಖೈನೂರ, ಡಾ.ದಸ್ತಗೀರ ಮುಲ್ಲಾ, ಉಪನೊಂದಣಾಧಿಕಾರಿ ಮಲ್ಲಿಕಾರ್ಜುನ ಪಾಟೀಲ, ಸಿದ್ದು ಬುಳ್ಳಾಮ ಸುಭಾಷ ಕಡಿಮನಿ ಸೇರಿದಂತೆ ಹಲವರು ವೇದಿಕೆ ಮೇಲಿದ್ದರು.
ಸಮಾಜ ಕಲ್ಯಾಣಾಧಿಕಾರಿ ಎನ್.ಎಸ್ ಭೂಸಗೊಂಡ ಸ್ವಾಗತಿಸಿದರು. ಶಿಕ್ಷಕ ಆರ್.ಆರ್.ನಿಂಬಾಳಕರ ನಿರೂಪಿಸಿದರು. ಸಾಯಬಣ್ಣ ದೇವರಮನಿ ವಂದಿಸಿದರು.