ಬೀದರ – ಗಡಿ ಜಿಲ್ಲೆ ಬೀದರನಲ್ಲಿ ಏಕಾಏಕಿ ಚಳಿಗಾಳಿ ಬೀಸಿದ್ದು ಮುಂದಿನ ಮೂರು ದಿನಗಳ ಕಾಲ ಭಾರೀ ಶೀತಗಾಳಿ ಹಿನ್ನೆಲೆ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ
ಹವಾಮಾನ ಇಲಾಖೆ ಹಾಗೂ ಬೀದರ್ ಜಿಲ್ಲಾಡಳಿತದಿಂದ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. 10 ರಿಂದ 12 ಡಿಗ್ರಿ ಇದ್ದ ತಾಪಮಾನ ಏಕಾಏಕಿ 7 ಡಿಗ್ರಿಗೆ ಇಳಿಕೆಯಾಗಿದ್ದು ಮುಂದಿನ ಮೂರು ದಿನಗಳಲ್ಲಿ 5 ರಿಂದ 6 ಡಿಗ್ರಿ ತಾಪಮಾನ ದಾಖಲಾಗುವ ಅಪಾಯವಿದೆ. ಆದ್ದರಿಂದ ಸಾರ್ವಜನಿಕರು ಮೂರು ದಿನಗಳ ಕಾಲ ಹೊರಗೆ ಬಾರದಂತೆ ಅಲರ್ಟ್ ಘೋಷಣೆ ಮಾಡಲಾಗಿದೆ.
ಸೂರ್ಯೋದಯಕ್ಕಿಂತ ಮುಂಚೆ ಇಲ್ಲಾ ಸೂರ್ಯಾಸ್ತದ ನಂತರ ವಾಕಿಂಗ್ ಮಾಡುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ. ಕಳೆದ ಒಂದು ವಾರದಿಂದ ಬೀದರ್ ನಲ್ಲಿ ಸಂಪೂರ್ಣವಾಗಿ ತಾಪಮಾನ ಕುಸಿತ ಕಂಡು ಭಾರೀ ಶೀತಗಾಳಿಯಿಂದ ಚಳಿಗೆ ಗಡಿ ಜಿಲ್ಲೆಯ ಜನರು ತತ್ತರಿಸುವಂತಾಗಿದೆ.
ಜಿಲ್ಲೆಯಲ್ಲಿ ಗರಿಷ್ಠ ತಾಪಮಾನ 28 ಇದ್ದರೆ, ಕನಿಷ್ಠ ತಾಪಮಾನ 7ಕ್ಕೆ ಇಳಿಕೆಯಾಗಿದೆ. ಭಾರಿ ಚಳಿಗೆ ಮನೆಯಿಂದ ಹೊರಗೆ ಬರಲು ಜನರು ಹಿಂದೇಟು ಹಾಕುತ್ತಿದ್ದಾರೆ. ರಣ ಚಂಡಿ ಚಳಿಯಿಂದ ತಪ್ಪಿಸಿಕೊಳ್ಳಲು ಗುಂಪು ಗುಂಪಾಗಿ ಚಳಿಕಾಯಿಸುತ್ತಿದ್ದಾರೆ
ಇದೇ ಮೊದಲ ಬಾರಿಗೆ ಇಷ್ಟೊಂದು ಕಡಿಮೆ ಪ್ರಮಾಣದ ತಾಪಮಾನ ದಾಖಲಾಗಿದ್ದು ಈ ವೇಳೆ ದ್ವಿಚಕ್ರ ವಾಹನದಲ್ಲೂ ಹೊರಗಡೆ ಓಡಾಡದಂತೆ, ರೈತರಿಗೂ ರಾತ್ರಿ ಹೊತ್ತಿನಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಬಾರದು ಎಂದು ಕೃಷಿ ಇಲಾಖೆ ಎಚ್ಚರಿಕೆ ನೀಡಿದೆ.
ವರದಿ : ನಂದಕುಮಾರ ಕರಂಜೆ, ಬೀದರ