ಬೆಳಗಾವಿ – ಬೆಳಗಾವಿ ಗ್ರಾಮೀಣ ವಲಯದ ಹಲಗಾ ಕ್ಲಸ್ಟರ್ ವ್ಯಾಪ್ತಿಯ KHPS ಮಾಸ್ತಮರ್ಡಿ ಶಾಲೆಯ ಪ್ರಧಾನ ಗುರುಗಳಾಗಿದ್ದ ಬಸವರಾಜ ಸುಣಗಾರ ಇವರು ನಿಧನರಾಗಿದ್ದಾರೆ.
ಅವರ ನಿಧನಕ್ಕೆ ಚುಟುಕು ಸಾಹಿತ್ಯ ಪರಿಷತ್ ಮೂಡಲಗಿ ಘಟಕ ಸಂತಾಪ ವ್ಯಕ್ತಪಡಿಸಿದೆ
ಆತ್ಮೀಯರು, ಶಿಕ್ಷಕ ಸಾಹಿತಿಗಳಾದ ಶ್ರೀಯುತ ಬಸವರಾಜ ಸುಣಗಾರ ಅವರು ಹೃದಯಾಘಾತದಿಂದ ನಿಧನರಾದ ಸುದ್ದಿ ತಿಳಿದು ತುಂಬಾ ಆಘಾತವಾಯಿತು.
ಶ್ರೀಯುತರ ಅಗಲಿಕೆ ನಿಜಕ್ಕೂ ನಮ್ಮ ಬೆಳಗಾವಿ ಸಾಹಿತ್ಯಿಕ ವಲಯಕ್ಕೆ ಬಹು ದೊಡ್ಡ ಹೊಡೆತ. ಹಲವು ಯುವ ಕವಿಗಳನ್ನು ಪ್ರೋತ್ಸಾಹಿಸಿ ಬೆಳೆಸುತ್ತಿದ್ದ ನಗುಮೊಗದ ಇವರ ಅಗಲಿಕೆಗೆ
ವಿಷಾದ ವ್ಯಕ್ತಪಡಿಸುತ್ತ, ಅವರ ಕುಟುಂಬದವರಿಗೆ ಇವರ ಅಗಲಿಕೆಯ ದುಃಖವನ್ನು ಸಹಿಸುವ ಶಕ್ತಿಯನ್ನು ಆ ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇವೆ ಎಂದು ಚುಸಾಪ ಮೂಡಲಗಿ ಅಧ್ಯಕ್ಷರಾದ ಚಿದಾನಂದ ಹೂಗಾರ ತಿಳಿಸಿದ್ದಾರೆ.