spot_img
spot_img

ವೈ. ಬಿ. ಕಡಕೋಳ ಸಂಪಾದಕತ್ವದ ‘ಹುಲಿಯು ಹುಟ್ಟಿತು ಕಿತ್ತೂರು ನಾಡಾಗ’ ಪುಸ್ತಕ ಲೋಕಾರ್ಪಣೆ

Must Read

spot_img
- Advertisement -

ಧಾರವಾಡ – ಧಾರವಾಡ ತಾಲ್ಲೂಕಿನ ಹೆಬ್ಬಳ್ಳಿ ಗ್ರಾಮದ ಆಶುಕವಿ ದಿವಂಗತ ಚಂದಪ್ಪ ಚಲವಾದಿ , ಇವರ ಅನುಭಾವ ಪದಗಳ ಪುಸ್ತಕ ಲೋಕಾರ್ಪಣೆ ಮಾಡಿದ ಸಂತೃಪ್ತ ಭಾವ. ನಮ್ಮ ಶಿಕ್ಷಕ ಮಿತ್ರ  ವಾಯ್. ಬಿ.ಕಡಕೋಳ ಅವರು ಅಜ್ಜನ ಹಾಡುಗಳನ್ನು ಸಂಪಾದಿಸಿ ಪ್ರಕಟಿಸಿದ್ದು ಅಭಿಮಾನದ ಸಂಗತಿ. ಈ ಸಂಗ್ರಹದ ಮೊದಲ ಹಾಡು ,ಪದ್ಯ ಕಿತ್ತೂರ ನಾಡಿನ ಕ್ರಾಂತಿವೀರ ಸೂರ ಸಂಗೊಳ್ಳಿ ರಾಯಣ್ಣನ ಕುರಿತಾದುದು. ಈ ಹಾಡನ್ನು ನಾಡಿನ ಉದ್ದಗಲಕ್ಕೂ ಹಲವಾರು ಕಲಾವಿದರು ಹಾಡಿ ಸಂಭ್ರಮ ಪಟ್ಟಿದ್ದಾರೆ. ಆದರೆ ಯಾರೂ ಅಭಿಮಾನದಿಂದ ಇದನ್ನು ರಚಿಸಿದ ನಿರಕ್ಷರರು, ನಂತರ ಈ ಅಕ್ಷರ ಕಲಿತು ಹಾಡಿದ  ಚಂದಪ್ಪ ಚಲವಾದಿಯವರ ಹೆಸರು ಹೇಳಿದ್ದೆ ಕಡಿಮೆ.

“ಹುಲಿಯು ಹುಟ್ಟಿತೋ ಕಿತ್ತೂರ ನಾಡಾಗ 

ಭಂಟ ರಾಯಣ್ಣ ಸಂಗೊಳ್ಳಿ ಊರಾಗ”

- Advertisement -

ಈ ಹಾಡು ಅಜ್ಜ ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲಿ, ನಮ್ಮವರೇ ಮೋಸ ಮಾಡಿದ ದುರುಳತನ ಬಿಂಬಿಸುವ ಗೀತೆ ಇದು ನಮ್ಮ ನರ  ನಾಡಿಗಳಲ್ಲಿ ದೇಶಾಭಿಮಾನ ಮೂಡಿಸುತ್ತದೆ. ಎಂದು ಧಾರವಾಡದ ಶಾಲಾ ಶಿಕ್ಷಣ ಇಲಾಖೆಯ ಸಿಸ್ಲೆಪ್ ನಿರ್ದೇಶಕರಾದ ಡಾ, ಬಿ ಕೆ ಎಸ್ ವರ್ಧನ್ ಹೇಳಿದರು. 

ಅವರು ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ, ನಾಡೋಜ ಡಾ. ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ಜರುಗಿದ ವೈ. ಬಿ. ಕಡಕೋಳ ಸಂಪಾದಕತ್ವದ ‘ಹುಲಿಯು ಹುಟ್ಟಿತು ಕಿತ್ತೂರು ನಾಡಾಗ’, ಪುಸ್ತಕ ಲೋಕಾರ್ಪಣೆ ಹಾಗೂ ಶ್ರಮಿಕರತ್ನ, ಅತ್ಯುತ್ತಮ ಶಾಲೆ ರಾಜ್ಯ ಪ್ರಶಸ್ತಿಪ್ರದಾನ ಸಮಾರಂಭದಲ್ಲಿ, ಪುಸ್ತಕ ಬಿಡುಗಡೆ ಮಾಡಿ.

