Homeಸುದ್ದಿಗಳುಬೀದರನಲ್ಲಿ ಯೋಗ ದಿನ ಆಚರಣೆ

ಬೀದರನಲ್ಲಿ ಯೋಗ ದಿನ ಆಚರಣೆ

ಬೀದರ – ‘ಒಂದು ಭೂಮಿ ಒಂದು ಆರೋಗ್ಯಕ್ಕಾಗಿ ಯೋ’ ಘೋಷ ವಾಕ್ಯದಡಿಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನವನ್ನು ನಗರದ ಐತಿಹಾಸಿಕ ಕೋಟೆ ಆವರಣದಲ್ಲಿ ಆಚರಿಸಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಸಚಿವ ಈಶ್ವರ ಖಂಡ್ರೆ ಮಾತನಾಡಿ, ಒತ್ತಡದ ನಡುವೆ ನಾವೆಲ್ಲ ಬದುಕುತ್ತಿದ್ದೇವೆ ಒತ್ತಡದ ನಿವಾರಣೆಗಾಗಿ ಯೋಗ ವ್ಯಾಯಮ ಮಾಡಬೇಕು. ಮೊಬೈಲ್ ಬಳಕೆಯನ್ನು ಕಡಿಮೆ ಮಾಡಬೇಕು ಎಂದರು.

ಸಚಿವರ ಜೊತೆಗೆ ಶಾಸಕ ಶೈಲೇಂದ್ರ ಬೆಲ್ದಾಳೆ, ಡಿಸಿ ಶಿಲ್ಪಾ ಶರ್ಮಾ, ಜಿ ಪಂ ಸಿಇಓ ಗಿರೀಶ ಬದೋಲೆ, ಡಿಎಫ್ಒ ವಾನತಿ ಸೇರಿ ಅನೇಕರ ಗಣ್ಯರು, ನೂರಾರು ವಿದ್ಯಾರ್ಥಿಗಳು ಯೋಗ ಮಾಡಿದರು.

ವರದಿ : ನಂದಕುಮಾರ ಕರಂಜೆ, ಬೀದರ

RELATED ARTICLES

Most Popular

error: Content is protected !!
Join WhatsApp Group