spot_img
spot_img

ಎಲ್ಲಿಗೆ ಪಯಣ… ಯಾವುದೋ ದಾರಿ… ಕರುನಾಡಿಗೆ !

Must Read

spot_img
- Advertisement -

ಪ್ರಸ್ತುತ ರಾಜ್ಯದ ವಿದ್ಯಮಾನಗಳನ್ನು ಗಮನಿಸುತ್ತಿದ್ದರೆ ನಮ್ಮ ಕರುನಾಡ ರಾಜ್ಯದ ಮುಂದಿನ ದಿನಗಳು ಭೀಕರವಾಗಿವೆ ಎಂದು ಪ್ರಜ್ಞಾವಂತರಾದವರಿಗೆ ಅನ್ನಿಸದೇ ಇರಲಾರದು. ಮೊನ್ನೆಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ನಡತೆ ಒಂದು ರೀತಿಯ ಧೂರ್ತತನವೆಂದು ವ್ಯಾಖ್ಯಾನಿಸಬಹುದಾಗಿದೆ ಯಾಕೆಂದರೆ, ಚುನಾವಣೆಯ ಸಮಯದಲ್ಲಿ ಕಾಂಗ್ರೆಸ್ ನಾಯಕರುಗಳು ಶತಾಯಗತಾಯ ಗೆಲ್ಲಲೇ ಬೇಕೆಂಬ ಉಮ್ಮೇದಿನಲ್ಲಿ ಘೋಷಿಸಿದ ಗ್ಯಾರಂಟಿಗಳು ದೇವರಾಣೆಯಾಗಿಯೂ ರಾಜ್ಯದ ಜನತೆಯ ಕಲ್ಯಾಣಕ್ಕಾಗಿ ಅಲ್ಲವೇ ಅಲ್ಲ.

ಕಾಂಗ್ರೆಸ್ ನಾಯಕರಿಗೆ ತಮ್ಮ ಗೆಲುವಿನ ಬಗ್ಗೆ ವಿಶ್ವಾಸವೇ ಇರಲಿಲ್ಲವೆಂದರೆ ತಪ್ಪಲ್ಲ. ಹೇಗೂ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬರುತ್ತದೆ ತಮಗೂ ಅರ್ಧ ಪಾಲು ಸಿಕ್ಕರೆ ಇನ್ನೊಂದು ಸಹ ಪಕ್ಷದ ಮೇಲೆ ಗ್ಯಾರಂಟಿಗಳ ಬಗ್ಗೆ ದೂರು  ಹೇಳುತ್ತ ದಿನ ದೂಡಬಹುದು ಎಂಬ ಲೆಕ್ಕ ಹಾಕಿದ್ದ ಕಾಂಗ್ರೆಸ್ ನಾಯಕರು ತಮ್ಮೆಲ್ಲ ಅಂಗಾಂಗಗಳನ್ನೂ ಸಡಿಲ ಬಿಟ್ಟು ಕರೆಂಟ್ ಫ್ರೀ, ಬಸ್ ಫ್ರೀ, ಅಕ್ಕಿ ಫ್ರೀ…..ಬೇಕಾ ಬೇಡವಾ ? ಎಂಬೆಲ್ಲ ಘೋಷಣೆಗಳನ್ನು ಅಕ್ಷರಶಃ ತರಕಾರಿ ಮಾರುವವನಂತೆ ಘೋಷಿಸಿದರು ಅದರ ಪರಿಣಾಮ ಭರ್ಜರಿ ಬಹುಮತದಿಂದ ಕಾಂಗ್ರೆಸ್ ಅಧಿಕಾರಕ್ಕೆ ಬಂತು ಒಂದು ವೇಳೆ ಈ ಫ್ರೀ ಗ್ಯಾರಂಟಿ ಘೋಷಣೆ ಮಾಡದೇ ಇದ್ದರೆ ಈ ಕಾಂಗ್ರೆಸ್ ಎಂಬ ಪಕ್ಷ ಕರ್ನಾಟಕದಲ್ಲಿಯೂ ಗೋತಾ ಹೊಡೆಯುತ್ತಿತ್ತೋ ಏನೋ. ಅದಿರಲಿ, ಈಗಿನ ಸನ್ನಿವೇಶ ನೋಡಿದರೆ ಮುಂದಿನ ಎರಡು ವರ್ಷಗಳಲ್ಲಿ ಕರ್ನಾಟಕದ ಚಿತ್ರಣ ಹೀಗೆ ಇರಬಹುದಾ ಎಂಬ ಬಗ್ಗೆ ಕೆಲವು ಕಲ್ಪನೆಗಳು ಹರಿದು ಬರುತ್ತಿವೆ. ಈ ಕಾಲ್ಪನಿಕ ದೃಶ್ಯಗಳು ನಿಜವಾಗಬಹುದು ಆಗದಿರಲೂಬಹುದು.

