ಯಡಿಯೂರಪ್ಪ ವಿಶೇಷ ; ರಾಜೀನಾಮೆ ನೀಡುವರೆ ?

Must Read

ಇದೇ ದಿ. ೨೬ ರಂದು ಮುಖ್ಯಮಂತ್ರಿ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ ನೀಡುತ್ತಾರೆಯೇ ಎಂಬ ಕುತೂಹಲದ ನಡುವೆಯೇ ಈ ೨೬ ನೇ ತಾರೀಖಿನ ಎರಡು ವಿಶೇಷ ವಿಷಯಗಳು ಈಗ ಹೆಚ್ಚು ಗಮನಸೆಳೆಯುತ್ತಿವೆ.

ದಿ. ೨೬ ರಂದು ರಾಜ್ಯದಲ್ಲಿ ಯಡಿಯೂರಪ್ಪ ಸರ್ಕಾರ ಅಧಿಕಾರಕ್ಕೆ ಬಂದು ಸರಿಯಾಗಿ ಎರಡು ವರ್ಷಗಳು ಪೂರೈಸಲಿವೆ ಎನ್ನುವುದು ಒಂದು ಸಂಗತಿಯಾದರೆ ಒಟ್ಟಾರೆ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿ ಐದು ವರ್ಷ ಪೂರೈಸಿದಂತಾಗುತ್ತದೆ.

ಈ ವಿಶೇಷ ದಿನವನ್ನು ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಬಿಜೆಪಿ ಪಕ್ಷದವರು ಸಂಭಮಿಸಬೇಕೋ ಬೇಡವೋ ಎಂಬ ಗೊಂದಲದಲ್ಲಿದ್ದಾರೆ. ಯಾಕೆಂದರೆ ದಿ. ೨೫ ರಂದು ಪಕ್ಷದ ಹೈಕಮಾಂಡ್ ಯಾವ ಸೂಚನೆ ನೀಡಿದರೂ ಅದನ್ನು ಪಾಲಿಸುವುದಾಗಿ ಬಿಎಸ್ ವೈ ಹೇಳಿದ್ದಾರೆ. ಪಕ್ಷ ನನಗೆ ತಾಯಿಯಿದ್ದಂತೆ ಎಂದು ಅವರು ಹೇಳಿದ್ದನ್ನು ಸ್ಮರಿಸಿಕೊಳ್ಳಬಹುದು.

ಅಂದು ಅವರು ಅಧಿಕಾರ ತ್ಯಜಿಸುವರೋ ಇಲ್ಲವೋ ಬೇರೆ ಮಾತು ಆದರೆ ಯಡಿಯೂರಪ್ಪ ಮಾತ್ರ ತನ್ನ ಅಧಿಕಾರದ ಕೊನೆಯ ಕ್ಷಣಗಳವರೆಗೂ ಜನಸೇವೆ ಮಾಡುವುದಾಗಿ ನಿರ್ಧರಿಸಿದಂತೆ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ತಿರುಗಾಡಿ ಯುದ್ಧೋಪಾದಿಯಲ್ಲಿ ಕೆಲಸ ಕಾರ್ಯಗಳನ್ನು ನಡೆಸಿದ್ದಾರೆ. ಇದನ್ನೆಲ್ಲ ನೋಡುತ್ತಿದ್ದರೆ ಹೈಕಮಾಡ್ ಯಡಿಯೂರಪ್ಪ ಅವರ ರಾಜೀನಾಮೆ ಕೇಳಲಿಕ್ಕಿಲ್ಲ ಎಂಬ ಮಾತುಗಳೂ ಕೇಳಿಬರುತ್ತಿವೆ. ಅಲ್ಲದೆ ಜನರು ಸಂಕಷ್ಟದಲ್ಲಿದ್ದಾಗ ಅರವಿಂದ ಬೆಲ್ಲದ, ಮುರುಗೇಶ ನಿರಾಣಿ, ಅಶೋಕ, ನಳನ್ ಕುಮಾರ್ ಅಂಥವರು ರಾಜಕಾರಣದ ಬಗ್ಗೆ ಮಾತನಾಡುತ್ತಿರುವ ಬಗ್ಗೆ ವ್ಯಾಪಕ ಟೀಕೆಗಳು ಬರುತ್ತಿರುವ ಹಿನ್ನೆಲೆಯಲ್ಲೂ ಹೈಕಮಾಂಡ್ ವಿಚಾರ ಮಾಡುತ್ತಿದ್ದು ಸದ್ಯಕ್ಕೆ ಯಡಿಯೂರಪ್ಪ ಬದಲಾವಣೆ ಮುಂದಕ್ಕೆ ಹೋಗುವ ಸೂಚನೆಗಳು ಕಂಡುಬರುತ್ತಿವೆ

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group