- Advertisement -

ನನ್ನ ನಲವತ್ತು ವರ್ಷಗಳ ಸಾರ್ವಜನಿಕ ಬದುಕಿನಲ್ಲಿ ಕಂಡುಂಡ ಕಷ್ಟ ಕಾರ್ಪಣ್ಯಗಳ ನಡುವೆ ನಮ್ಮ ಈ ಜಾತಿ ಆಧಾರಿತ ತಾರತಮ್ಯ ನೋಡಿ, ಬೆಳೆಯುತ್ತಿರುವ ಕೋಮು ಕ್ರೌರ್ಯ ನೋಡಿ ಸಂಗೊಳ್ಳಿ ರಾಯಣ್ಣನನ್ನು ಮೋಸದಿಂದ ಬ್ರಿಟಿಷರಿಗೆ ಹಿಡಿದು ಕೊಟ್ಟ ದುರುಳರು, ದೇಶದ್ರೋಹಿಗಳು

ಇನ್ನೂ ನಮ್ಮ ನಡುವೆ ಇರುವುದು ನೋವು ತರಿಸುತ್ತದೆ.  ಚಂದಪ್ಪ ಚಲವಾದಿಯವರ ಮಗನಾದ  ಶಂಕರಪ್ಪ ಚಲವಾದಿಯವರು. ಇವರು ನಮ್ಮ ಊರಿಗೆ ಪ್ರತಿ ವರ್ಷ ಬಂದು ಹಲವು ದಿನ ಇದ್ದು  ಹೊಸ ಪದ ಕಲಿಸುತ್ತಿದ್ದರು. ನಮ್ಮಮನೆಗೂ ನಮ್ಮ ತಂದೆಯ ಆಮಂತ್ರಣದ ಮೇರೆಗೆ ಹಲವಾರು ಬಾರಿ ಊಟಕ್ಕೆ ಬರುತ್ತಿದ್ದರು..ಅಂಬೇಡ್ಕರ ಭಜನಾ ಮಂಡಳಿ, ತುಪ್ಪದಕುರಹಟ್ಟಿ ಈ ಹಾಡುಗಳನ್ನು ಹಾಡಿ ಪ್ರಸಿದ್ದಿ ಗಳಿಸಿದ್ದು ಇದೆ.ನಾನು ಬಾಲಕನಾಗಿದ್ದಾಗ  ಸಾಯಂಕಾಲ ಭಜನಾ ಮಾಡಲು ಹಿರಿಯರ ಜೊತೆ ಕುಳಿತು ಕೊಳ್ಳುತ್ತಿದ್ದೆ. ನಮ್ಮ ತಂದೆ ಡಗ್ಗ ನುಡಿಸುವುದರಲ್ಲಿ ಎತ್ತಿದ ಕೈ.

ಕೊನೆಗೆ ನನಗೂ ಸ್ವಲ್ಪ  ಹಾರ್ಮೋನಿಯಂ ಹೇಳಿ ಕೊಡಿ ಎಂದು ಶಂಕರಪ್ಪ ಮಾಸ್ತರವರನ್ನು ಕೇಳಿದಾಗ ಅವರು “ಮಾರುತಿ ಸಾಹೇಬ(ಮೂಲ ಹೆಸರು) ಈ  ಪೇಟಿ, ನಿಮ್ಮಪ್ಪಾರ ನುಡಿಸೋ ಡಗ್ಗ, ನಮಗ ಅಷ್ಟ ಸಾಕು ನೀವು ಸಾಲಿ ಕಲತು ದೊಡ್ಡ ಸಾಹೇಬರ ಆಗಬೇಕು “ಎಂದು ಕಲಿಸಲೇ ಇಲ್ಲ. 

