ಶಿವಾ ಫೌಂಡೇಶನ್ ಕಾರ್ಯ ಶ್ಲಾಘನೀಯ: ಬಾಗೇವಾಡಿ

Must Read

ಮೂಡಲಗಿ: ಶೈಕ್ಷಣಿಕ ಕಾರ್ಯಕ್ರಮಗಳಿಗೆ ಹಾಗೂ ನಿರ್ಗತಿಕ ಅನಾಥ ಮಕ್ಕಳಿಗೆ ಕಲಿಕೋಪಕರಣಗಳನ್ನು ಒದಗಿಸುವ ಶಿವಾ ಫೌಂಡೇಶನ್ ಸಂಸ್ಥೆಯವರ ಕಾರ್ಯ ಶ್ಲಾಘನೀಯ ಎಂದು ತುಕ್ಕಾನಟ್ಟಿ ಗ್ರಾಮ ಪಂಚಾಯತ ಅಧ್ಯಕ್ಷೆ ಗಾಯತ್ರಿ ಬಾಗೇವಾಡಿ ಹೇಳಿದರು.

ಅವರು ತಾಲೂಕಿನ ತುಕ್ಕಾನಟ್ಟಿಯ ಸರಕಾರಿ ಮಾದರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಮ್ಯಾಜಿಕ್ ಬಾಕ್ಸ ಎಂಬ ಕಾರ್ಯಕ್ರಮದಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಮಾತನಾಡಿ,ವಿದ್ಯಾರ್ಥಿಗಳ ಹಾಜರಾತಿ ಹೆಚ್ಚಿಸುವ ಸಂಕಲ್ಪದೊಂದಿಗೆ ಜಾರಿಯಲ್ಲಿರುವ ಈ ಮ್ಯಾಜಿಕ್ ಬಾಕ್ಸ ಕಾರ್ಯಕ್ಕೆ ಒಂದು ವರ್ಷಕ್ಕೆ ಬೇಕಾಗುವಷ್ಟು ಕಲಿಕೋಪಕರಣಗಳನ್ನು ಪೂರೈಸಿದ ಗೋಕಾಕ ಶಿವ ಫೌಂಡೇಶನ್ ಸಂಸ್ಥೆಯ ಕಾರ್ಯ ಅನುಕರಣೀಯ ಎಂದರು.

ಗೋಕಾಕ ಶಿವಾ ಫೌಂಡೇಶನ್ ಸಂಸ್ಥೆಯ ಕಾರ್ಯನಿವಾಹಕ ಅಧಿಕಾರಿ ಶಾನೂರ ಹಿರೇಹೊಳಿ ಮಾತನಾಡಿ ನಮ್ಮ ಶಿವಾ ಫೌಂಡೇಶನ್ ಸಂಸ್ಥೆಯಲ್ಲಿ ಸುಮಾರು ೪೫ ಮಕ್ಕಳು ವಾಸಿಸುತ್ತಿದ್ದು ಅವರ ಕಲಿಕೆಗಾಗಿ ಹಾಗೂ ಬದುಕಿಗೆ ಬೇಕಾಗುವ ವಸ್ತುಗಳನ್ನು ಸಲಕರಣೆಗಳನ್ನು ಸಮಾಜದ ವಿವಿಧ ಕ್ಷೇತ್ರಗಳಲ್ಲಿಯ ದಾನಿಗಳು ಸಹಾಯ ಮಾಡುತ್ತಿದ್ದು, ಅವುಗಳಲ್ಲಿಯೇ ನಮ್ಮ ಸಂಸ್ಥೆಯವರು ಸರಕಾರಿ ಶಾಲೆಗಳಲ್ಲಿ ಓದುತ್ತಿರುವ ಬಡ ಹಾಗೂ ಅನಾಥ ಮಕ್ಕಳಿಗೆ ಸಹಾಯ ಮಾಡುತ್ತಿದ್ದೇವೆ. ಈ ಫಲಾನುಭವಿ ವಿದ್ಯಾರ್ಥಿಗಳು ಇದರ ಉಪಯೋಗವನ್ನು ಪಡೆದು ಕಲಿಕೆಯಲ್ಲಿ ಉತ್ತಮ ಪ್ರಗತಿ ಸಾಧಿಸಬೇಕೆಂದು ಹೇಳಿದರು. ಈಗಾಗಲೇ ಈ ಶಾಲೆಗೆ ೬೨೦ ನೋಟಬುಕ್ ೫೦೦ ಪೆನ್ನುಗಳನ್ನು ನೀಡಲಾಗಿದೆ ಎಂದರು.

