ದೇಶದ ಒಳಗಿರುವ ಬಿಳಿ ಹಂದಿಗಳ ದಂಡು ದೇಶದಲ್ಲಿ ಇರುವ ಹೊಲಸನ್ನು ಸ್ವಚ್ಛಗೊಳಿಸದೆ ಮತ್ತಷ್ಟು ಗಬ್ಬುಗೊಳಿಸುತ್ತಿವೆ !
ಬಿಳಿ ಹಂದಿಯ ದಂಡು
ಗಾಂಧಿ ನೋಟನ್ನು ಉಂಡು
ದೇಶದ ಸಂಪತ್ತನ್ನು ನುಂಗಿಕೊಂಡು
ಹೆಂಡದ ನಶೆಗೆ ಮತಗಳನ್ನು ಕೊಂಡು
ಜಾತಿ ಮತ ಪಂಥ ಧರ್ಮವನ್ನು ಬಳಸಿಕೊಂಡು ಭಾರತದ ಚುಕ್ಕಾಣಿ ಹಿಡಿದುಕೊಂಡು ರಾಮರಾಜ್ಯದ ಕನಸು ತೋರಿಸಿಕೊಂಡು ಬುದ್ಧಿಮಾಂದ್ಯತೆಯ ಜನತೆಗೆ ಮಿನುಗುವ ತಾರೆಯ ತೋರಿಸಿಕೊಂಡು ಅಂತರಿಕ್ಷ ಯಾನ ಮಾಡುತ್ತಿರುವುದು ಬಿಳಿ ಹಂದಿಯ ದಂಡು.
ಇವರನ್ನು ಬಾಯಿ ಇಲ್ಲದ ಆ ಪ್ರಾಣಿಗೆ ಹೋಲಿಸುವುದು ತಪ್ಪು ಆದ್ರೆ ಅದಕ್ಕಿಂತ ಕೀಳಾಗಿ ಇರುವರು ,ವರಾಹ ಆದ್ರು ದೇಶದ ಹೊಲಸನ್ನು ಸ್ವಚ್ಛಗೊಳಿಸುತ್ತದೆ ಆದ್ರೆ ಇವರು ಇರುವ ಹೊಲಸಿನ ಜೊತೆ ಇನ್ನು ಹೊಲಸನ್ನು ಹೆಚ್ಚಿಸುವರು,ಹಣದ ಮದ ನೆತ್ತಿಗೇರಿ ,ದೇಹದ ಬಯಕೆ ನಾಲಿಗೆಗೆ ರುಚಿ ತೋರಿ ,ಮಹಡಿಯ ಮೇಲೆ ಮಹಡಿ ಕಟ್ಟಿ ತಗಡಿನಲ್ಲಿ ಇರುವ ಐದು ವರ್ಷಕ್ಕೊಮ್ಮೆ ಕಾಣುವ ಮತದಾರರನ್ನು ನೋಡಿ ನಕ್ಕು ಸುಖವಾಗಿ ಬಾಳುವರು ಈ ಪುಣ್ಯಾತ್ಮರು.ಭಾರತ ಎಂದರೆ ಸರ್ವ ಜನಾಂಗಕ್ಕೂ ಶಾಂತಿಯ ತೋಟ ಇಲ್ಲಿ ಎಲ್ಲರೂ ಸರಿ ಸಮಾನರು ಆದ್ರೆ ಇದೇನು ಹಿಂದೂ ಮುಸ್ಲಿಂ ಕ್ರೈಸ್ತ ಜೈನ ಬೌದ್ಧ ಅಂತ , ಕಿತ್ತಾಡಿಕೊಂಡು ಸಾಯುತ್ತಿದ್ದಾರೆ , ಸತ್ತವನು ಬದುಕುವುದಿಲ್ಲ ,ಕಾಣದವನನ್ನು ದೇವರೆಂದು ಒಪ್ಪಿಕೊಳ್ಳಲು ಸಾಧ್ಯವಿಲ್ಲ ,ಮಂದಿರ ಆಗಲಿ ಮಸೀದಿ ಆಗಲಿ ,ಎಂದು ಕಾಣದ ಎರಡು ಆತ್ಮಗಳನ್ನು ನಂಬಬೇಕೇ ವಿನಃ ಅತಿಯಾಗಿ ಮೂಢನಂಬಿಕೆಯಿಂದ ನಂಬಬಾರದು , ಮಸೀದಿ ಕಟ್ಟಿದೆ ಆದರು ಕೆಲಸ ಮಾಡದೇ ಹೊಟ್ಟೆಗೆ ಅನ್ನವಿಲ್ಲ,ಮಂದಿರ ಕಟ್ಟಿದೆ ಆದರು ಭಾರತದಲ್ಲಿ ಎಷ್ಟೋ ಬೀದಿ ಜೀವದ ಬದುಕು ಎತ್ತರದ ಮಹಡಿಗೆ ತಲುಪಲಿಲ್ಲ ,ಗುಡಿಯ ಮುಂದೆ ಕುಳಿತ ಭಿಕ್ಷುಕ ಎಂದು ಗುಡಿಯೊಳಗಿನ ದೇವರನ್ನು ಬೇಡಲಿಲ್ಲ ಕಣ್ಣಿಗೆ ಕಾಣುವ ಮನುಷ್ಯನನ್ನು ಬೇಡುತ್ತಾನೆ ಹೋಗಲಿ ಬಿಡಿ ಹೊಲಸು ತಿನ್ನುವ ಬಾಯಿಗೆ ಮೃಷ್ಟಾನ್ನ ಭೋಜನ ಇಟ್ಟರೆ ಮುಸಿ ಮುಸಿ ಮುಸಿ ಓಡಿ ಹೋಗುವುದು.