ಅವರ ಆಶೀರ್ವಾದ ಎಂಬಂತೆ ಈಗ ಒಂದು  ರಾಜ್ಯ  ಮಟ್ಟದ ಇಲಾಖೆಯ ಮುಖ್ಯಸ್ಥನಾದ ನಿರ್ದೇಶಕ ಹುದ್ದೆ ಯ ವರೆಗೆ ನನ್ನ ಪ್ರಯಾಣ ತಲುಪಿದೆ. ಈ ತಂದೆ ಮಗ ಇಬ್ಬರೂ ಮೇಲ್ಜಾತಿಯಲ್ಲಿ ಹುಟ್ಟಿದ್ದರೆ ಅವರಿಗೆ ಪದ್ಮಶ್ರೀ ಅಥವಾ ಇನ್ನೂ ಹೆಚ್ಚಿನ ಪ್ರಶಸ್ತಿ ಗಳು ಬರುತ್ತಿದ್ದವು.  ಇಂದು  ಚಂದಪ್ಪಜ್ಜ, ಶಂಕರಪ್ಪ ಮಾಸ್ತರ ಅವರ ಶಿಷ್ಯರು ಅನೇಕರು ಅವರ ಪದ ಹಾಡಿ ಸಂತೋಷ ಪಟ್ಟರು. ನಾನೂ ಬಹಳ ದಿನಗಳ ನಂತರ ಭಜನಾ ಪದ ಕೇಳಿ ಧನ್ಯತೆ ಅನುಭವಿಸಿದೆ. ಈ ಎಲ್ಲ ಕಲಾವಿದರಿಗೆ ಸೂಕ್ತ ಬೆಂಬಲ, ಪ್ರೋತ್ಸಾಹ ಸಿಗಬೇಕಾಗಿದೆ. 

ಭಜನೆಗಳೂ ಭಾವೈಕ್ಯ,ಬಂಧುತ್ವ ಬೆಸೆಯುವ ,ದೇಶಾಭಿಮಾನ ಮೂಡಿಸುವ ಕಾರ್ಯ ಮಾಡಿವೆ.ಇಂದು ಒಬ್ಬ ಮುಸಲ್ಮಾನ ಸಮುದಾಯದ ಕಲಾವಿದ ಯಾರಿಗೂ ಕಡಿಮೆ ಇಲ್ಲದಂತೆ “ಶಿವನಾಮ ಸ್ಮರಿಸು “ಎಂಬ ಹಾಡು ಹಾಡಿದ್ದು ಈ ನಾಡಿನ ಸಾಮಾಜಿಕ ಸಾಮರಸ್ಯಕ್ಕೆ, ಸೌಹಾರ್ದ ಬದುಕಿಗೆ ಹಿಡಿದ ಕನ್ನಡಿ. ಈಗ ನಾನೂ ಒಳ್ಳೆಯ ಕೆಲಸ, ದೇಶಾಭಿಮಾನದಿಂದ, ಶ್ರಮವಹಿಸಿ ಶಾಲಾ ಶಿಕ್ಷಣ ಇಲಾಖೆಯ ಬದ್ಧತೆಯ ಅಧಿಕಾರಿಯಾಗಿ ವಿದ್ಯಾರ್ಥಿಗಳಿಗೆ, ಶಿಕ್ಷಕ ಶಿಕ್ಷಕಿಯರಿಗೆ, ಅಧಿಕಾರಿಗಳಿಗೆ  ಅಭಿಮಾನದಿಂದ ಈ ಹಾಡು ,ಈ ನಮ್ಮ ವೀರರ ಚರಿತ್ರೆ ಹೇಳಿ ಹುರಿದುಂಬಿಸುತ್ತೇನೆ ಎಂದರು.

ಸಮಾರಂಭವನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ  ಹೆಬ್ಬಳ್ಳಿಯ ಗ್ರಾಮ ಪಂಚಾಯತಿ ಅಧ್ಯಕ್ಷರಾದ ನಿಂಗಪ್ಪ ಮೊರಬದ, ನಮ್ಮ ಊರಿನ ಆಶುಕವಿ ಭಜನಾಕಾರ ದಿವಂಗತ ಚಂದ್ರಪ್ಪ ಛಲವಾದಿ ಅವರನ್ನು ಎಲೆಯ ಮರೆಯ ಕಾಯಿಯಂತಿದ್ದ ಅವರ ಸಾಹಿತ್ಯವನ್ನು ಬೆಳಕಿಗೆ ತಂದ ವೈ. ಬಿ.ಕಡಕೋಳ ನಮ್ಮ ಊರಿನ ಹೆಮ್ಮೆಯ ಮೊಮ್ಮಗ ಅವರ ಈ ಕೃತಿಯನ್ನು ಇಂದು ಬೆಂಗಳೂರಿನ  ರೋಹನ್ ಕೇರ್ ಫೌಂಡೇಶನ್ ಹಾಗೂ ಧಾರವಾಡದ ಸಾಧನಾ ಮಹಿಳಾ ಮತ್ತು ಮಕ್ಕಳ ಹಕ್ಕುಗಳ ಸಂರಕ್ಷಣಾ ಸಂಸ್ಥೆಗೆ ಧನ್ಯವಾದಗಳನ್ನು ತಿಳಿಸುವೆ ಎಂದರು.

