ಶ್ರಮಿಕರತ್ನ, ಅತ್ಯುತ್ತಮ ಶಾಲೆ ಪ್ರಶಸ್ತಿಪ್ರದಾನ ಧಾರವಾಡದಲ್ಲಿ
ಧಾರವಾಡ: ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಡಾ,ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ಪೆಬ್ರವರಿ 24 ರಂದು ಶನಿವಾರ ಮಧ್ಯಾಹ್ನ 2 ಗಂಟೆಗೆ, ರೋಹನ್ ಕೇರ್ ಫೌಂಡೇಶನ್ ಬೆಂಗಳೂರು, ಸಾಧನಾ ಮಹಿಳಾ ಮತ್ತು ಮಕ್ಕಳ, ಮಾನವ ಹಕ್ಕುಗಳ ಸಂರಕ್ಷಣಾ ಕೇಂದ್ರ ಧಾರವಾಡ ಇವರುಗಳ ಜಂಟಿ ಆಶ್ರಯದಲ್ಲಿ, ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮುನವಳ್ಳಿ ಗ್ರಾಮದ ಶಿಕ್ಷಕ ಸಾಹಿತಿ ವಾಯ್ ಬಿ ಕಡಕೋಳರವರ ಸಂಪಾದಕತ್ವದಲ್ಲಿ, ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದ ಆಶುಕವಿ ಭಜನಾಕಾರ ದಿವಂಗತ ಚಂದ್ರಪ್ಪ ಛಲವಾದಿ ಇವರು ಬರೆದ ಹುಲಿಯು ಹುಟ್ಟಿತು ಕಿತ್ತೂರು ನಾಡಾಗ ಹಾಡುಗಳ ಪುಸ್ತಕದ ಲೋಕಾರ್ಪಣೆ, ಹಾಗೂ ವಿವಿಧ ರಂಗದ ಸಾಧಕರಿಗೆ ಶ್ರಮಿಕರತ್ನ, ಅತ್ಯುತ್ತಮ ಶಾಲೆ ಪ್ರಶಸ್ತಿಪ್ರದಾನ ಸಮಾರಂಭವನ್ನು ಏರ್ಪಡಿಸಲಾಗಿದೆ. ಈ ಸಮಾರಂಭವನ್ನು ಧಾರವಾಡ ಗ್ರಾಮೀಣದ ಹೆಚ್ಚುವರಿ ಪೋಲಿಸ್ ಅಧಿಕ್ಷಕರಾದ ನಾರಾಯಣ ಭರಮನಿ ಉದ್ಘಾಟಿಸಲಿದ್ದು, ಪುಸ್ತಕವನ್ನು ನಿರ್ದೇಶಕರು ರಾಜ್ಯ ಶಾಲಾ ನಾಯಕತ್ವ ಶೈಕ್ಷಣಿಕ ಯೋಜನೆ ಮತ್ತು ನಿರ್ವಹಣಾ ಸಂಸ್ಥೆಯ ನಿರ್ದೇಶಕರಾದ ಡಾ, ಬಿ ಕೆ ಎಸ್ ವರ್ದನರವರು ಲೋಕಾರ್ಪಣೆ ಮಾಡುವರು, ಅತ್ಯುತ್ತಮ ಶಾಲೆ ಪ್ರಶಸ್ತಿಯನ್ನು ಬೆಂಗಳೂರಿನ ರೋಹನ್ ಕೇರ್ ಫೌಂಡೇಶನ್ ಮುಖ್ಯಸ್ಥರು ಮಂಜುನಾಥ ಕೃಷ್ಣಮೂರ್ತಿ ಪ್ರದಾನ ಮಾಡುವರು, ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ, ಶ್ರಮಿಕರತ್ನ ರಾಜ್ಯ ಪ್ರಶಸ್ತಿಪ್ರದಾನ ಮಾಡುವರು ಸಾಧನಾ ಮಹಿಳಾ ಮತ್ತು ಮಕ್ಕಳ, ಮಾನವ ಹಕ್ಕುಗಳ ಸಂರಕ್ಷಣಾ ಕೇಂದ್ರದ ಸಂಸ್ಥಾಪಕಿ ಡಾ,ಇಸಾಬೆಲಾ ಝೇವಿಯರ್ ಅಧ್ಯಕ್ಷತೆ ವಹಿಸುವರು.
ಕರ್ನಾಟಕ ವಿದ್ಯಾವರ್ಧಕ ಸಂಘದ ಕಾರ್ಯಕಾರಿ ಸದಸ್ಯರಾದ ಡಾ.ಶ್ರೀಶೈಲ ಹುದ್ದಾರ, ವಿಶ್ವೇಶ್ವರಿ ಹಿರೇಮಠ, ಕೋಶಾದ್ಯಕ್ಷರಾದ ಸತೀಶ ತುರಮರಿ, ಹೆಬ್ಬಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ನಿಂಗಪ್ಪ ಮೊರಬದ ಅಕ್ಷರತಾಯಿ ಲೂಸಿ ಸಾಲ್ಡಾನ, ಡಾ.ರೇಣುಕಾ ಅಮಲಝರಿ ಮೈತ್ರಾದೇವಿ ವಸ್ತ್ರದ ಚಂದ್ರಶೇಖರ ಮಾಡಲಗೇರಿ ವಾಯ್ ಬಿ ಕಡಕೋಳ ಮಲ್ಲಿಕಾರ್ಜುನ ಉಪ್ಪಿನ ಮುಂತಾದವರ ಉಪಸ್ಥಿತಿಯಲ್ಲಿ, ಈ ಕಾರ್ಯಕ್ರಮ ಜರುಗಲಿದೆ ಎಂದು ಸಂಘಟಕ ಎಲ್ ಐ ಲಕ್ಕಮ್ಮನವರ ಪ್ರಕಟಣೆಯಲ್ಲಿ ತಿಳಿಸಿದರು.