ಎರಡು ವರ್ಷಗಳಲ್ಲಿ ಕರ್ನಾಟಕದ ಚಿತ್ರಣ:

  • ಬಸ್ಸುಗಳಲ್ಲಿ ಸುನಾಮಿ ಎದ್ದಿದೆ. ಉಚಿತ ಪ್ರಯಾಣ ಎಂದುಕೊಂಡು ರಾಜ್ಯದ ಮಹಿಳೆಯರೆಲ್ಲ ಬಸ್ಸುಗಳಲ್ಲಿ ಪ್ರಯಾಣ ಮಾಡುತ್ತಿದ್ದು ಬಸ್ಸುಗಳು ಅತಿಯಾಗಿ ತುಂಬಿ ತುಳುಕುತ್ತಿವೆ. ಕೆಲವು ಕಡೆ ಜಡೆ ಜಗ್ಗಾಡಿಕೊಂಡು ಮಹಿಳಾ ಫೈಟ್ ಗಳಾಗಿವೆ, ಕಂಡಕ್ಟರ್ ಮೇಲೂ ಹಲ್ಲೆಗಳಾಗಿವೆ, ಬಾಗಿಲು ಮುರಿದಿವೆ. ಈಗಾಗಲೇ ಮಹಿಳೆಯರಿಗೆ ಬೇಜಾರಾಗಿದೆ ಕಾಂಗ್ರೆಸ್ ಗೆ ಮತ ಹಾಕಿ ತಪ್ಪು ಮಾಡಿದೆವು ಅನ್ನಿಸತೊಡಗಿದೆ. ಮುಂದೆ ಬಸ್ಸುಗಳು ಡಕೋಟ ಆಗಬಹುದು, ಮಹಿಳೆಯರ ಹೆಚ್ಚಿನ ತಿರುಗಾಟದಿಂದ ಸಂಸಾರದಲ್ಲಿ ಅಸಮಾಧಾನ, ಕಲಹಗಳು ತಲೆದೋರಬಹುದು.
  • ಉಚಿತ ಬಸ್ ಪ್ರಯಾಣದಿಂದ ಈಗಾಗಲೇ ಆಟೋಗಳಿಗೆ ಹೊಡೆತ ಬಿದ್ದಿದೆ. ಡ್ರೈವರ್ ಗಳು ಬೀದಿಗೆ ಬರಬಹುದು, ಇದರಿಂದ ಅವರ ಸಂಸಾರದ ಗತಿ ಅನೂಹ್ಯ. ಖಾಸಗಿ ಬಸ್ ಮಾಲೀಕರುಗಳೂ ಬೀದಿಗೆ ಬರಬಹುದು. ತಲೆ ಕೆಟ್ಟು ಸಾರಾಯಿ ಚಟಕ್ಕೆ ಅಂಟಿಕೊಂಡರೆ ಭವಿಷ್ಯ ಇನ್ನೂ ಭೀಕರ.  “ಉಚಿತವೆಂಬ ವಿಷಕೆ ಬಲಿಯಾದೆ ಏತಕೆ, ಸುಖ ಶಾಂತಿ ನಾಶಕೆ….” ಎಂಬ ಹಾಡು ಫೇಮಸ್ ಆಗಬಹುದು.
  • ಗೃಹ ಲಕ್ಷ್ಮೀ ಯೋಜನೆಯಿಂದ ಮನೆಯ ಲಕ್ಷ್ಮೀ ಮಾರಿಯಾಗಬಹುದು. ಅತ್ತೆ ಸೊಸೆಯರ ಜಗಳ, ಗಂಡ ಹೆಂಡತಿಯರಲ್ಲಿ ಬಿರುಕು ಸಾಮಾನ್ಯವಾಗಬಹುದು. ದುಡಿಯದೆ ಬರುವ ದುಡ್ಡು ನಾಶಕ್ಕೇ ಕಾರಣ ಅಲ್ಲವೆ ? ಮನುಷ್ಯನ ಬುದ್ಧಿಗೆ ಮಂಕು ಕವಿಯಬಹುದು. ಉಚಿತ ಬಸ್, ಉಚಿತ ದುಡ್ಡಿಗೆ ಅಡಿಕ್ಟ್ ಆದ ಕರುನಾಡ ಪ್ರಜೆ ಮುಂದೆ ದುಡಿಯುವ ಪ್ರಸಂಗ ಬಂದಾಗ ಮೈಗಳ್ಳನಾದರೆ…
