ಓತಿಹಾಳ ಗ್ರಾಮದಲ್ಲಿ ಯೋಗ ದಿನಾಚರಣೆ

Must Read

ಸಿಂದಗಿ –  ಇಂದು ಸಿಂದಗಿ ತಾಲೂಕು ಬಂದಾಳ ಗ್ರಾಮ ಪಂಚಾಯತ್ ವ್ಯಾಪ್ತಿಯ ಓತಿಹಾಳ ಗ್ರಾಮದಲ್ಲಿರುವ ಅಮೃತ ಸರೋವರ ದಡದಲ್ಲಿ ಅಂತಾರಾಷ್ಟ್ರೀಯ ಯೋಗ ದಿವಸ ಆಚರಣೆಯನ್ನು ಜಿ.ಪಂ ಕಾರ್ಯನಿರ್ವಾಹಕ ಅಧಿಕಾರಿಗಳು ರಾಮು ಜಿ ಅಗ್ನಿ ಇವರ ನೇತ್ರತ್ವದಲ್ಲಿ ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಕಾರ್ಯನಿರ್ವಾಹಕ ಅಧಿಕಾರಿಗಳು ಹಲವು ಶತಮಾನಗಳ ಹಿಂದೆಯೇ ಭಾರತದ ಋಷಿಮುನಿಗಳು ವಿಶ್ವಕ್ಕೆ ಯೋಗದ ಮಹತ್ವ ತಿಳಿಸಿಕೊಟ್ಟಿರುತ್ತಾರೆ. ಆದರೂ ಇಂದಿನ ಆಧುನಿಕ ಜೀವನ ಶೈಲಿಯನ್ನು ಅಳವಡಿಸಿಕೊಂಡಿರುವದರಿಂದ ಯೋಗದಿಂದ ಇಂದಿನ ಯುವ ಪೀಳಿಗೆ ದೂರ ಉಳಿಯುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಯೋಗದಿಂದ ವಿದ್ಯಾರ್ಥಿಗಳಿಗೆ ಜ್ನಾಪಕ ಶಕ್ತಿ ಹೆಚ್ಚಾಗುತ್ತದೆ, ದೈಹಿಕವಾಗಿ, ಮಾನಸಿಕವಾಗಿ ಸ್ಥೈರ್ಯ ಬರುವದಲ್ಲದೇ ಅದರಿಂದ ಹಲವು ರೋಗರುಜಿನಗಳಿಂದ ಕೂಡಾ ದೂರ ಇರಬಹುದು ಎಂದು ತಿಳಿಸಿದರು.

ಪ್ರೌಢ ಶಾಲೆ ದೈಹಿಕ ಶಿಕ್ಷಕರಾದ ಶ್ರೀಮತಿ ಸವಿತಾ ಇಂಗಳಗಿ ಯವರು ಯೋಗವನ್ನು ನಡೆಸಿಕೊಟ್ಟರು ಸೂರ್ಯ ನಮಸ್ಕಾರದಲ್ಲಿ ಮುಖ್ಯವಾಗಿ ಮೂರು ವಿಧಗಳಿವೆ: ಹಠ ಸೂರ್ಯ ನಮಸ್ಕಾರ, ಅಯ್ಯಂಗಾರ್ ಸೂರ್ಯ ನಮಸ್ಕಾರ ಮತ್ತು ಅಷ್ಟಾಂಗ ಸೂರ್ಯ ನಮಸ್ಕಾರ ಇವುಗಳ ಉಪಯುಕ್ತ ಮಾಹಿತಿ ಮತ್ತು ಯೋಗಾಭ್ಯಾಸ ಮಾಡಿಸಿದರು.

ಈ ಸಂದರ್ಭದಲ್ಲಿ ನಿತ್ಯಾನಂದ ಯಲಗೋಡ ಸಹಾಯಕ ನಿರ್ದೇಶಕರು ಗ್ರಾ ಉ, ಗ್ರಾಮ ಅದ್ಯಕ್ಷರು ಯಮನಪ್ಪ ಹೊಸಮನಿ, ಐಇಸಿ ಸಂಯೋಕರು ಭೀಮರಾಯ ಚೌಧರಿ, ಕಾರ್ಯದರ್ಶಿ ರಾಜಾಸಾಬ್ ಮುಜಾವರ, ಪ್ರ.ದ.ಸ. ರಾಜಶೇಖರ ಹಿರೇಕುರುಬರ, ರಾಜು ವಡ್ಡರ, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಶ್ವಿಗೊಳಿಸಿದರು.

Latest News

ಗುಣಾತ್ಮಕ ಶಿಕ್ಷಣದ ಮೌಲ್ಯವನ್ನು ಪ್ರತಿಬಿಂಬಿಸಿದ ಜ್ಞಾನ ಗಂಗೋತ್ರಿಯ ವಾರ್ಷಿಕ ಸ್ನೇಹ ಸಮ್ಮೇಳನ

ಸಂಸ್ಕಾರ ಮತ್ತು ಸಾಧನೆಯ ಅನನ್ಯ ಸಂಗಮವಾಗಿ ಮೂಡಿಬಂದ ‘ಸ್ಪಂದನ’ ಕಾರ್ಯಕ್ರಮಮೂಡಲಗಿ: ಕಳೆದ ಹಲವು ವರ್ಷಗಳಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇಕಡಾ ೧೦೦ರಷ್ಟು ಫಲಿತಾಂಶ ದಾಖಲಿಸುತ್ತಾ ಬಂದಿರುವ ರಾಜಾಪೂರ...

More Articles Like This

error: Content is protected !!
Join WhatsApp Group