ಜನಪದ ಸಾಹಿತಿ ಡಾ. ಶ್ರೀಶೈಲ ಹುದ್ದಾರ “ಭಜನಾ ಸಾಹಿತ್ಯದಲ್ಲಿ ಸಮಾಜದ ಡೊಂಕನ್ನು ತಿದ್ದುವ ಶಕ್ತಿ ಇದೆ, ಭಜನಾ ಸಾಹಿತ್ಯ ಮರೆಯಾಗುತ್ತಿದೆ” ಎಂದು ಕಳವಳ ವ್ಯಕ್ತಪಡಿಸಿದರು.

ಬೆಂಗಳೂರಿನ ಐಎಎಸ್/ಕೆ ಎ ಎಸ್ ಸಾಧನಾ ತರಬೇತಿ ಕೇಂದ್ರದ ಮುಖ್ಯಸ್ಥೆ ಡಾ, ಕೆ ಸಿ ಜ್ಯೋತಿ ಮಾತನಾಡಿ,”ನೂರು ವರ್ಷಗಳ ಹಿಂದೆ ಧಾರವಾಡ ಜಿಲ್ಲೆಯಲ್ಲಿ ಚಂದ್ರಪ್ಪ ಛಲವಾದಿ ಅಂತ ಒಬ್ಬ ಶ್ರೇಷ್ಠ ಆಶುಕವಿ ಇದ್ದಿದ್ದು, ಅವರನ್ನು ಬೆಳಕಿಗೆ ತಂದ ಶಿಕ್ಷಕ ಸಾಹಿತಿ ವಾಯ್ ಬಿ ಕಡಕೋಳ ಇವರ ಬೆಂಬಲಕ್ಕೆ ನಿಂತ ಎಲ್ ಐ ಲಕ್ಕಮ್ಮನವರ ಮಲ್ಲಿಕಾರ್ಜುನ ಉಪ್ಪಿನ ಮಂಜುನಾಥ ವಾಸಂಬಿ,  ಅವರ ಕಾರ್ಯ ಅತ್ಯಂತ ಶ್ಲಾಘನೀಯ, ಅವರ ಇನ್ನೂ ಸಾವಿರಾರು ಹಾಡುಗಳನ್ನು ಹೊರತರುವ ಕಾರ್ಯ ಹೆಬ್ಬಳ್ಳಿಯ ಪ್ರಜ್ಞಾವಂತ ನಾಗರಿಕರದಾಗಿದೆ” ಎಂದರು.

ಅಧ್ಯಕ್ಷತೆ ವಹಿಸಿದ್ದ, ಡಾ, ಇಸಾಬೆಲ್ಲಾ ಝೇವಿಯರ್ “ಆಶುಕವಿ ಭಜನಾಕಾರ ದಿವಂಗತ ಚಂದ್ರಪ್ಪ ಛಲವಾದಿ ಅವರ ಸಾಹಿತ್ಯವನ್ನು ನಾಡಿನಾದ್ಯಂತ ಪಸರಿಸಲು, ಕಮ್ಮಟಗಳನ್ನು ಆಯೋಜಿಸಲಾಗುವುದು, ವೈ.ಬಿ.ಕಡಕೋಳರ ಈ ಪ್ರಯತ್ನ ಶ್ಲಾಘನೀಯ.ಅವರಿಗೆ ಬೇಗ ಡಾಕ್ಟರೇಟ್ ದೊರೆಯಲಿ ಡಾ. ವೈ. ಬಿ. ಕಡಕೋಳ ಎಂದು ಈಗಲೇ ನಾನು ಅವರನ್ನು ಕರೆಯುವೆ.