  • ಕಾಂಗ್ರೆಸ್ಸು ಉಚಿತ ಬಸ್ ಪ್ರಯಾಣ ಕೊಟ್ಟಿದ್ದರಿಂದಾಗಿ ಮೊದಲಿಗೆ ಮಹಿಳೆಯರು ದಾಂಗುಡಿಯಿಟ್ಟಿದ್ದೇ ಧರ್ಮಸ್ಥಳ, ಕುಕ್ಕೆ, ಮುರ್ಡೇಶ್ವರದಂಥ ಪುಣ್ಯಕ್ಷೇತ್ರಗಳಿಗೆ. ಆದರೆ ಮಿತಿ ಮೀರಿದ ಭಕ್ತರ ದಾಳಿಯನ್ನು ಆ ದೇವರಾದರೂ ಹೇಗೆ ಸಹಿಸಿಕೊಳ್ಳಬೇಕು ? ಈ ಸರ್ಕಾರಿ ಬಸ್ಸುಗಳಾದರೂ ಹೇಗೆ ತಾಳಿಕೊಳ್ಳಬೇಕು ? ವಿದ್ಯಾರ್ಥಿಗಳು, ನೌಕರರು, ಕಾರ್ಮಿಕರು, ದುಡಿಯುವ ವರ್ಗದವರು ಹೇಗೆ ಕೆಲಸಕ್ಕೆ ಹೋಗಬೇಕು?
  • ಅಕ್ಕಿ, ದುಡ್ಡು, ಬಸ್ ಪ್ರಯಾಣ, ಕರೆಂಟು ಎಲ್ಲವೂ ಉಚಿತ ಸಿಗುವಾಗ ಯಾರಾದರೂ ಯಾಕೆ ದುಡಿಯಬೇಕು ? ಹೀಗಾಗಿ ಸಣ್ಣ ಕೈಗಾರಿಕೆಗಳಿಗೆ, ರೈತಾಪಿ ಕೆಲಸಗಳಿಗೆ ಕಾರ್ಮಿಕರು ಸಿಗಲಾರರು. ಈಗಲೇ ಸಿಗುತ್ತಿಲ್ಲ. ಇನ್ನು ಮೇಲೆ ಈ ಎಲ್ಲ ಉತ್ಪಾದನಾ ಕ್ಷೇತ್ರಗಳ ಪರಿಸ್ಥಿತಿ ಹರೋ ಹರ ! ಸಿಕ್ಕರೂ ಸಂಬಳ, ಕೂಲಿ ಡಬಲ್ ಆಗಬಹುದು, ಡಬಲ್ ಕೊಟ್ಟರೆ ವಸ್ತುವಿನ ಬೆಲೆ ಏರುತ್ತದೆ ಬೆಲೆ ಏರಿದರೆ ಜನಸಾಮಾನ್ಯ, ಮಧ್ಯಮ ವರ್ಗದ ಜನ ಬಾಯಿ ಬಾಯಿ ಬಡಕೊಳ್ಳುವುದು ಇದ್ದೇ ಇದೆ ! ಈಗಿನಿಂದಲೇ ಅದಕ್ಕೆ ತಾಲೀಮು ಮಾಡುವುದು ಒಳ್ಳೆಯದು !
  • ಈ ಎಲ್ಲ ವರ್ಗದವರ ಮೇಲೆ ಉಚಿತ ಪ್ರಯಾಣದ ದುಷ್ಪರಿಣಾಮ ಉಂಟಾಗಿ ವಿದ್ಯಾರ್ಥಿಗಳ ಚಿಂತನಾ ಶಕ್ತಿ ಕುಂದಬಹುದು, ನೌಕರರ, ಕಾರ್ಮಿಕರ ಉತ್ಪಾದನಾ ಮಟ್ಟ ಕುಸಿಯಬಹುದು ಇದು ರಾಜ್ಯದ ಆರ್ಥಿಕತೆಗೆ ಪೆಟ್ಟಾಗಿ ಪರಿಣಮಿಸಬಹುದು. ಆಮೇಲೆ ಇದ್ದೇ ಇದೆಯಲ್ಲ ಸಿದ್ಧರಾಮಯ್ಯನವರು ಸಾಲ ತರಲು ತುದಿಗಾಲ ಮೇಲೆಯೇ ನಿಂತಿರುತ್ತಾರೆ. ರಾಜ್ಯದ ತೆರಿಗೆದಾತರು ಇದನ್ನೆಲ್ಲ ಅನುಭವಿಸಬೇಕು.

