ಪತ್ನಿಯ ಕೊಲೆಗೈದು ಪರಾರಿಯಾದ ಪತಿ

Must Read

ಸಿಂದಗಿ: ಹರಿತವಾದ ಆಯುಧದಿಂದ ಪತ್ನಿಯನ್ನು ಕೊಲೆಗೈದು ಪತಿ ಪರಾರಿಯಾದ ಘಟನೆ ತಾಲೂಕಿನ ಚಾಂದಕವಠೆ ಗ್ರಾಮದ ಜಮೀನೊಂದರಲ್ಲಿ ನಡೆದ ಬಗ್ಗೆ ಸಿಂದಗಿ ಪೊಲೀಸ ಠಾಣಾದಲ್ಲಿ ಪ್ರಕರಣ ದಾಖಲಾಗಿದೆ.

ಚಾಂದಕವಠೆ ಗ್ರಾಮದ ನಿವಾಸಿ ಶೀಲವಂತಿ ಗುರುಬಾಳ ಕನ್ನಾಳ(28) ಕೊಲೆಗೀಡಾದ ದುರ್ದೈವಿ ಎಂದು ಮಾಯಮ್ಮ ಜುಮ್ಮಣ್ಣ ಯಳೂರಿ ಪಿರ್ಯಾದಿಯಲ್ಲಿ ತಿಳಿಸಿದ್ದಾರೆ.

ಹಿನ್ನೆಲೆ: ಚಡಚಣ ತಾಲೂಕಿನ ದುಮಕನಾಳ ಗ್ರಾಮದ ಗುರುಬಾಳ ತಿಪ್ಪಣ್ಣ ಕನ್ನಾಳ ಈತನ ಜೊತೆ 5 ವರ್ಷದ ಹಿಂದೆ ಶೀಲವಂತಿಯ ಮದುವೆಯಾಗಿತ್ತು. ಗಂಡನ ವಿಪರೀತ ಕುಡಿತದಿಂದ ಬೇಸತ್ತು ಒಂದು ವರ್ಷದ ಹಿಂದೆ ಮಕ್ಕಳನ್ನು ಕರೆದುಕೊಂಡು ತವರುಮನೆ ಚಾಂದಕವಠೆ ಗ್ರಾಮಕ್ಕೆ ಶೀಲವಂತಿ ಕನ್ನಾಳ ಬಂದಿದ್ದಳು ಅವಳನ್ನು ಮನವೊಲಿಸಿ ಕರೆದುಕೊಂಡು ಹೋಗಲು ಬಂದಿದ್ದ ಗುರುಬಾಳ ಕನ್ನಾಳನಿಗೆ ಕುಡಿತ ಬಿಟ್ಟರೆ ಮಾತ್ರ ನಿನ್ನ ಜೊತೆ ಬರುತ್ತೇನೆ ಎಂದು ಹೇಳಿದಕ್ಕೆ ಕೊಲೆ ಮಾಡಬೇಕು ಎನ್ನುವ ಉದ್ದೇಶದಿಂದ ತಂದಿದ್ದ ಕಬ್ಬು ಕೊಯ್ಯುವ ಹರಿತವಾದ ಆಯುಧದಿಂದ ಕೊಲೆಗೈದದ್ದಲ್ಲದೆ ಬಿಡಿಸಲು ಹೋದ ಮಾಯಮ್ಮಳಿಗೆ ಕೊಲೆ ಬೆದರಿಕೆ ಹಾಕಿ ಪರಾರಿಯಾಗಿದ್ದಾನೆ ಕೊಲೆಗಾರನ ಹುಡುಕಾಟದಲ್ಲಿ ಪೊಲೀಸರು ಜಾಲ ಬೀಸಿದ್ದಾರೆ ಎಂದು ಪೊಲೀಸ ಮೂಲಗಳು ತಿಳಿಸಿವೆ.

Latest News

ಶಿರೀಷಗೆ ಗಡಿತಿಲಕ, ಶಶಿಗೆ ಜನ್ನಾ ಪ್ರಶಸ್ತಿ

ಬೆಳಗಾವಿ - ಇಲ್ಲಿಯ ಬಿ ಎ ಸನದಿ ಸಾಂಸ್ಕೃತಿಕ ಪ್ರತಿಷ್ಠಾನ ಕರ್ನಾಟಕ ರಾಜ್ಯೋತ್ಸವ ಹಿನ್ನೆಲೆಯಲ್ಲಿ ಪ್ರತಿವರ್ಷ ಕೊಡಮಾಡುವ ಕನ್ನಡ ಗಡಿತಿಲಕ ಪ್ರಶಸ್ತಿಗೆ ಶಿರೀಷ ಅವರು ಆಯ್ಕೆಯಾಗಿದ್ದಾರೆ...

More Articles Like This

error: Content is protected !!
Join WhatsApp Group