ಕಡಕೋಳ: ಸಹಸ್ರಮಾನ ರತ್ನ ಪುರಸ್ಕೃತರಾದ ಟಿ ಪಿ ಮನೋಳಿ ಕುಟುಂಬದ ಸದಸ್ಯರಿಂದ ಡಾಕ್ಟರೇಟ್ ಪಡೆದ ಶಿಕ್ಷಕ ಸಾಹಿತಿ ವೈ ಬಿ ಕಡಕೋಳ ಅವರಿಗೆ ಗೌರವ ಸನ್ಮಾನ ಜರುಗಿತು.
ಈ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಕಟಕೋಳ ಚೌಕಿಮಠದ ಪರಮಪೂಜ್ಯ ನಾಗಭೂಷಣ ಮಹಾಸ್ವಾಮಿಗಳು ವಹಿಸಿದ್ದರು.
ಅತಿಥಿಗಳಾಗಿ ಹಿರಿಯ ಸಾಹಿತಿಗಳು ಆರ್ ಬಿ ಚಿಲಮಿ, ಬೆಂಗಳೂರಿನ ಸಾಹಿತಿಗಳಾದ ಶಿವಲಿಂಗ ಜವಳಗಿ ಮನೋಳಿ, ಆತ್ಮಾನಂದ ಕಡಕೋಳ, ವೈ ಬಿ ಕಡಕೋಳ ರ ಪತ್ನಿ ಶಿವಲೀಲಾ ಕಡಕೋಳ ಹಾಗೂ ಮನೋಳಿ ಕುಟುಂಬದ ಶಾಂತಾ ತಿಪ್ಪಣ್ಣ ಮನೋಳಿ, ಶ್ರೀ ಶೈಲ ಪತ್ರೆಪ್ಪ ಮನೋಳಿ, ಈರಣ್ಣ ತಿಪ್ಪಣ್ಣ ಮನೋಳಿ, ಸಾವಿತ್ರಿ ಈರಣ್ಣ ಮುನವಳ್ಳಿ, ಆನಂದ ತಿಪ್ಪಣ್ಣ ಮನೋಳಿ, ಶೈಲಾ ಆನಂದ ಮುನವಳ್ಳಿ,, ಜಯರಾಜ ರುದ್ರಪ್ಪ ಮನೋಳಿ ಸೇರಿದಂತೆ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.