ಸರ್ಕಾರದ ಇನ್ನೊಂದು ಭಾಗ್ಯವಾದ ಉಚಿತ ಕರೆಂಟ್ ಭಾಗ್ಯ ತೀರಾ ಅಪಾಯಕಾರಿ. ರೈತರಿಗೆ ಉಚಿತ ವಿದ್ಯುತ್ ಕೊಡಲಿಕ್ಕೇ ಹೆಣಗಾಡುತ್ತಿರುವ ವಿದ್ಯುತ್ ಕಂಪನಿಗಳು ಸರ್ಕಾರದ ಈ ಆದೇಶದಿಂದಾಗಿ ಮತ್ತಷ್ಟು ಹಾನಿಗೆ ಒಳಗಾಗುವುದು ಖಂಡಿತ. ಇದರಿಂದ “ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಗ್ರಾಹಕರು ಸಹಕರಿಸಬೇಕು” ಎಂಬಂಥ ಪ್ರಕಟಣೆಗಳು ಪ್ರತಿದಿನ ಬರತೊಡಗಿದರೆ ಆಶ್ಚರ್ಯವಿಲ್ಲ.

- Advertisement -

ಉಚಿತ ವಿದ್ಯುತ್ ಘೋಷಣೆಯ ಬೆನ್ನಲ್ಲೇ ವಿದ್ಯುತ್ ದರವನ್ನು ಸಿಕ್ಕಾಪಟ್ಟೆ ಏರಿಸಿದ ರಾಜ್ಯ ವಿದ್ಯುತ್ ಸರಬರಾಜು ಕಂಪನಿಯು ಈ ಸರ್ಕಾರದ ನಿರ್ಧಾರದಿಂದಾಗಿ ದಿವಾಳಿಯೆದ್ದು, ಕಂಬಳಿ ಜಾಡಿಸಿಕೊಂಡು ಬೇರೆ ಕಡೆ ಹೋಗಲಾರದೆ, ಇಲ್ಲಿಯೂ ಇರಲಾರದೆ ಒದ್ದಾಡತೊಡಗಿದರೆ ಅದರ ಹೊಡೆತ ಬೀಳುವುದು ಸಿದ್ಧರಾಮಯ್ಯ, ಡಿಕೆಶಿ, ಖಂಡ್ರೆ, ಖರ್ಗೆಗಳಿಗಲ್ಲ ನಮ್ಮಂಥ ಜನಸಾಮನ್ಯರಿಗೇ !! ಎರಡೇ ಎರಡು ವರ್ಷದಲ್ಲಿ ಜನಸಾಮಾನ್ಯ ಜೇಬಿಗೆ ಕೈ ಹಾಕಿದರೆ ಕರೆಂಟ್ ಹೊಡೆಯುತ್ತದೆ, ಹೊಟೇಲ್ ಒಳ ಹೊಕ್ಕರೆ ಕರೆಂಟ್ ಹೊಡೆಯುತ್ತದೆ, ಮಕ್ಕಳಿಗೆ ತಿನಿಸು ಕೊಡಿಸಬೇಕೆಂದರೆ ಕರೆಂಟು, ಹೆಂಡತಿಗೆ ಸೀರೆ ಕೊಡಿಸಬೇಕೆಂದರೆ ಕರೆಂಟು, ಮನೆ ಕಟ್ಟಲು ಹೊರಟವರಿಗೆ ಹೈ ವೋಲ್ಟೇಜ್ ಕರೆಂಟು, ಜಾಗ ಖರೀದಿಸುವ ಕನಸು ಇಟ್ಟುಕೊಂಡವರಿಗೆ ನಿದ್ದೆಯಲ್ಲೂ ಕರೆಂಟು ! ಎಲ್ಲಿ ನೋಡಿದಲ್ಲಿ ಕರೆಂಟ್ ಶಾಕ್ ! ಜನಸಾಮಾನ್ಯನಿಗೆ ಶಾಕ್ ಮೇಲೆ ಶಾಕ್.

