ಜಾತಿ ಕಾಲಂನಲ್ಲಿ ಮಾಳಿ, ಮಾಲಗಾರ ಎಂದೇ ಬರೆಯಿಸಿ- ಮುರಿಗೆಪ್ಪ ಮಾಲಗಾರ

Must Read

ಹಳ್ಳೂರ –  ರಾಜ್ಯ ಸರ್ಕಾರದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಹಾಗೂ ಕೇಂದ್ರ ಸರ್ಕಾರದ ಜನಗಣತಿಯು ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 7 ರ ವರೆಗೆ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯು ರಾಜ್ಯದಲ್ಲಿ ನಡೆಯುವುದರಿಂದ ಮಾಳಿ, ಮಾಲಗಾರ ಸಮಾಜ ಬಾಂಧವರೆಲ್ಲರೂ ಧರ್ಮದ ಕಾಲಂನಲ್ಲಿ ಹಿಂದೂ ಅಂಥ ನಮೂದಿಸಿ, ಜಾತಿಯ ಕಾಲಂನಲ್ಲಿ ಕುಟುಂಬದಲ್ಲಿ ಇದ್ದಂತೆ ಮಾಳಿ , ಮಾಲಗಾರ ಅಂತ ನಮೂದಿಸಬೇಕೆಂದು ರಾಜ್ಯ ಮಟ್ಟದ ಪ್ರಶಸ್ತಿ ಪುರಸ್ಕೃತ, ಸಮಾಜ ಸೇವಕ,ಪತ್ರಕರ್ತ ಮುರಿಗೆಪ್ಪ ಮಾಲಗಾರ ಅವರು ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ ಸಮೀಕ್ಷೆದಾರರು ಮನೆಗೆ ಬಂದ ಸಮಯದಲ್ಲಿ ಕುಟುಂಬದವರೆಲ್ಲ ತಮ್ಮ ಓಟಿಪಿ ಇರುವ ಆಧಾರ್ ಕಾರ್ಡ್ ರೇಷನ್ ಕಾರ್ಡ್ ತೋರಿಸಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ಸರಕಾರದ ಸಂಖ್ಯೆ 821 ಮಾಲಿ,/ಮಾಳಿ, ಮಾಲಗಾರ ಅಂತ ನಮೂದಿಸಿದರೆ 2 ಎ ಮೀಸಲಾತಿಯಲ್ಲಿ ಬರುತ್ತದೆ. ಲಿಂಗಾಯತ ಮಾಳಿ, ಮಾಲಗಾರ ನಮೂದಿಸಿದರೆ 3 ಬಿ ಗೆ ಸೇರುತ್ತದೆ. ಕಡ್ಡಾಯವಾಗಿ ಮಾಳಿ/ ಮಾಲಗಾರ ಅಂತ ಬರೆಯಿಸಿರಿ
ಸಮೀಕ್ಷೆ ವೇಳೆಯಲ್ಲಿ 6 ವರ್ಷ ಮೇಲ್ಪಟ್ಟವರು ಒಟಿಪಿ ಇರುವ ಆಧಾರ ನಂಬರ ಪಡೆಯುವುದನ್ನು ಕಡ್ಡಾಯಗೊಳಿಸಿದ್ದಾರೆ. ಆಧಾರ ನಂಬರ ಇಲ್ಲದವರು ಅರ್ಜಿ ಸಲ್ಲಿಸಿ ಕಾರ್ಡ್ ಪಡೆದುಕೊಳ್ಳಿ ಈ ಸಮೀಕ್ಷೆ ಸಾಮಾಜಿಕ ಶೈಕ್ಷಣಿಕ ಉದ್ದೇಶಕ್ಕಾಗಿ ಸಮಾಜದ ನೈಜ ಸಂಖ್ಯೆ ತಿಳಿಯಲು ಇದೊಂದು ಸುವರ್ಣಾವಕಾಶ ಸರಕಾರದ ಸೌಲಭ್ಯ ಪಡೆದುಕೊಳ್ಳುವ ನಮ್ಮ ಹಕ್ಕಿಗಾಗಿ ಜಾತಿ ಸಮೀಕ್ಷೆ ಕಾರ್ಯವಿದು ಆದ್ದರಿಂದ ಸಮಾಜ ಬಾಂದವರು ಸದುಪಯೋಗ ಪಡಿಸಿಕೊಳ್ಳಬೇಕು ನಮ್ಮ ಸಮಾಜಕ್ಕೆ ಅನ್ಯಾಯವಾಗದಂತೆ ಸಮಾಜದ ಸ್ಥಿತಿ- ಗತಿ ಮತ್ತು ನಿಖರ ಸಂಖ್ಯೆ ತಿಳಿಯುವ ಉದ್ದೇಶ ಇದಾಗಿದೆ ಎಂದರು.

