ಮುಧೋಳ – ತಾಲೂಕಿನ ಸುಕ್ಷೇತ್ರ ಮುಗಳಖೋಡದ ಶ್ರೀ ಸಿದ್ಧಾರೂಢ ಭಾರತಿ ಆಶ್ರಮದಲ್ಲಿ ರವಿವಾರ ದಿ 14 ರಂದು ಮುಂಜಾನೆ 8.30 ಕ್ಕೆ ತ್ರಿವಿಧ ದಾಸೋಹ ಚಕ್ರವತಿ೯, ಲಿಂಗೈಕ್ಯ ಸದ್ಗುರು ಅನ್ನದಾನೇಶ್ವರ ಅಪ್ಪಾಜಿಯವರಿಗೆ ನುಡಿ ನಮನ ಕಾರ್ಯಕ್ರಮ ಜರುಗಲಿದೆ.
ಶ್ರೀಗಳ ಪೂಜಾ ನುಡಿ ಸಮಪ೯ಣೆ, ಭಕ್ತರಿಂದ ಪುಷ್ಪಾಚ೯ನೆ ನಡೆಯುವುದು. ಇದೆ ಸಂದರ್ಭದಲ್ಲಿ 126 ನೇಯ ಆರೂಢರ ಅಭಿಷೇಕ, ರವಿವಾರದ ಸತ್ಸಂಗ, ಚಿಂತನ ಕಾರ್ಯಕ್ರಮ. ಸಹಸ್ರ ಬಿಲ್ವಾರ್ಚನೆ, ನಾಮಸಂಕೀತ೯ನ, ಮಂಗಲ ಹಾಗೂ ಮಹಾಪ್ರಸಾದ ಜರುಗುವುದು.
ಮುಖ್ಯ ಅತಿಥಿಗಳಾಗಿ ಗ್ರಾಮ ಪಂಚಾಯಿತಿ ಸದಸ್ಯರಾದ ಪಿ.ಬಿ.ಸುಣಗಾರ, ಶಂಕರಗೌಡ ಪಾಟೀಲ, ಒ.ಬಿ.ಸಿ.ಘಟಕದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಿಂಗನಗೌಡ ಮಂಟೂರ, ಶ್ರೀಮನ್ ನಿಜಗುಣ ಶಿವಯೋಗಿ ರಾಷ್ಟ್ರೀಯ ಪ್ರತಿಷ್ಠಾನದ ಮುಖಂಡರಾದ ಮುತ್ತಣ್ಣ ಬನಾಜಗೋಳ, ವಿಠಲ ಸಿಂಗಾಡಿ, ಬಸವರಾಜ ಜೋಗಿ, ರಮೇಶ ಸೋಲೋಣಿ, ಮುತ್ತಣ ಪೋಳ, ಕನಕಪ್ಪ ದಾಸರ, ಸಂಗಮೇಶ ಲಕ್ಷ್ಮೇಶ್ವರ ಉಪಸ್ಥಿತರಿರುವರು.
ಈ ಎಲ್ಲ ಕಾಯ೯ಕ್ರಮಗಳು ಆಶ್ರಮದ ಪ.ಪೂಜ್ಯರಾದ ಶರಣಬಸವಶಾಸ್ತ್ರಿಗಳ ಅಧ್ಯಕ್ಷತೆಯಲ್ಲಿ ಜರುಗುವುದು ಎಂದು ಕುಮಾರ ಗುರುಪ್ರಸಾದ್ ಸ್ವಾಮೀಜಿ ತಿಳಿಸಿದ್ದಾರೆ