ಶಾಲೆಯ ಮುಖ್ಯ ಶಿಕ್ಷಕ ಎ.ವ್ಹಿ.ಗಿರೆಣ್ಣವರ ಮಾತನಾಡಿ, ಮ್ಯಾಜಿಕ್ ಬಾಕ್ಸ ಎಂಬ ವಿನೂತನ ಕಾರ್ಯಕ್ರಮವನ್ನು ಕಳೆದ ೭-೮ ವರ್ಷಗಳಿಂದ ಜಾರಿಯಲ್ಲಿ ತಂದಿದ್ದು ಪ್ರತಿದಿನ ಪ್ರಾರ್ಥನಾ ವೇಳೆ ಇಬ್ಬರು ಅದೃಷ್ಟಶಾಲಿಗಳಿಗೆ ಬಹುಮಾನ ನೀಡಲಾಗುತ್ತದೆ ಇದು ಪ್ರಾರ್ಥನಾ ಸಮಯದಲ್ಲಿ ಹಾಜರಾತಿ ಹೆಚ್ಚಿಸುವ ನಿಟ್ಟಿನಲ್ಲಿ ಒಂದು ಪ್ರಯತ್ನ ಅದಕ್ಕೆ ಒಂದು ವರ್ಷಕ್ಕೆ ಆಗುವಷ್ಟು ಬಹುಮಾನಗಳನ್ನು ಮತ್ತು ಸುಮಾರು ೮೦೦ ಮಕ್ಕಳಲ್ಲಿ ೭೫ ಬಡ ವಿದ್ಯಾರ್ಥಿಗಳಿಗೆ ನೋಟಬುಕ್ ಮತ್ತು ಪೆನ್ನುಗಳನ್ನು ಶಿವಾ ಪೌಂಡೇಶನ್ ಸಂಸ್ಥೆಯವರು ನೀಡಿದ್ದಾರೆ. ಅಲ್ಲದೇ ನಮ್ಮ ಶಾಲೆಯ ಗುರುಮಾತೆ ವಿಮಲಾಕ್ಷಿ ತೋರಗಲ್ ಅವರು ಕೂಡ ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿಗಳನ್ನು ನೀಡಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಶಿಕ್ಷಕರಾದ ಮಹಾದೇವ ಗೋಮಾಡಿ, ವಿಮಲಾಕ್ಷಿ ತೋರಗಲ್, ಲಕ್ಷ್ಮಿ ಹೆಬ್ಬಾಳ, ಪುಷ್ಪಾ ಭರಮದೆ, ರೂಪಾ ಹೂಲಿಕಟ್ಟಿ, ಬಸವರಾಜ ನಾಯ್ಕ, ಪ್ರಿಯಾಂಕಾ ಡಿ.ಕೆ. ಸೋಮಶೆಖರ ವಾಯ್ ಆರ್, ಚನ್ನಬಸಪ್ಪ ಸೀರಿ, ಸುಜಾತಾ ಕೋಳಿ, ಭಾಗೀರಥಿ ಕಳ್ಳಿಗುದ್ದಿ, ಎಮ್.ಎಲ್. ಖಾನಗೌಡ್ರ, ವಾಸಂತಿ ಬೋರಗುಂಡಿ, ಯಮುನಾ ಹಮ್ಮನವರ, ಶಿವಲೀಲಾ ಹಣಮನ್ನವರ, ಖಾತೂನ್ ನದಾಫ, ಹೊಳೆಪ್ಪಾ ಗದಾಡಿ, ಅನ್ನಪೂರ್ಣಾ ಹುಲಕುಂದ, ಪವಿತ್ರಾ ಬಡಿಗೇರ ಪಾಲ್ಗೊಂಡಿದ್ದರು.

Latest News

ಕವನ : ಸಮಾನತೆಯ ಬೆಳದಿಂಗಳ ಪಲ್ಲವಿ

ಸಮಾನತೆಯ ಬೆಳದಿಂಗಳ ಪಲ್ಲವಿಭಾರತಾಂಬೆಗೆ ಹೊನ್ನ ಕಿರೀಟವಿದು ಸರಳ ಸಂವಿಧಾನ ನಮ್ಮ ಸಂವಿಧಾನಪೀಠಿಕೆಯ ಪರಿಧಿಯಲಿ ಜಾತ್ಯತೀತ,ಬ್ರಾತೃತ್ವ, ಸಮಾಜವಾದಿ ಸಾರ್ವಭೌಮತೆ,ಗಣತಂತ್ರ ನ್ಯಾಯ, ಸಮಾನತೆ ಸ್ವಾತಂತ್ರ್ಯದ ದುಂದುಭಿ ಜೀವದಾಯಿನಿ ಇದು ಭಾರತದ ಪಾಲಿಗೆ ಮುಕ್ತಿದಾಯಿನಿ ಇದು ದಾಸ್ಯದ ಸಂಕೋಲೆಗೆ ನಮ್ಮ ಸಂವಿಧಾನ ನಮಗೆ ಸುವಿಧಾನಲಿಖಿತವೂ ಧೀರ್ಘವೂ ಭಾರತಕ್ಕಿದು ಮಾರ್ಗವು ಅಸಮಾನತೆಯ...

More Articles Like This

error: Content is protected !!
Join WhatsApp Group