ಮೂಡಲಗಿ: ಯೋಗ ಸಾಧನೆ ನಿಂತ ನೀರಲ್ಲ. ಸ್ಪರ್ಧಾಳುಗಳು ನಿತ್ಯ ಬದುಕಿನಲ್ಲಿ ಯೋಗವನ್ನು ಒಂದು ಭಾಗವಾಗಿಸಿಕೊಂಡಾಗ ಮಾತ್ರ ಸ್ಪರ್ಧಾತ್ಮಕವಾಗಿ ಉನ್ನತ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ಕಲ್ಲೊಳಿಯ ಎಸ್.ಆರ್.ಇ. ಸಂಸ್ಥೆಯ ಚೇರಮನ್ನರಾದ ಬಸಗೌಡ ಪಾಟೀಲ ನುಡಿದರು.
ತಾಲೂಕಿನ ಕಲ್ಲೋಳಿ ಪಟ್ಟಣದ ಶ್ರೀ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಪ್ರಥಮ ದರ್ಜೆ ಕಾಲೇಜಿನ ಆತಿಥ್ಯದಲ್ಲಿ ಆಯೋಜಿಸಲಾಗಿದ್ದ ೨೦೨೪-೨೫ ನೇ ಸಾಲಿನ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಅಂತರ್ ಕಾಲೇಜುಗಳ ಏಕವಲಯ ಪುರುಷರ ಹಾಗೂ ಮಹಿಳೆಯರ ಯೋಗಾಸನ ಪಂದ್ಯಾವಳಿ ಮತ್ತು ವಿಶ್ವವಿದ್ಯಾಲಯದ ತಂಡದ ಎರಡು ದಿನಗಳ ಆಯ್ಕೆ ಪ್ರಕ್ರಿಯೆಯ ಬಹುಮಾನ ವಿತರಣಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಕ್ಕಳ ಸರ‍್ವಾಂಗೀಣ ಪ್ರಗತಿಗೆ ಯೋಗ ಮುಖ್ಯವಾಗಿದೆ. ಯೋಗಾಭ್ಯಾಸವನ್ನು ಪ್ರತಿ ಶಾಲಾ ಕಾಲೇಜುಗಳಲ್ಲಿ ಕಡ್ಡಾಯ ಮಾಡಬೇಕೆಂದು ಕರೆ ನೀಡಿದರು.
ಸ್ಪರ್ಧೆಯ ಮುಖ್ಯ ತೀರ‍್ಪುಗಾರ ಬೆಂಗಳೂರಿನ ಅಂತಾರಾಷ್ಟ್ರೀಯ ಯೋಗಾಸನ ತಾಂತ್ರಿಕ ಮುಖ್ಯಾಧಿಕಾರಿಗಳಾದ ಡಾ. ಪ್ರೇಮಕುಮಾರ ಮುದ್ದಿ ಮಾತನಾಡಿ, ಯೋಗಾಸನ ಸ್ಪರ್ಧೆಯು ಅತ್ಯಂತ ಯಶಸ್ವಿಯಾಗಿ ಹಾಗೂ ಪಾರದರ‍್ಶಕವಾಗಿ ಜರುಗುವಲ್ಲಿ ಆತಿಥೇಯ ಕಾಲೇಜು ಶ್ರಮಿಸಿದ್ದನ್ನು ಶ್ಲಾಘಿಸಿದರು.
