ಶಾಂತಿ ಶಾಂತಿ ಶಾಂತಿ ಎಂದು 3 ಸಲ ಹೇಳುವುದೇಕೆ?

Must Read

🌷ನಾವು ಆಚರಿಸುವ ಪ್ರತೀ ಪದ್ಧತಿಯೂ, ಪಠಿಸುವ ಪ್ರತೀ ಮಂತ್ರಕ್ಕೂ ತನ್ನದೇ ಆದ ಅರ್ಥಗಳಿವೆ. ಮನಸ್ಸಿನ ನೆಮ್ಮದಿಗೆ, ಮನೆಯಲ್ಲಿ ಶಾಂತಿ ನೆಲೆಸಲು ಜತೆಗೆ ನಮ್ಮ ಆಧ್ಯಾತ್ಮಿಕ ಬೆಳವಣಿಗೆಗೆ ಸಹಕಾರಿಯಾಗುವಂತೆ ಕೆಲವು ಸಂಪ್ರದಾಯಗಳನ್ನು ಹಿಂದಿನವರು ಆಚರಣೆಗೆ ತಂದಿದ್ದಾರೆ. ಇದರಲ್ಲಿ ಶಾಂತಿ, ಶಾಂತಿ, ಶಾಂತಿ ಎಂದು ಪಠಿಸುವುದೂ ಒಂದು. ಏನೀದರ ಅರ್ಥ?

🌷ಸಾಮಾನ್ಯವಾಗಿ ಎಲ್ಲಾ ಮಂತ್ರಗಳ ಕೊನೆಯಲ್ಲಿ ಓಂ ಶಾಂತಿಃ ಶಾಂತಿಃ ಶಾಂತಿಃ ಎಂದು ಮೂರು ಸಲ ಹೇಳುತ್ತಾರೆ. ಶಾಂತಿ ಅಂದರೇನು? ಎಲ್ಲವೂ ನಮ್ಮ ಇಚ್ಛೆಯಂತೆ ಕೊನೆಗೊಳ್ಳುವುದು. ದೇವರನ್ನು ಸ್ತುತಿಸುವ ಮಂತ್ರದ ಕೊನೆಯಲ್ಲಿ ನಮಗೆ ಎಲ್ಲಾ ಸಮಸ್ಯೆ, ಅಡ್ಡಿ ಆತಂಕಗಳಿಂದಲೂ ಶಾಂತಿ ಸಿಗಲಿ ಎಂಬ ಆಶಯದಿಂದ ಓಂ ಶಾಂತಿಃ ಶಾಂತಿಃ ಶಾಂತಿಃ ಎಂದು ಹೇಳಲಾಗುತ್ತದೆ. ಇದನ್ನು ಒಂದೇ ಸಲ ಹೇಳಿದರೆ ಸಾಲದೆ? ಮೂರು ಸಲ ಏಕೆ?ಈ ಮೂರೂ ಶಾಂತಿಗಳೂ ಬೇರೆ ಬೇರೆ ರೀತಿಯ ಶಾಂತಿಗಳು.

🌻ಮೊದಲನೆಯ ಶಾಂತಿ – ಮಾನಸಿಕ ಹಾಗೂ ದೈಹಿಕ ಬಾಧೆಗಳಿಂದ ಶಾಂತಿ.

🌻ಎರಡನೆಯ ಶಾಂತಿ – ಶತ್ರುಗಳು, ಗ್ರಹ, ನಕ್ಷತ್ರ ಇತ್ಯಾದಿಗಳ ಉಪದ್ರವದಿಂದ ಶಾಂತಿ.

🌻ಮೂರನೆಯ ಶಾಂತಿ – ಬದುಕಿನಲ್ಲಿ ಎದುರಾಗುವ ಯಾವುದೇ ರೀತಿಯ ವೈಪರೀತ್ಯಗಳು ಅಥವಾ ನಾವು ಊಹಿಸಲಾಗದ ರೀತಿಯಲ್ಲಿ ಬಂದೊದಗುವ ಎಲ್ಲಾ ಸಮಸ್ಯೆಗಳಿಂದ ಶಾಂತಿ.

🌷ಈ ಮೂರೂ ಬಗೆಯ ತೊಂದರೆಗಳಿಂದ ನಮಗೆ ಶಾಂತಿ ಸಿಗಲಿ ಎಂಬ ಅರ್ಥದಲ್ಲಿ ಮೂರು ಬಾರಿ ಶಾಂತಿ ಎಂದು ಹೇಳಲಾಗುತ್ತದೆ. ಮನುಷ್ಯನಿಗೆ ಸಮಸ್ಯೆಗಳು ಮೂರು ಮೂಲದಿಂದ ಬರುತ್ತವೆ ಎನ್ನುವುದು ಹಿರಿಯರ ಅನಿಸಿಕೆ. ಈ ಮೂಲಗಳನ್ನು ಆದಿದೈವಿಕ, ಆದಿಭೌತಿಕ ಮತ್ತು ಆಧ್ಯಾತ್ಮಿಕ ಎಂದು ಹೇಳುವರು.

🌷ಆದಿದೈವಿಕ: ಮನುಷ್ಯರ ನಿಯಂತ್ರಣ ಅಸಾಧ್ಯವಾದ ಪ್ರಾಕೃತಿಕ ಅಡಚಣೆಗಳು. ಉದಾಹರಣೆಗೆ ಪರೀಕ್ಷೆಗೆ ಹೊರಟಾಗ ಅಕಾಲ ಮಳೆ ಸುರಿದು ಕಾಲಕ್ಕೆ ಸರಿಯಾಗಿ ಶಾಲೆಯನ್ನು ತಲುಪಲಾಗದ ಸ್ಥಿತಿ.

🌷ಆದಿಭೌತಿಕ: ಅನಿರೀಕ್ಷಿತ ಶಾರೀರಿಕ ಇಲ್ಲವೇ ಮಾನಸಿಕ ಸಮಸ್ಯೆಗಳು ಬಂದು ವಿಘ್ನವಾಗಬಹುದು. ಅಪಘಾತಗಳಾಗಬಹುದು. ಹೊಡೆದಾಟ, ಜಗಳಗಳಾಗಬಹುದು. ಕಳ್ಳತನವಾಗಬಹುದು.


🚩ಶ್ರೀ ಭಗವಂತ ಪರಶುರಾಮ🚩
ಇಂತಿ ಜ್ಯೋತಿಷ್ಯ ಸೇವೆಯಲ್ಲಿ ತಮ್ಮವ ಪ್ರಾಚೀನಶಾಸ್ತ್ರಾಸಕ್ತ

L ವಿವೇಕಾನಂದ ಆಚಾರ್ಯ🇮🇳 (Army Rtd) Gubbi.
ph no :9480916387

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group