ಕ.ಸಾ.ಪ ಜಿಲ್ಲಾ ಘಟಕದ ವತಿಯಿಂದ ದತ್ತಿ ಕಾರ್ಯಕ್ರಮ
12ನೇ ಶತಮಾನದ ಶರಣರ ತತ್ವಗಳನ್ನು ಸಮಾಜದಲ್ಲಿ ಬಿತ್ತುವ ಕಾರ್ಯ ಮಾಡುತ್ತಾ ಸಮಾಜವನ್ನು ಒಗ್ಗೂಡಿಸಲು ಸಮಾನತೆಯ ಪರಿಕಲ್ಪನೆ ಮೈಗೂಡಿಸಿಕೊಳ್ಳಲು ಹಾನಗಲ್ಲ ಕುಮಾರ ಶ್ರೀಗಳು ಮಾಡಿದ ಸಮಾಜಮುಖಿ ಕಾರ್ಯಗಳು ಮಾರ್ಗದರ್ಶಿಯಾಗಿವೆ ಎಂದು ಲಿಂಗರಾಜ ಕಾಲೇಜು ಕನ್ನಡ ಉಪನ್ಯಾಸಕಿ ಡಾ. ರೇಣುಕಾ ಕಠಾರೆ ಬೆಳಗಾವಿ ಜಿಲ್ಲಾ ಕಸಾಪ ಜಿಲ್ಲಾ ಘಟಕದ ವತಿಯಿಂದ ದಿ. 8 ರಂದು ಬೆಳಗಾವಿಯ ಕನ್ನಡ ಭವನದಲ್ಲಿ ಹಮ್ಮಿಕೊಳ್ಳಲಾದ ಡಾ. ‘ಸ. ಜ. ನಾಗಲೋಟಿಮಠ ದತ್ತಿ ಕಾರ್ಯಕ್ರಮ’ ಪ್ರಯುಕ್ತ ‘ಕುಮಾರ ಸ್ವಾಮೀಜಿಯವರ ಸಮಾಜ ಸೇವೆ’ ಕುರಿತು ಮಾತನಾಡಿದರು.
ಸತ್ಸಂಗಗಳ ಮೂಲಕ ಜನರನ್ನು ಒಗ್ಗೂಡಿಸಿ, ಯೋಗ, ವೇದ ಶಾಲೆ, ಶರಣ ಪಥದ ತಿಳಿವಳಿಕೆ ಮೂಡಿಸಿ ಸಮಾನತೆ ಪಥದಲ್ಲಿ ಸಮಾಜ ನಡೆಯುವಂತೆ ಪ್ರೇರಣೆ ನೀಡಲು ಅನೇಕ ಕಾರ್ಯಗಳನ್ನು ಕೈಗೊಂಡರು ಎಂದು ಹಾನಗಲ್ ಕುಮಾರಸ್ವಾಮಿಯವರ ಸೇವೆ ಅನನ
ಅನನ್ಯವಾದದ್ದು ಎಂದರು.
ಅತಿಥಿಗಳಾಗಿ ಆಗಮಿಸಿದ್ದ ಸಾಹಿತಿ ಯ.ರು. ಪಾಟೀಲ ಮಾತನಾಡಿ ವೈದ್ಯ ಸಾಹಿತಿಯಾಗಿದ್ದ ಡಾ. ಸ. ಜ. ನಾ.ರವರ ಸರಳ ಜೀವನ ಮತ್ತು ವೈಜ್ಞಾನಿಕ ಚಿಂತನೆಗಳ ಕುರಿತಾಗಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಮಹಾನಂದಾ ಪರುಶೆಟ್ಟಿ ದತ್ತಿ ಕಾರ್ಯಕ್ರಮಗಳ ಮೂಲಕ ಸಾಮಾಜಿಕ ಚಿಂತನೆ ಆಗುತ್ತಿರುವುದು ಒಳ್ಳೆಯದು ಎಂದರು.
ಕಾರ್ಯಕ್ರಮದಲ್ಲಿ ಬೆಳಗಾವಿ ತಾಲೂಕ ಅಧ್ಯಕ್ಷ ಸುರೇಶ ಹಂಜಿ,ಬಸವರಾಜ ಕುಪ್ಪಸಗೌಡರ, ಸಾಹಿತಿಗಳಾದ ಜ್ಯೋತಿ ಬದಾಮಿ, ಮಹಾದೇವಿ ಪಾಟೀಲ, ಗಂಗಮ್ಮ ಪಾಟೀಲ, ಆರ್. ಬಿ. ಬನಶಂಕರಿ, ಸುನೀಲ ಸಾಣಿಕೊಪ್ಪ,ಸುರೇಶ ಸಕ್ರೆನ್ನವರ,ಬಿ. ಬಿ. ಮಠಪತಿ, ಶಿವಾನಂದ ತಲ್ಲೂರ, ಎಫ್. ವೈ. ತಳವಾರ, ಸೇರಿದಂತೆ ಸಾಹಿತ್ಯಾ ಸಕ್ತರು ಉಪಸ್ಥಿತರಿದ್ದರು
ಕಾರ್ಯಕ್ರಮದ ಆರಂಭದಲ್ಲಿ ವೀರಭದ್ರ ಅಂಗಡಿ ಸ್ವಾಗತಿಸಿದರು. ಜಿಲ್ಲಾ ಕಾರ್ಯದರ್ಶಿ ಎಂ.ವೈ ಮೆಣಸಿನಕಾಯಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಸುನೀಲ ಹಲವಾಯಿ ನಿರೂಪಿಸಿದರು. ಮಲ್ಲಿಕಾರ್ಜುನ ಕೋಳಿ ವಂದಿಸಿದರು.