ಹಂದಿಗಳ ದಂಡಿಗೆ ನಮ್ಮದೇ ಆದ ಹಣದಲ್ಲಿ ಸಾಕುತ್ತಿದ್ದೀವಿ ಐದು ವರ್ಷಗಳ ತನಕ ಇರಲು ಮನೆ ,ಕಾರು , ಆಳುಗಳು , ಇತ್ಯಾದಿ , ಇವರನ್ನು ದೇವರೆಂದು ಸದನ ಎನ್ನುವ ದೇವಾಲಯಗಳನ್ನು ನಿರ್ಮಿಸಿದ್ರೆ ಅಲ್ಲಿ ಹೋಗಿದ್ದು ದ್ವೇವಗಳು ಇನ್ನು ಓಟು ಹಾಕಿದ ದೇವರುಗಳು ಒಂದಿಷ್ಟು ಮಂದಿ ಗುಡಿಗುಂಡರ , ಇನ್ನು ಸ್ವಲ್ಪ ಮಂದಿ ಬೀದಿ ಅಂಗಳದ ಬಿಡಾರ ಹೂಡಿ ಐದು ವರ್ಷಕ್ಕೊಮ್ಮೆ ಬರುವ ನಾಯಕನೆಂದು ಹೆಸರುವಾಸಿಯಾದವನ ಹಿಂದೆ ಬಾಲದಂತೆ ಸಾಗುವುದು ಕಂಡು ಬರುತ್ತದೆ . ದೇಶ ಎತ್ತ ಸಾಗುತ್ತಿದೆ ಹಣದುಬ್ಬರ ಎಂದರೆ ಭಯವಾಗುತ್ತದೆ,ಒಂದು ಕಡೆ ಧರ್ಮದ ಹುಚ್ಚು, ಇನ್ನೊಂದು ಕಡೆ ವಸ್ತುಗಳ ಬೆಲೆ ಏರಿಕೆ ಇದರ ಬಗ್ಗೆ ಯಾರು ಮಾತನಾಡೋಲ್ಲ ಏಕೆ , ಅಡುಗೆ ಅನಿಲದ ಬೆಲೆ ಮೂರು ಸಾವಿರ ಆದ್ರು ಮನೆಗೆ ಬಂದು ಬಿಡುತ್ತದೆ ನಮ್ಮ ಹಣದಲ್ಲಿ , ಇನ್ನು ಸ್ವಾಮಿಗಳು ಇದರ ಬಗ್ಗೆ ಮಾತನಾಡೋಲ್ಲ ಅವರಿಗೂ ಕೂಡ ಸಂತೆಯ ಮುಖ ಕಾಣೋಲ್ಲ , ಇನ್ನು ದೊಡ್ಡ ದೊಡ್ಡ ಜಿಲ್ಲಾಧಿಕಾರಿಗಳು ರಾಜಕೀಯದವರ ಅಡಿಯಲ್ಲಿ ಇರುವರು ಅಷ್ಟು ವರ್ಷ ಓದಿದ್ದು ಗಾಂಧಿ ನೋಟಿಗಾಗಿ, ತಮ್ಮ ಜೀವನಕ್ಕಾಗಿ.ಇನ್ನು ಕೆಳ ಹಂತದ ರಾಜಕಾರಣಿಗಳು , ಅಧಿಕಾರಿಗಳು ಎಲ್ಲಾ ಮಹಾನ್ ವ್ಯಕ್ತಿಗಳು ಹಣಕ್ಕಾಗಿ ಸಾಯುವರು ,ಸತ್ತು ಕೂಡ ಮತ್ತೆ ಅಲ್ಲೆ ಬದುಕುವರು ಜನರ ರಕ್ತವನ್ನು ತಮ್ಮ ಬಾಯಾರಿಕೆಗೆ ಕೂಡಿದು. ಇನ್ನು ಸಾರಿಗೆ ಸಂಸ್ಥೆ, ಹೊಟೇಲ್ ಎಲ್ಲಾ ವ್ಯಾಪಾರದ ಕ್ಷೇತ್ರದಲ್ಲಿ ಬೆಲೆ ಏರಿಕೆ ಜಾಸ್ತಿಯಾಗಿದೆ ಹಾಗೆ ನಿರುದ್ಯೋಗದ ಸಮಸ್ಯೆ ಹೆಚ್ಚಿನ ರೀತಿಯಲ್ಲಿ ಆಗುತ್ತದೆ.