ಕರ್ನಾಟಕದಲ್ಲಿ ಮಾಳಿ, ಮಾಲಗಾರ ಸಮಾಜದವರು ಒಗ್ಗಟ್ಟು ತೋರಿಸಬೇಕಾಗಿದೆ. ಇದರಲ್ಲಿ ಮಕ್ಕಳ ಭವಿಷ್ಯವೂ ಅಡಗಿದೆ ಹಿಂದೆ ಸರಕಾರವು ಸಮೀಕ್ಷೆ ನಡೆಸಿ ಕೇವಲ 83296 ಸಾವಿರ ಜನಸಂಖ್ಯೆ ತೋರಿಸಿದ್ದಾರೆ. ರಾಜ್ಯದಲ್ಲಿ ಸುಮಾರು 25 ಲಕ್ಷದಿಂದ 30 ಲಕ್ಷ ಜನಸಂಖ್ಯೆಯಿದೆ ಎಂದು ತಿಳಿದು ಬಂದಿದೆ ಉಳಿದವರು ಎಲ್ಲಿ ಹೋದರೆಂದು ಗೊಂದಲವಿದೆ ಇನ್ನಾದರೂ ಸಮಾಜ ಬಾಂದವರು ಎಚ್ಚೆತ್ತುಕೊಳ್ಳಬೇಕಾಗಿದೆ 900 ವರ್ಷಗಳ ಹಿಂದಿನಿಂದಲೂ ಸಮಾಜವು ನಲುಗಿ ಹೋಗಿದೆ. ಈಗ ಬಂದಿರುವ ಅವಕಾಶವನ್ನು ಸದ್ಭಳಕೆ ಮಾಡಿಕೊಳ್ಳಬೇಕೆಂದು ಸಂಜು ಅಥಣಿ, ಮುರಿಗೆಪ್ಪ ಮಾಲಗಾರ, ಚಿನ್ನಪ್ಪ ಅಥಣಿ, ಯಮನಪ್ಪ ನಿಡೋಣಿ,  ಮಹಾದೇವ ತೆರದಾಳ, ಸದಾಶಿವ ಹೊಸಮನಿ, ಸಿದ್ದಪ್ಪ ಕುಲಿಗೋಡ, ಪಂಡಿತ ಸೆರೆಕಾರ, ಸಾಯಿಬಣ್ಣ ಹೂಗಾರ, ಶ್ರೀಶೈಲ ಹಳ್ಳದಮಳ್ಳ, ಮಲ್ಲೇಶ ಲಿಂಬಿಗಿಡದ, ಅಶೋಕ ಶಿವಾಪೂರ, ಗೋಪಾಲ ಯಡವನ್ನವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Latest News

ಅನ್ನದಾನೇಶ್ವರ ಶ್ರೀಗಳು ಪಂಚಭೂತಗಳಲ್ಲಿ ಲೀನ

ಶ್ರೀಶೈಲ ಜಗದ್ಗುರುಗಳು, ನಾಡಿನ ಹರಗುರು ಚರಮೂರ್ತಿಗಳು ಭಕ್ತರು ಭಾಗಿಮೂಡಲಗಿ - ರಬಕವಿ ಬನಹಟ್ಟಿ ತಾಲೂಕಿನ ಬಂಡಿಗಣಿ ಗ್ರಾಮದ ಶ್ರೀ ಬಸವ ಗೋಪಾಲ ನೀಲಮಾಣಿಕ ಮಠದ ಶ್ರೀ...

More Articles Like This

error: Content is protected !!
Join WhatsApp Group