ಯರಗಟ್ಟಿ: ಯರಗಟ್ಟಿ ವಲಯ ಮಟ್ಟದ ಟಾಯ್ ಬೇಸ್ಡ್ ಕಾರ್ಯಕ್ರಮದ ಅಡಿಯಲ್ಲಿ ಯರಗಟ್ಟಿ ಹಾಗೂ ಸತ್ತಿಗೇರಿ ಕ್ಲಸ್ಟರ್ಗಳಿಂದ ಕನ್ನಡ ಭಾಷೆಯ ಆಟಿಕೆಗಳನ್ನು ಪ್ರದರ್ಶನ ಮಾಡಿದ್ದರು.
ಶಿವಾಪುರ ಕ್ಲಸ್ಟರ್ ನಿಂದ ಇಂಗ್ಲೀಷ್ ಭಾಷೆಯ ಆಟಿಕೆಗಳನ್ನು ಪ್ರದರ್ಶನ ಮಾಡಿದ್ದರು ಹಾಗೆಯೇ ತಲ್ಲೂರು ಕ್ಲಸ್ಟರ್ ನಿಂದ ಪರಿಸರ ಅಧ್ಯಯನಕ್ಕೆ ಸಂಬಂಧಿಸಿದ ಕಲಿಕಾ ಉಪಕರಣಗಳನ್ನು ಪ್ರದರ್ಶನ ಮಾಡಿದ್ದರು ಯರಝರ್ವಿ ಕ್ಲಸ್ಟರ್ ನಿಂದ ಗಣಿತ ವಿಷಯಕ್ಕೆ ಸಂಬಂಧಿಸಿದ ಆಟಿಕೆಗಳನ್ನು ಪ್ರದರ್ಶನ ಮಾಡಲಾಗಿತ್ತು.
ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಪ್ರಧಾನ ಗುರುಗಳು ಹಾಗೂ ಎಲ್ಲಾ ಸಿಬ್ಬಂದಿ ವರ್ಗದವರು ಕಾರ್ಯಕ್ರಮವನ್ನು ಚೆನ್ನಾಗಿ ಆಯೋಜನೆ ಮಾಡಿದ್ದರು.
ಯರಗಟ್ಟಿ ಶಿವಾಪುರ ತಲ್ಲೂರ ಸತ್ತಿಗೇರಿ ಹಾಗೂ ಯರಝರ್ವಿ ಕ್ಲಸ್ಟರ್ ಗಳಿಂದ ಎಲ್ಲಾ ನಲಿ ಕಲಿ ಶಿಕ್ಷಕರು ಬೋಧನೋಪಕರಣಗಳನ್ನು ಪ್ರದರ್ಶನಕ್ಕಾಗಿ ತಂದಿದ್ದರು.
ಉದ್ಘಾಟನಾ ಸಮಾರಂಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮೋಹನ್ ದಂಡಿನ್, ಕ್ಷೇತ್ರ ಸಮನ್ವಯಾಧಿಕಾರಿಗಳಾದ ಬಿ ಎನ್ ಬ್ಯಾಳಿ, ಯರಗಟ್ಟಿಯ ಪ್ರಧಾನ ಗುರುಗಳಾದ ಎ ಎ ಮಕ್ತುಮನವರ, ಶಿಕ್ಷಣ ಸಂಯೋಜಕರಾದ ಎಮ್ ಡಿ ಹುದ್ದಾರ, ಬಿ ಆರ್ ಪಿ ಗಳಾದ ಬಿ ಐ ಚಿನಗುಡಿ ರತ್ನಾ ಸೇತಸನದಿ ಹಾಗೂ ಸಮನ್ವಯ ಶಿಕ್ಷಣ ಸಂಪನ್ಮೂಲ ಶಿಕ್ಷಕರಾದ ವೈ. ಬಿ. ಕಡಕೋಳ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕ ಘಟಕ ದ ಪ್ರತಿನಿಧಿಗಳಾದ ಎಸ್ ಬಿ ಮಿಕಲಿ, ಎಚ್ ವೈ ಗೌಡರ್, ಮಲ್ಲಪ್ಪ ಯರಝರ್ವಿ ಸಿಆರ್‌ಪಿಗಳಾದ ಗುರು ದೇವಿ ಎನ್ ಮಲಕಣ್ಣವರ, ಬಿ ಎಸ್ ಸಿದ್ಧ ಬಸನ್ನವರ.ಅರ್ಜುನ ಮುಳ್ಳೂರ, ಎಂ.ಎಂ ಮಲಕಣ್ಣವರ್, ನಿರ್ಣಾಯಕರಾಗಿ ಮೀನಾಕ್ಷಿ ಎಂ ಮುರನಾಳ ನಾಗೇಶ ಹೊನ್ನಳ್ಳಿ, ಎಸ್ ಎಂ ಕುಂಬಾರ್, ಜಿ ಎಸ್ ಜಿಪ್ಪಲಕಟ್ಟಿ, ಭಾಗವಹಿಸಿ ದ್ದರು.
ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್‌ಡಿಎಂಸಿಯ ಸದಸ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉದ್ಘಾಟಕರಾಗಿ ಆಗಮಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮೋಹನ್ ದಂಡಿನ್ ಸಸಿಗೆ ನೀರುಣಿಸುವ ಮೂಲಕ ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಿ ಬೋಧನೋಪಕರಣಗಳ ಮಹತ್ವವನ್ನು ಎಲ್ಲಾ ಶಿಕ್ಷಕರಿಗೆ ತಿಳಿಸಿಕೊಟ್ಟರು. ಇಂದು ಪ್ರದರ್ಶನ ಗೊಳ್ಳುವ ಬೋಧನೋಪಕರಣಗಳನ್ನು ಒಬ್ಬರಿಗೊಬ್ಬರು ವಿನಿಮಯ ಮಾಡಿಕೊಂಡು ತಮ್ಮ ತಮ್ಮ ಶಾಲೆಗಳಲ್ಲಿ ಭೋಧನೆಯ ಸಂದರ್ಭದಲ್ಲಿ ಕಲಿಕೆ ಪರಿಣಾಮಕಾರಿಯಾರಿಯಾಗಲು ಅಳವಸಿಕೊಳ್ಳುವ ಮೂಲಕ ಗುಣಾತ್ಮಕ ಶಿಕ್ಷಣ ಜರುಗುವಂತೆ ಕ್ರಮ ಕೈಗೊಳ್ಳಲು ಕರೆ ನೀಡಿದರು. ಕ್ಷೇತ್ರ ಸಮನ್ವಯಾಧಿಕಾರಿಗಳಾದ ಬಿ ಎನ್ ಬ್ಯಾಳಿ ಮಾತನಾಡಿ ಶಿಕ್ಷಣ ದ ಮಹತ್ವ ಹಾಗೂ ಜೀವನದಲ್ಲಿ ಏನಾದರೂ ಸಾಧನೆ ಮಾಡುವ ಕುರಿತು ತಿಳಿಸಿದರು.
ಈ ಕಾರ್ಯಕ್ರಮದ ನೋಡಲ್ ಅಧಿಕಾರಿಗಳಾದ ವ್ಹಿ.ಸಿ ಹಿರೇಮಠ ಕಾರ್ಯಕ್ರಮದ ಮಹತ್ವ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಯರಗಟ್ಟಿ ಸಿಆರ್ ಪಿ ವಿ ಎಸ್ ಬಡಿಗೇರ ಸ್ವಾಗತಿಸಿದರು. ಎಂ.ಎಂ ಮಲಕಣ್ಣವ ನಿರೂಪಿಸಿದರು. ಬಿ ಎಸ್ ಸಿದ್ದಬಸನ್ನವರ ವಂದಿಸಿದರು.
