ಬೈಲಹೊಂಗಲ: ತಾಲೂಕಿನ ಬೂದಿಹಾಳ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಜಗದೀಶ ಚಂದ್ರ ಭೋಸ್ ಇಕೋ ಕ್ಲಬ್ ವತಿಯಿಂದ ಸಸಿ ನೆಡುವ ಕಾರ್ಯಕ್ರಮದ ಮೂಲಕ ವಿಶ್ವ ಪರಿಸರ ದಿನ ಆಚರಿಸಲಾಯಿತು.
ನೋಡಲ್ ಶಿಕ್ಷಕಿಯರಾದ ಹೇಮಲತಾ ಪುರಾಣಿಕ ಮಾತನಾಡಿ ಪರಿಸರ ರಕ್ಷಣೆ ಬಗ್ಗೆ ನಮಗೆಲ್ಲ ಅರಿವಿರಬೇಕು. ಪ್ಲಾಸ್ಟಿಕ್ ಬದಲಿಗೆ ಪರ್ಯಾಯ ವಸ್ತುಗಳನ್ನು ಬಳಸಬೇಕು ಎಂದು ಹೇಳಿದರು.
ವಿದ್ಯಾರ್ಥಿಗಳಾದ ಭಾಗ್ಯಶ್ರೀ ಬಡಿಗೇರ, ರಕ್ಷಾ ಬಾರ್ಕಿ, ಶ್ರದ್ದಾ ಹೊಂಗಲ, ಪಲ್ಲವಿ ಸೂರ್ಯವಂಶಿ, ವಿದ್ಯಾ ಗರಗದ ಪರಿಸರ ದಿನದ ಉದ್ದೇಶ, ಮಹತ್ವದ ಕುರಿತು ಮಾತನಾಡಿದರು.
ಪರಿಸರ ಜಾಗೃತಿ ಕುರಿತು ಚಿತ್ರಕಲಾ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಮುಖ್ಯಶಿಕ್ಷಕರಾದ ಎನ್.ಆರ್.ಠಕ್ಕಾಯಿ, ಶಿಕ್ಷಕರಾದ ಜಗದೀಶ ನರಿ, ಪ್ರವೀಣ ಗುರುನಗೌಡರ, ಶಿವಾನಂದ ಬಳಿಗಾರ, ಮಂಜುಳಾ ಕಾಳಿ, ಸಂತೋಷ ಸಾಳೂಂಕೆ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.