ಮುಗಳಖೋಡದಲ್ಲಿ ಶೌರ್ಯ ವಿಪ್ಪತ್ತು ಮಾಸಿಕ ಕಾರ್ಯಕ್ರಮ
ಮುಧೋಳ – ಜೀವ ಹಾನಿ ಆಸ್ತಿ ಹಾನಿಗಳನ್ನು ತಪ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುವ ಪಡೆಯೇ ಶ್ರೀ ಧರ್ಮಸ್ಥಳ ಶೌರ್ಯ ವಿಪ್ಪತ್ತು ತಂಡವಾಗಿದೆ ಎಂದು ಜನಜಾಗೃತಿ ವೇದಿಕೆಯ ಮೆಲ್ವೀಚಾರಕ ಸಚಿನ್ ಅವರು ಹೇಳಿದರು.
ಅವರು ತಾಲೂಕಿನ ಮುಗಳಖೋಡದ ಶ್ರೀ ಮಹಾಳಿಂಗೇಶ್ವರ ದೇವಸ್ಥಾನದಲ್ಲಿ ಧಮ೯ಸ್ಥಳದ ಶೌರ್ಯ ವಿಪತ್ತು ಮಾಸಿಕ ಕಾರ್ಯಕ್ರಮದಲ್ಲಿ ವಿಪತ್ತು ತಂಡದ ಸಂಯೋಜಕರನ್ನುದ್ದೇಶಿಸಿ ಮಾತನಾಡುತ್ತಾ ಸಮಾಜದ ಸೇವಕರಾಗಿ ಶ್ರಮಿಸುವುದೇ ಒಂದು ಸಾಧನೆ ಎಂದರು.
ಶಿರೋಳ ವಲಯದ ಮೇಲ್ವಿಚಾರಕಿ ಚಂದ್ರಕಲಾ, ಕಾಯ೯ತಂಡದ ಅಧ್ಯಕ್ಷ ಪರಮಾನಂದ ದುಂಡಪ್ಪ ಕುಂಬಾರ, ಕಾಯ೯ಕ್ಷೇತ್ರದ ಸೇವಾ ಪ್ರತಿನಿಧಿ ಎಲ್.ಶಾಮಲಾ ಉಪಸ್ಥಿತರಿದ್ದರು.ವಿಪ್ಪತ್ತು ತಂಡದ ಸಂಯೋಜಕರು ಪಾಲ್ಗೊಂಡಿದ್ದರು