ಆಟಿಕೆಗಳು ನಮ್ಮ ಬಾಲ್ಯದಲ್ಲಿ ನಾವು ಬಹಳ ಕುತೂಹಲದಿಂದ ಬಳಕೆ ಮಾಡುತ್ತಿದ್ದ ವಸ್ತುಗಳು ನೂಲುವ ಟಾಪ್ (ಲ್ಯಾಟೂ) ನಂತಹ ಸಾಂಪ್ರದಾಯಿಕ ಆಟಿಕೆಯಿಂದ ಇತ್ತೀಚಿನ ಗೇಮ್ ಕನ್ಸೋಲ್‌ಗಳವರೆಗೆ, ನಮ್ಮ ನೆಚ್ಚಿನ ಆಟಿಕೆಗಳೊಂದಿಗೆ ಆಟವಾಡುವ ನಮ್ಮ ಬಾಲ್ಯದ ಸ್ನೇಹಿತರೊಂದಿಗೆ ನಾವು ಕಳೆದ ಸಮಯವನ್ನು ನಾವು ಇಂದಿಗೂ
ಅದ್ಭುತವಾದ ನೆನಪುಗಳನ್ನು ಮಾಡಿಕೊಳ್ಳಲು ಸಹಕಾರಿ, ಅವುಗಳು ಕಲಿಕೆಗೆ ಪರಿಣಾಮಕಾರಿ ಸಂಪನ್ಮೂಲಗಳಾಗಿ ಇಂದು ಬಳಕೆಯಾಗುತ್ತಿವೆ. ಇವು ಅರಿವಿನ ಮತ್ತು ಭಾವನಾತ್ಮಕ ಬೆಳವಣಿಗೆಯನ್ನು ಬೆಂಬಲಿಸುತ್ತವೆ. ಆದ್ದರಿಂದ, ವಿದ್ಯಾರ್ಥಿಗಳ ಕಲಿಕೆಯನ್ನು ಸುಧಾರಿಸಲು ನಮ್ಮ ತರಗತಿಗಳಲ್ಲಿ ಆಟಿಕೆಗಳನ್ನು ನಮ್ಮ ಸುತ್ತ ಮುತ್ತ ಲಭ್ಯವಿರುವ ಕಚ್ಚಾವಸ್ತುಗಳ ಬಳಕೆ ಮಾಡುವ ಮೂಲಕ ಭೋಧನೋಪಕರಣಗಳನ್ನು ತಯಾರಿಸುವ ಮೂಲಕ ನಮ್ಮ ತರಗತಿ ಕೊಠಡಿಗಳ
ಬೋಧನೆ ಜರುಗುತ್ತಿವೆ.ಅಂತಹ ಭೋಧನೋಪಕರಣಗಳ ಪ್ರದರ್ಶನ ಯರಗಟ್ಟಿಯಲ್ಲಿ ಜರುಗಿತು.
ಆಟಿಕೆಗಳನ್ನು ಬಳಸುವುದರಿಂದ ಕಲಿಯುವವರಿಗೆ ಅನ್ವೇಷಿಸುವ, ಕಲ್ಪಿಸಿಕೊಳ್ಳುವ, ಗಮನಿಸುವ, ರಚಿಸುವ, ವ್ಯಕ್ತಪಡಿಸುವ ಮತ್ತು ಮುಖ್ಯವಾಗಿ ತೊಡಗಿಸಿಕೊಳ್ಳುವ ಮತ್ತು ಆಡುವಂತಹ ಅವಕಾಶಗಳನ್ನು ಒದಗಿಸುತ್ತದೆ ಎಂಬುದು ಈ ಕಲಿಕೋಪಕರಣಗಳು ಸಾಕ್ಷೀಕರಿಸಿದ್ದವು.. ಪರಿಕಲ್ಪನೆಗಳು ಮತ್ತು ವಿಷಯಗಳೊಂದಿಗೆ ಸೂಕ್ತವಾಗಿ ಮತ್ತು ಕಾರ್ಯತಂತ್ರವಾಗಿ ಮ್ಯಾಪ್ ಮಾಡಿ ಆಟಿಕೆಗಳನ್ನು ತಯಾರಿಸುವುದರಿಂದ ಹಿಡಿದು ಅವರೊಂದಿಗೆ ಭೋಧನೆ ಪ್ರಕ್ರಿಯೆಯು ಅನುಭವದ ಕಲಿಕೆಯನ್ನು ಉತ್ತೇಜಿಸುತ್ತದೆ.ಎಂಬುದು ಈ ಕಲಿಕೋಪಕರಣಗಳು ಅವುಗಳ ವಿವರಣೆಯನ್ನು ಶಿಕ್ಷಕ ಶಿಕ್ಷಕಿಯರು ಹೇಳುವಾಗ ಕಂಡು ಬಂದಿತು. ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮೋಹನ್ ದಂಡಿನ ಕ್ಷೇತ್ರ ಸಮನ್ವಯಾಧಿಕಾರಿಗಳಾದ ಬಿ ಎನ್ ಬ್ಯಾಳಿಯವರಾದಿಯಾಗಿ ಎಲ್ಲರೂ ಇವುಗಳನ್ನು ವೀಕ್ಷಿಸಿ ಮಾಹಿತಿಯನ್ನು ಪಡೆದರು.