ಯರಗಲ್ ( ಬಿಕೆ ) ಶ್ರೀ ಕಾಳಿಕಾದೇವಿ ಜಾತ್ರೆ ಇಂದಿನಿಂದ

Must Read

ಸಿಂದಗಿ: ತಾಲೂಕಿನ ಯರಗಲ್ (ಬಿಕೆ) ಗ್ರಾಮದಲ್ಲಿ ಶ್ರೀ ಕಾಳಿಕಾದೇವಿ ಜಾತ್ರಾ ನಿಮಿತ್ತವಾಗಿ ಪ್ರತಿವರ್ಷದಂತೆ ಈ ವರ್ಷವೂ ಕೂಡ 11 ದಿನಗಳ ಕಾಲ ನಡೆದುಕೊಂಡು ಬಂದಿರುವ ಶ್ರೀದೇವಿ ಮಹಾತ್ಮೆ ಪುರಾಣ ಕಾರ್ಯಕ್ರಮ ಇಂದು ಮಹಾಮಂಗಲಗೊಳ್ಳಲಿದೆ.

ಏ. 14 ಶುಕ್ರವಾರ ದಂದು ಬೆಳಿಗ್ಗೆ 6 ಘಂಟೆಗೆ ಮಾಹಾಮಸ್ತಾಭಿಷೇಕದ ನಂತರ 9 ಘಂಟೆಗೆ ವೇದಮೂರ್ತಿ ಪೀಠಾಧಿಪತಿಗಳ ಮನೆಯಿಂದ ಡೊಳ್ಳಿನ ವಾಲಗ ಮತ್ತು ಪುರವಂತರ ಸೇವೆಯೊಂದಿಗೆ ಕಾಳಿಕಾ ದೇವಿಯ ಪಲ್ಲಕ್ಕಿ ಮೆರವಣಿಗೆ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಬಹಳಷ್ಟು ವಿಜೃಂಭಣೆಯಿಂದ ಸಂಚರಿಸಲಿದೆ ಇದಾದ ನಂತರ ರಾತ್ರಿ 8.30 ಘಂಟೆಗೆ ಬಿಕೆ ಮೆಲೋಡಿಸ್ ಅವರಿಂದ ಹಾಸ್ಯ ರಸಮಂಜರಿ ಕಾರ್ಯಕ್ರಮ ಜರುಗಲಿದೆ ಕಾರಣ ರಾಜ್ಯದ ಮೂಲೆ ಮೂಲೆ ಯಲ್ಲಿರುವ ದೇವಿಯ ಸಮಸ್ತ ಭಕ್ತಾದಿಗಳು ಆಗಮಿಸಿ ದೇವಿಯ ಕೃಪೆಗೆ ಪಾತ್ರರಾಗಬೇಕು ಎಂದು ಶ್ರೀ ಕಾಳಿಕಾದೇವಿ ಸಮಿತಿಯ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group