ಸಮಾರಂಭದಲ್ಲಿ ಸಂಸ್ಥೆಯ ನಿರ‍್ದೇಶಕ ಎಸ್.ಎಂ. ಖಾನಾಪೂರ, ಕಾಲೇಜಿನ ಪ್ರಾಚಾರ‍್ಯ ಡಾ. ಸುರೇಶ ಹನಗಂಡಿ, ಕ್ರೀಡಾ ಕಾರ್ಯದರ್ಶಿ ಬಿ.ಬಿ.ವಾಲಿ, ಪಾಶ್ಚಾಪೂರ ಸ.ಪ್ರ.ದ ಕಾಲೇಜಿನ ದೈಹಿಕ ನಿರ‍್ದೇಶಕ ಅಬ್ದುಲ್ ಲತಿಪ್ ಎ. ನದಾಫ್, ಯೋಗಾಸನ ಸಂಘಟನಾ ಕಾರ‍್ಯದರ‍್ಶಿ ಬಿ.ಕೆ. ಸೊಂಟನವರ, ಪಂದ್ಯಾವಳಿ ತೀರ‍್ಪುಗಾರರಾದ ಬಿ.ಎಸ್.ಪಾಟೀಲ, ಶ್ರೀಶೈಲ್ ಗೋಪಶೆಟ್ಟಿ, ಎ.ಆಯ್.ಸಂಕನ್ನವರ, ವಿವಿಧ ಕಾಲೇಜುಗಳ ದೈಹಿಕ ನಿರ‍್ದೇಶಕರು, ಅಧ್ಯಾಪಕರು, ಕ್ರೀಡಾಪಟುಗಳು ಇನ್ನಿತರರು ಉಪಸ್ಥಿತರಿದ್ದರು.
ಪ್ರೊ. ಡಿ.ಎಸ್. ಹುಗ್ಗಿ ನಿರೂಪಿಸಿದರು. ಎನ್ನೆಸ್ಸೆಸ್ ಕಾರ‍್ಯಕ್ರಮಾಧಿಕಾರಿ ಶಂಕರ ನಿಂಗನೂರ ಸ್ವಾಗತಿಸಿದರು. ಡಾ. ಕೆ.ಎಸ್. ಪರವ್ವಗೋಳ ವಂದಿಸಿದರು.
ಸ್ಪರ್ಧಾ ವಿಜೇತರು
ಯುನಿರ‍್ಸಿಟಿ ಬ್ಲೂ ಆಯ್ಕೆ (ಪುರುಷರ ವಿಭಾಗ)
ಸಂಜು ಘೋಡಗೇರಿ ಎಸ್.ಆರ್.ಇ.ಎಸ್. ಪ್ರಥಮ ದರ್ಜೆ ಕಾಲೇಜು ಕಲ್ಲೋಳಿ, ರವಿಕಾಂತ ಛಲವಾದಿ ಎಸ್.ಎಂ.ಕೆ.ಬಿ.ಪಿ. ಕಾಲೇಜು ವಿಜಯಪುರ, ಪಂಚು ಕುರಿ ಎ.ಜಿ. ಕಾಲೇಜು ಮುನವಳ್ಳಿ, ಮಂಜುನಾಥ ಹಡಪದ ಎ.ಸಿ.ಎಂ. ಕಾಲೇಜು ಮುದ್ದೇಬಿಹಾಳ, ರಾಜು ಮಾನೆ ಸ.ಪ್ರ.ದ ಕಾಲೇಜು ವಿಜಯಪುರ, ಪ್ರಮೋದ ವಕ್ಕುಂದ ಎ.ಜಿ.ಕಾಲೇಜು ಮುನವಳ್ಳಿ (ಮಹಿಳಾ ವಿಭಾಗ) ನಿರ‍್ಮಲಾ ಕೊಡ್ಲಿಕಾರ ಎಂ.ಇ.ಎಸ್. ದೈಹಿಕ ಶಿಕ್ಷಣ ಕಾಲೇಜು ಮೂಡಲಗಿ, ಪ್ರಿಯಾಂಕಾ ಬಳೋಬಾಳ ಎಸ್.ಆರ್.ಇ.ಎಸ್. ಪ್ರಥಮ ದರ್ಜೆ ಕಾಲೇಜು ಕಲ್ಲೋಳಿ, ಸವಿತಾ ಕೊಡ್ಲಿಕಾರ ಶ್ರೀ ಬಸವೇಶ್ವರ ಪದವಿ ಕಾಲೇಜು ಕಲ್ಲೋಳಿ, ಶಂಕ್ರವ್ವ ಗೊಬ್ಬರಗುಂಪಿ ಎಸ್.ಸಿ.ಎಂ. ಕಾಲೇಜು ಮುನವಳ್ಳಿ, ಲಕ್ಷ್ಮಿ ಚುಲ್ಕಿ ಎ.ಜಿ.ಕಾಲೇಜು ಮುನವಳ್ಳಿ, ನಮ್ರತಾ ಪಾಟೀಲ ಎಸ್.ಸಿ.ಕಾಲೇಜು ಮುನವಳ್ಳಿ ಆಯ್ಕೆಯಾಗಿದ್ದಾರೆ.
