ಸಿಂದಗಿ ನೂತನ ಜಿಲ್ಲೆ ಆಗಲಿ – ದಸಂಸ ವಿಜಯಪುರ ಆಗ್ರಹ

Must Read

ಕರ್ನಾಟಕ ರಾಜ್ಯದಲ್ಲಿ ಐತಿಹಾಸಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಹೆಸರುವಾಸಿಯಾಗಿರುವ ವಿಜಯಪುರ ಜಿಲ್ಲೆಯು ಬಹುದೊಡ್ಡ ಜಿಲ್ಲೆಯಾಗಿದ್ದು, ಅದನ್ನು ಈಗ ವಿಭಜಿಸಿ ಒಂದು ಹೊಸ ಜಿಲ್ಲೆ ಸೃಷ್ಠಿ ಮಾಡಬೇಕೆಂಬ ಕೂಗು ಅಲ್ಲಲ್ಲಿ ಕೇಳಿ ಬರುತ್ತಿದೆ.

 

 

ವಿಜಯಪುರ ಜಿಲ್ಲೆಯನ್ನು ವಿಭಜಿಸಿ ಹೊಸ ಜಿಲ್ಲೆ ಮಾಡುವುದಾದರೇ ಸಿಂದಗಿ ತಾಲೂಕು ಹೊಸ ಜಿಲ್ಲೆಯಾಗಲಿ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಜಿಲ್ಲಾ ಶಾಖೆ ವಿಜಯಪುರ ಹಾಗೂ ತಾಲೂಕ ಶಾಖೆ ಸಿಂದಗಿ ಪತ್ರಿಕಾ ಪ್ರಕಟಣೆಯ ಮೂಲಕ ಆಗ್ರಹಿಸಿದೆ. 

ಸಿಂದಗಿ ತಾಲೂಕು ವಿಜಯಪುರ ಜಿಲ್ಲೆಯ ಎಲ್ಲಾ ತಾಲೂಕುಗಳಿಗಿಂತ ಜನಸಂಖ್ಯೆಯಲ್ಲಿ ದೊಡ್ಡದಾಗಿದೆ. ಶೈಕ್ಷಣಿಕವಾಗಿ ಪ್ರಗತಿ ಸಾಧಿಸಿದೆ. ಆರ್.ಟಿ.ಓ. ಕಛೇರಿಯಲ್ಲಿ ವಾಹನ ನೊಂದಣಿಯಲ್ಲಿ ಸಿಂದಗಿ ಮುಂದಿದೆ. ಭೌಗೋಳಿಕವಾಗಿ ಕೇಂದ್ರ ಸ್ಥಾನದಲ್ಲಿದೆ. ಈ ಎಲ್ಲಾ ವಿಷಯಗಳನ್ನು ಸರಕಾರ ಗಂಭೀರವಾಗಿ ಪರಿಗಣಿಸಿ ಸಿಂದಗಿ ತಾಲೂಕನ್ನು ನೂತನ ಜಿಲ್ಲೆಯಾಗಿ ಸರಕಾರ ಘೋಷಣೆ ಮಾಡಬೇಕೆಂದು ಆಗ್ರಹಿಸಿ ಜಿಲ್ಲಾ ಸಂಚಾಲಕರಾದ ವಾಯ್.ಸಿ.ಮಯೂರ, ತಾಲೂಕ ಸಂಚಾಲಕರಾದ ಶರಣು ಛಲವಾದಿ, ಸಂಘಟನಾ ಸಂಚಾಲಕರಾದ ನೀಲಕಂಠ ಹೊಸಮನಿ, ಶಿವಪುತ್ರ ಮೇಲಿನಮನಿ, ಪರಶುರಾಮ ಹೊಸಮನಿ, ಜೈಭೀಮ ತಳಕೇರಿ, ಸುನೀಲ ಸುಂಗಠಾಣ ಜಂಟಿಯಾಗಿ ಪತ್ರಿಕಾ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ

Latest News

ಬೆಳ್ಳಿ ಬಂಗಾರ ಕದ್ದ ಖದೀಮರ ಹೆಡೆಮುರಿ ಕಟ್ಟಿದ ಗೋಕಾಕ ಪೋಲಿಸರು

ಗೋಕಾಕ ನಗರದ ಬೀಗ ಹಾಕಿದ್ದ ಮನೆಯೊಂದರ ಕೀಲಿ ಮುರಿದು ಬೆಳ್ಳಿ ಬಂಗಾರ ಸೇರಿದಂತೆ ನಗದು ಹಣ ಕದ್ದು ಪರಾರಿಯಾಗಿದ್ದ ಕುಖ್ಯಾತ ಖದೀಮರನ್ನು ಗೋಕಾಕ ಪೋಲಿಸರು ಬಂಧಿಸುವಲ್ಲಿ...

More Articles Like This

error: Content is protected !!
Join WhatsApp Group