ಸಾಹಿತಿ ವೈ.ಬಿ.ಕಡಕೋಳರಿಗೆ ಸನ್ಮಾನ

Must Read

ಸಾಹಿತಿ ವೈ.ಬಿ.ಕಡಕೋಳರಿಗೆ ಸನ್ಮಾ

ಮುನವಳ್ಳಿ : ಶಿಕ್ಷಕ ಸಾಹಿತಿ ವೈ.ಬಿ.ಕಡಕೋಳ ಅವರು ಸಾಹಿತ್ಯ ಕ್ಷೇತ್ರಕ್ಕೆ ತಮ್ಮದೆ ಆದ ಕೊಡುಗೆ ನೀಡುತ್ತ ಈ ಭಾಗದಲ್ಲಿರುವ ಐತಿಹಾಸಿಕ ಪರಂಪರೆಯ ದೇಗುಲಗಳ ಪರಿಚಯ, ಊರುಗಳು ವಿಶೇಷತೆ, ಸಮಾಜಕ್ಕೆ ಕೊಡುಗೆ ನೀಡಿದ ವ್ಯಕ್ತಿಗಳ ಚಿತ್ರಣಗಳು ಸೇರಿದಂತೆ ಹತ್ತು ಹಲವಾರು ವಿಧದಲ್ಲಿ ಸಾಹಿತ್ಯ ರಚನೆ ಮಾಡಿದ್ದಾರೆ. ಈಗಾಗಲೆ ೪೦ ಕೃತಿಗಳು ಪ್ರಕಟವಾಗಿದ್ದು, ನಾಲ್ಕು ಗ್ರಂಥಗಳು ಪ್ರಕಟಣೆಯ ಹಂತದಲ್ಲಿರುವುದು ಸಂತಸದ ಸಂಗತಿ ಎಂದು
ನ್ಯಾಯವಾದಿಗಳಾದ ವಿ.ಎಸ್.ಯಕ್ಕುಂಡಿ ಹೇಳಿದರು.

ಅವರು ಪಟ್ಟಣದ ಶಿಕ್ಷಕ, ಸಾಹಿತಿ ವೈ.ಬಿ.ಕಡಕೋಳರಿಗೆ ಡಾಕ್ಟರೇಟ್ ಪದವಿ ಪ್ರದಾನ ನಿಮಿತ್ತ ಸನ್ಮಾನಿಸಿ ಮಾತನಾಡುತ್ತಿದ್ದರು.

ವೈ.ಬಿ.ಕಡಕೋಳ ಸನ್ಮಾನಕ್ಕೆ ಪ್ರತಿಯಾಗಿ ಶ್ರೀಗಳ ಆಶೀರ್ವಾದ, ಹಿರಿಯರ ಹಾರೈಕೆ, ಸಮಾಜದ ಪ್ರೋತ್ಸಾಹದಿಂದ ಹಲವಾರು ಕೃತಿಗಳ ರಚನೆಗೆ ಪ್ರೇರಣೆಯಾಗಿದೆ. “ತಲ್ಲೂರ ರಾಯನಗೌಡ್ರ : ಸಮಗ್ರ ಅಧ್ಯಯನ” ಮಹಾಪ್ರಬಂಧ ರಚಿಸುವಾಗ ತಲ್ಲೂರ ರಾಯನಗೌಡ್ರ ಕುಟುಂಬದವರ ಸಹಕಾರ ಮರೆಯಲಾರದ ಅನುಭವ. ಇನ್ನೂ ಹಲವಾರು ವ್ಯಕ್ತಿಗಳ ವ್ಯಕ್ತಿಚಿತ್ರಣ ಸೇರಿದಂತೆ ವಿವಿಧ ಕೃತಿಗಳನ್ನು ರಚಿಸಲಾಗುವುದು ಎಂದರು. ಶ್ರೀ ಪಂಚಲಿಂಗೇಶ್ವರ ಚಿಟ್ಸ್ನ ಅಧ್ಯಕ್ಷ ಉದಯ ಯಕ್ಕುಂಡಿ, ಶಿಕ್ಷಕ ವೀರಣ್ಣ ಕೊಳಕಿ, ಗಂಗಮ್ಮ ಕಡಕೋಳ, ಶಿವಲೀಲಾ ಕಡಕೋಳ, ಆತ್ಮಾನಂದ ಕಡಕೋಳ ಸೇರಿದಂತೆ ಇತರರು ಇದ್ದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group