ಕಲಾತ್ಮಕ ಯೋಗಾಸನ ವಿಭಾಗದಲ್ಲಿ ಗಂಗವ್ವ ಸನದಿ ಎಸ್.ಆರ್.ಇ.ಎಸ್. ಪ್ರಥಮ ದರ್ಜೆ ಕಾಲೇಜು ಕಲ್ಲೋಳಿ(ಮ), ರಾಜು ಮಾನೆ ಸ.ಪ್ರ.ದ. ಕಾಲೇಜು ವಿಜಯಪುರ(ಪು). ತಾಳಬದ್ಧ ಯೋಗಾಸನ ವಿಭಾಗ: ನರ‍್ಮಲಾ ಕೊಡ್ಲಿಕಾರ ಎಂ.ಇ.ಎಸ್. ದೈಹಿಕ ಶಿಕ್ಷಣ ಕಾಲೇಜು ಮೂಡಲಗಿ(ಮ), ಸಂಜು ಘೋಡಗೇರಿ ಎಸ್.ಆರ್.ಇ.ಎಸ್. ಪ್ರಥಮ ದರ್ಜೆ ಕಾಲೇಜು ಕಲ್ಲೋಳಿ(ಪು). ಸಾಂಪ್ರದಾಯಿಕ ಯೋಗಾಸನ ವಿಭಾಗ: ಪ್ರೇಮಾ ಕೊಡ್ಲಿಕಾರ ಎಸ್.ಆರ್.ಇ.ಎಸ್. ಪ್ರಥಮ ದರ್ಜೆ ಕಾಲೇಜು ಕಲ್ಲೋಳಿ(ಮ), ರವಿಕಾಂತ್ ಚಲವಾದಿ ಎಸ್.ಎಂ.ಕೆ.ಬಿ.ಪಿ. ಕಾಲೇಜು ವಿಜಯಪುರ(ಪು) ಇವರು ಆಯ್ಕೆಯಾದರು.
ಗುಂಪು ಯೋಗಾಸನ ವಿಭಾಗ: ಪುರುಷರ ವಿಭಾಗದಲ್ಲಿ ಎ.ಜಿ. ಕಾಲೇಜು ಮುನವಳ್ಳಿ ತಂಡ(ಪ್ರಥಮ ಸ್ಥಾನ), ಎಸ್.ಆರ್.ಇ.ಎಸ್. ಪ್ರಥಮ ದರ್ಜೆ ಕಾಲೇಜು ಕಲ್ಲೋಳಿ ತಂಡ(ದ್ವಿತೀಯ ಸ್ಥಾನ), ಎಸ್.ಸಿ.ಎಂ ಕಾಲೇಜು ಮುನವಳ್ಳಿ ತಂಡ(ತೃತೀಯ ಸ್ಥಾನ) ಮಹಿಳಾ ವಿಭಾಗದಲ್ಲಿ ಎಸ್.ಸಿ.ಎಂ ಕಾಲೇಜು ಮುನವಳ್ಳಿ ತಂಡ(ಪ್ರಥಮ ಸ್ಥಾನ) ಎಸ್.ಆರ್.ಇ.ಎಸ್. ಪ್ರಥಮ ದರ್ಜೆ ಕಾಲೇಜು ಕಲ್ಲೋಳಿ ತಂಡ (ದ್ವಿತೀಯ ಸ್ಥಾನ) ಎ.ಜಿ. ಕಾಲೇಜು ಮುನವಳ್ಳಿ ತಂಡ(ತೃತೀಯ ಸ್ಥಾನ)ಗಳನ್ನು ಪಡೆದುಕೊಂಡವು.