ದೊಡ್ಡ ಹಂದಿ ದೇಶ ಸುತ್ತುವುದು , ಬೇರೆ ದೇಶಗಳಲ್ಲಿ ಇರುವ ಹೊಲಸನ್ನು ಸ್ವಚ್ಛಗೊಳಿಸುತ್ತದೆ ,ತನ್ನ ದೇಶದ ಹೊಲಸು ಎಲ್ಲಾ ದೇಶಗಳಿಗೆ ನಾರುವುದು ಎಂದು ಗೊತ್ತಾಗುತ್ತಿಲ್ಲ , ಇನ್ನು ಅದಕ್ಕಿಂತ ಬುದ್ಧಿವಂತ ಹಂದಿ ಅನ್ನ ತಿನ್ನು ಎಂದರೆ ಹೊಲಸನ್ನೇ ತಿನ್ನುವೆ ಎನ್ನುತ್ತದೆ ,ಕೊನೆಗೆ ಮರಿ ಹಂದಿಗಳು ಹುಟ್ಟಿನಿಂದಲೇ ಚರಂಡಿಯಲ್ಲಿ ಬೆಳೆದು ಅಲ್ಲೆ ತಿಂದು ಜನರ ರಕ್ತವನ್ನು ಹೀರುತ್ತವೆ.ಜನರಿಗೆ ಒಂದು ದಿನದ ಕೂಲಿ ಒಂದು ಸಾವಿರ ಇರುತ್ತದೆ , ಇನ್ನು ಕೆಲವರಿಗೆ ಐದುನೂರು , ಇನ್ನೂರು ಮುನ್ನೂರು ಇರುತ್ತದೆ , ಅಡುಗೆ ಅನಿಲ, ವಿದ್ಯುತ್ ಬಿಲ್,ಮನೆ ಬಾಡಿಗೆ , ಎಲ್ಲಾ ವಸ್ತುಗಳ ಬೆಲೆ ಗಗನಕ್ಕೇರುತ್ತಿದೆ , ನವಿಲಿಗೆ ಹಣ್ಣುಹಾಕಿದಂತೆ ಅಲ್ಲ ಆಡಳಿತ ,ದೇಶದ ಬಡ ಜನತೆಗೆ ಕೆಲಸ ಮಾಡಲು ಅವಶ್ಯಕತೆ ಮಾಡಿಕೊಟ್ಟು ಹೊಟ್ಟೆ ತುಂಬಾ ಊಟ ಸಿಗುವಂತೆ ಮಾಡಬೇಕು ಇದು ನಾಯಕತ್ವದ ಗುಣ.ಹಣ ಎಲ್ಲಾ ಸಾರ್ವಜನಿಕರ ಹಣ , ತೆರಿಗೆಯ ಮೂಲಕ ಕಟ್ಟುವುದು ಎಲ್ಲಾ ದೇಶಗಳಲ್ಲಿ ಸಮನಾಗಿರುತ್ತದೆ ಆದರೆ ಎಷ್ಟು ತೆರಿಗೆ ವಿಧಿಸಬೇಕು ಜನಸಾಮಾನ್ಯರಿಗೆ ಎನ್ನುವ ಬುದ್ದಿ ಇರಬೇಕು.ದೇಶದಲ್ಲಿ ಎಷ್ಟೋ ಜನ ಬೀದಿ ಪಾಲಾಗಿರುವರು ಅವರಿಗೆಲ್ಲ ವಸತಿ ಯೋಜನೆಯಡಿಯಲ್ಲಿ ಮನೆ ಮಾಡಿಕೊಡಬೇಕು, ಪ್ರತಿಯೊಂದು ಹಳ್ಳಿಗಳನ್ನು ಗೆದ್ದು ಪಟ್ಟಕ್ಕೇರಿದ ನಾಯಕರು ಎಲ್ಲಾ ವ್ಯವಸ್ಥೆಯಿಂದ ಚೆನ್ನಾಗಿ ನೋಡಿಕೊಳ್ಳಬೇಕು, ಇನ್ನು ತುಂಬಾ ಇವೆ ನೀವೇ ತಿಳಿದುಕೊಳ್ಳಬೇಕು , ತಿಳಿದುಕೊಂಡು ಬಿಳಿ ಹಂದಿಯ ದಂಡನ್ನು ನಾವೆ ಸಾಕಬೇಕು.
ಭೋವಿ ರಾಮಚಂದ್ರ
ಹರಪನಹಳ್ಳಿ
8861588118.