ಆದ್ದರಿಂದ ಕರುನಾಡಿನ ಮಹಾಜನರೇ, ಸಿದ್ಧರಾಗಿ ಎರಡೇ ವರ್ಷಗಳಲ್ಲಿ ಈ ಸರ್ಕಾರದ ಉಚಿತ ಭಾಗ್ಯಗಳ ಅಡಕೊತ್ತಿನಲ್ಲಿ ನೀವು ಸಿಗಾಕಿಕೊಂಡು ಒದ್ದಾಡುವ ಪರಿಸ್ಥಿತಿ ಬರಬಹುದು ಅದಕ್ಕೆ ಈಗಲೇ ಸಿದ್ಧರಾಗಿ; ಅದೂ ಮಾನಸಿಕವಾಗಿ ಅಷ್ಟೇ ಯಾಕೆಂದರೆ, ಆರ್ಥಿಕವಾಗಿ ಸಿದ್ಧರಾಗಲು ನಿಮಗೆ ದುಡ್ಡೂ ಇರೋದಿಲ್ಲ, ಸಾಮಾಜಿಕವಾಗಿ ಸಿದ್ಧರಾಗಬೇಕೆಂದರೆ ಬಹುಶಃ ಮೈತುಂಬ ಸಾಲ ಮಾಡಿಕೊಂಡಿರುತ್ತೀರಿ. ದೇವರೇ ನಮ್ಮ ನಿಮ್ಮನ್ನು ಕಾಪಾಡಬೇಕು.

ನೀವು ಒಬ್ಬರೇ ದಾರಿಯಲ್ಲಿ ಹೋಗುತ್ತ, ” ಎಲ್ಲಿಗೇ ಪಯಣಾ ಯಾವುದೋ ದಾರಿ…..ಕರುನಾಡಿಗೆ” ಎಂಬ ಹಾಡನ್ನು ಹಾಡಬೇಕಾಗುತ್ತದೆ. ಯಾಕೆಂದರೆ, ದುರುಳ ನೀತಿಯಿಂದ ಎಲ್ಲವನ್ನೂ ಉಚಿತವೆಂದು ಘೋಷಣೆ ಮಾಡಿ ಈಗ ಪ್ರತಿಯೊಂದಕ್ಕೂ ಕಂಡೀಷನ್ ಹಾಕುತ್ತಿರುವ ಕಾಂಗ್ರೆಸ್ ಸರ್ಕಾರ ಮಾತ್ರ ಮತ ಹಾಕಿರುವವರನ್ನು ಕಾಪಾಡಲಾರದು.

- Advertisement -

ಉಮೇಶ ಬೆಳಕೂಡ, ಮೂಡಲಗಿ

- Advertisement -
- Advertisement -

Latest News

10 ನೆಯ ತರಗತಿ ವಿದ್ಯಾರ್ಥಿಗಳ ಮನೆಗೆ ಭೇಟಿ ನೀಡಿ ಧೈರ್ಯ ನೀಡಿದ ತಾಲೂಕಾಧಿಕಾರಿಗಳು

ಮೂಡಲಗಿ:- ಮಾರ್ಚ್ ನಲ್ಲಿ ನಡೆಯುವ 10 ನೆಯ ತರಗತಿ ವಿದ್ಯಾರ್ಥಿಗಳ ಪರೀಕ್ಷೆ, ಅದರ ಪೂರ್ವ ತಯಾರಿ ನಡೆಸುತ್ತಿರುವ ತಾಲೂಕಾ ಅಧಿಕಾರಿಗಳು ಪೂರ್ವಭಾವಿಯಾಗಿ ವಿದ್ಯಾರ್ಥಿಗಳ ಮನೆಗೆ ಭೇಟಿ...
- Advertisement -

More Articles Like This

- Advertisement -
close
error: Content is protected !!
Join WhatsApp Group