ಒಳ್ಳೆಯ ಕೆಲಸ ಮಾಡುತ್ತಿರುವ ಅವರ ಸಂಶೋಧನಾ ಪ್ರಬಂಧ ತಲ್ಲೂರು ರಾಯನಗೌಡರು ಸಮಗ್ರ ಅಧ್ಯಯನ ರಾಣಿ ಚನ್ನಮ್ಮ ವಿಶ್ವವಿದ್ಯಾಲಯಕ್ಕೆ ಸಲ್ಲಿಸುವ ಮೂಲಕ ಡಾಕ್ಟರೇಟ್ ಅವರಿಗೆ ಸಿಗಲಿ ಎಂಬ ಆಶಯ ನಮ್ಮದು. ಮುಂದಿನ ಪೀಳಿಗೆಗೆ ಭಜನಾ ಕಲೆಯನ್ನು ಉಳಿಸಲು ನಮ್ಮ ಸಂಸ್ಥೆ ಸತತ ಪ್ರಯತ್ನ ಮಾಡಲಿದೆ, ಹೆಬ್ಬಳ್ಳಿಯಲ್ಲಿ ಚಂದ್ರಪ್ಪ ಛಲವಾದಿ ಅವರ ಮೂರ್ತಿಯನ್ನು ಸ್ಥಾಪಿಸಲು ಕೂಡ  ಸಹ ನಮ್ಮ ಸಂಸ್ಥೆ ಕೈಜೋಡಿಸಲಿದೆ”ಎಂದರು.

ಸಾಹಿತಿ ವೈ. ಬಿ. ಕಡಕೋಳ ಮಾತನಾಡಿ, “ನನ್ನ ತಾಯಿಯ ತವರುಮನೆ ಹೆಬ್ಬಳ್ಳಿ. ಬೇಸಿಗೆ ರಜೆಯಲ್ಲಿ ನಾನು ತಾಯಿಯೊಂದಿಗೆ ಹೆಬ್ಬಳ್ಳಿ ಗ್ರಾಮಕ್ಕೆ ಬರುತ್ತಿದ್ದ ಸಂದರ್ಭದಲ್ಲಿ ನಮ್ಮ ಮಾವ ಗುರಪ್ಪ ಲಕ್ಕಮ್ಮನವರ ಸಾಯಂಕಾಲದ ಸಮಯದಲ್ಲಿ ಮಲ್ಲಯ್ಯನ ದೇವಸ್ಥಾನದ ಆವರಣದಲ್ಲಿ ಭಜನೆ ಮಾಡುತ್ತಿದ್ದರು. ಅವರು ಹಾಡುವ ಎಲ್ಲಾ ಹಾಡುಗಳು ದಿವಂಗತ ಚಂದ್ರಪ್ಪ ಚಲವಾದಿಯವರ ರಚನೆಗಳು. ಅಂದಿನ ದಿನಗಳಲ್ಲಿ ಎರಡು ಕ್ಯಾಸೆಟ್ ಹೊರಬಂದಿದ್ದವು. ಇಂದು ನಾನು ನನ್ನ ಸಂಪಾದಕತ್ವದಲ್ಲಿ ಈ ಗೀತೆಗಳನ್ನು ಹೊರತಂದಿರುವೆ” ಎಂದು ಕೃತಿ ಮೂಡಿ ಬಂದ  ಸಂಗತಿಯನ್ನು ತಿಳಿಸಿದರು. ಸವದತ್ತಿಯ ಪತ್ರಕರ್ತರು ಸುರೇಶ ಬಾಳೋಜಿ,ಧಾರವಾಡದ ಎಂ ಕೆ ನದಾಫ, ಎ ಎಸ್ ಐ ತಮ್ಮಾಜಿರಾವ ತಲವಾಯಿ, ತಾವರೆಕೆರೆ ಶಿಕ್ಷಕಿ ವೀಣಾ ಟಿ ಜನಪದ ಸಾಹಿತಿ ಡಾ, ರಾಮೂ ಮೂಲಗಿ, ಹಾಸ್ಯ ಕಲಾವಿದ ಮಲ್ಲಪ್ಪ ಹೊಂಗಲ  ಪಂಚಾಯತ ಸದಸ್ಯರು ಗಳಾದ ಬಸವರಾಜ ಹೆಬ್ಬಾಳ, ಮಂಜುನಾಥ ಭೀಮಕ್ಕನವರ, ಎಚ್ ಜಯಲಕ್ಷ್ಮಿ, ಚಂದ್ರಶೇಖರ ಮಟ್ಟಿ, ಗಿರಿಮಲ್ಲಯ್ಯ ಉಮಚಗಿಮಠ, ಮುನವಳ್ಳಿಯ ಬಸಯ್ಯ ವಿರುಪಯ್ಯನವರಮಠ, ಕಲಾವಿದ ಸಾಹಿತಿ ವೈ. ಎಫ್. ಶಾನುಭೋಗ ಸೇರಿದಂತೆ ಅರವತ್ತಕ್ಕೂ ಹೆಚ್ಚು ಜನ ವಿವಿಧ ರಂಗದ ಸಾಧಕರಿಗೆ ಶ್ರಮಿಕರತ್ನ ಹಾಗೂ ಅತ್ಯುತ್ತಮ ಸಾಧನೆ ಮಾಡಿದ ಧಾರವಾಡ ತಾಲೂಕಿನ ಕಲ್ಲೆ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಸರಕಾರಿ ಹಿರಿಯ ಪ್ರಾಥಮಿಕ ಡೋರಿ, ದೋಪರ್ತಿವಾಡ ತಿಮ್ಮಾಪೂರ, ಸೇರಿದಂತೆ ಹತ್ತು ಶಾಲೆಗಳಿಗೆ ಅತ್ಯುತ್ತಮ ಶಾಲೆ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಸವದತ್ತಿ ತಾಲೂಕಿನ ಅಕ್ಷರ ದಾಸೋಹ ಸಹಾಯಕ ನಿರ್ದೇಶಕರು ಮೈತ್ರಾದೇವಿ ವಸ್ತ್ರದ, ಮಲ್ಲಿಕಾರ್ಜುನ ಉಪ್ಪಿನ, ಲೂಸಿ ಸಾಲ್ಡಾನ, ಪರಮೇಶ್ವರ ಕಾಳೆ, ಮಂಜುನಾಥ ವಾಸಂಬಿ, ಎಸ್ ಎನ್ ಯೋಗೇಶಪ್ಪ,  ಜೀವಪ್ಪ ಬೆಳಹಾರ ಎಫ್ ಆರ್ ದೊಡಮನಿ ನಿಂಗಪ್ಪ ಅಳಗವಾಡಿ ಸೇರಿದಂತೆ ಅನೇಕರು ವೇದಿಕೆಯ ಮೇಲಿದ್ದರು, ಮಲ್ಲಿಕಾರ್ಜುನ ಉಪ್ಪಿನ ಸ್ವಾಗತಿಸಿದರು, ಪಲ್ಲವಿ ಚಾಕಲಬ್ಬಿ ಸ್ವಾಗತ ನೃತ್ಯ ಮಾಡಿದರು, ಎಚ್ ಜಯಲಕ್ಷ್ಮಿ ನಿರೂಪಿಸಿದರು, ಮಲ್ಲಿಕಾರ್ಜುನ ಉಪ್ಪಿನ ವಂದಿಸಿದರು.

- Advertisement -
- Advertisement -

Latest News

೧೫ ನೇ ಅಂತರ ತೋಟಗಾರಿಕೆ ಮಹಾವಿದ್ಯಾಲಯಗಳ ಅಥ್ಲೆಟಿಕ್ಸ ಕ್ರೀಡಾಕೂಟ 

ದಾನವೀರ ಶ್ರೀ ಶಿರಸಂಗಿ ಲಿಂಗರಾಜ ದೇಸಾಯಿ, ಆಹಾರ ಅಭಿಯಂತ್ರಿಕ ತೋಟಗಾರಿಕೆ ಮಹಾವಿದ್ಯಾಲಯ, ದೇವಿಹೊಸುರ, ಹಾವೇರಿಯಲ್ಲಿ ನಡೆದ ೧೫ ನೇ ಅಂತರ ತೋಟಗಾರಿಕೆ ಮಹಾವಿದ್ಯಾಲಯಗಳ ಅಥ್ಲೇಟಿಕ್ಸ ಕ್ರೀಡಾ...
- Advertisement -

More Articles Like This

- Advertisement -
close
error: Content is protected !!
Join WhatsApp Group