ಕವನ: ಯೋಗದಿಂದ ಸಕಲವೂ ಸಶಕ್ತ

Must Read

ಯೋಗದಿಂದ ಸಕಲವೂ ಸಶಕ್ತ

(ಅಂತಾರಾಷ್ಟ್ರೀಯ ಯೋಗ ದಿನದ ಶುಭಾಶಯಗಳು)

ಮನವ ಕೇಂದ್ರೀಕರಿಸಿ ಚಿಂತನೆಯಲ್ಲಿ ತೊಡಗಿಸಿ ಧ್ಯಾನವೆಂಬಸ್ತ್ರದಿ ತನುಮನ ಪವಿತ್ರಸ್ನಾನ ಗೈಯುತಲಿ
ಚಿತ್ತವೃತ್ತಿಯ ನಾಶಗೊಳಿಸಿ ಸುಪ್ತಶಕ್ತಿಗಳ ಜಾಗೃತಗೊಳಿಸಿ
ಆತ್ಮಪರಮಾತ್ಮನೊಳು ಲೀನಗೊಳಿಸಿ ಜೀವನ್ಮುಕ್ತಿಯೆಡೆಗೊಯ್ವುದೀ ಯೋಗ//

ದೇಹ ಮನಸ್ಸುಗಳ ಸಾಮರಸ್ಯವನ್ನೇರ್ಪಡಿಸಿ
ಚಂಚಲಮನ ನಿಯಂತ್ರಿಸಿ ವ್ಯಕ್ತಿತ್ವ ಉನ್ನತೀಕರಣಗೊಳಿಸಿ
ಸಕಾರಾತ್ಮಕ ವ್ಯಕ್ತಿತ್ವ ಬಲಪಡಿಸಿ
ದೈಹಿಕಮಾನಸಿಕ ಆಧ್ಯಾತ್ಮಿಕ ಶಿಸ್ತಿನ ಸಾಂಗತ್ಯವನ್ನೇಏರ್ಪಡಿಸುವುದೀ ಯೋಗ//

ಆರೋಗ್ಯಭಾಗ್ಯವಿದು ಲಭಿಸುವುದು ದುರ್ಲಭವು
ಯೋಗಶಕ್ತಿಯಿಂದಲೇ ರೋಗಕ್ಕೆ ಮುಕ್ತಿಯು
ಪತಂಜಲಿ ಅಷ್ಟಾಂಗಯೋಗವೇ ಜ್ಞಾನದೀವಿಗೆಯು
ವಿಶ್ವಯೋಗಕ್ಕಿಂದು ಹಿರಿಮೆಗರಿಮೆ ಪ್ರಧಾನಿ ಮೋದಿಯು//

ಪತಂಜಲಿ ಯೋಗಮುನಿಗಳಿಂದಾರಂಭವೀ ಯೋಗ
ಅಂತರ್ದೇಹ ಸ್ವಾಸ್ಥ್ಯಕ್ಕೆ ಮಜ್ಜನವೀ ಯೋಗ
ಬ್ರಾಹ್ಮಿಮುಹೂರ್ತದಿ ಮಾಡು ನೀ ಸೂರ್ಯನಮಸ್ಕಾರ
ನಿತ್ಯದಲಿ ಮಾಡಲು ಸರ್ವಾಂಗಸುಂದರ ಯೋಗ
ಸಶಕ್ತನಾಗಿ ಸರ್ವಕಾರ್ಯದೊಳು ಸಫಲತೆಯ ಹೊಂದು//

ಕಲಿಕಾಲದಲ್ಲಿಹುದು ನೂರಾರು ರೋಗದ ಬೀಡು
ಯೋಗಪ್ರಾಣಾಯಾಮಗಳ ರೂಢಿಸು ದಿನಚರಿಯೊಳು
ದೇಹವೆಂಬ ಹಂದರವ ರೋಗದಿಂದ ಮುಕ್ತಗೊಳಿಸು
ಕುಟುಂಬ, ಸಮಾಜ, ರಾಷ್ಟ್ರದುನ್ನತಿಯ ಬೆಳೆಸು//


ಶ್ರೀಮತಿ ಗಿರಿಜಾ ಹಿರೇಮಠ

Latest News

ಎರಡು ಕವನಗಳು : ಡಾ. ಶಶಿಕಾಂತ ಪಟ್ಟಣ

ನಿನ್ನಿಂದ ನಗಬೇಕು ____________________ ನಿನ್ನ ಸುತ್ತ ನೂರು ಜನರು ನಿನ್ನಿಂದ ನಗಬೇಕು ಹೊರತು ನಿನ್ನ ನೋಡಿ ಅಲ್ಲ ನಗೆ ಮಲ್ಲಿಗೆ ಹಂಚಿ ಬಿಡುಯಾರಾದರೂ ಅತ್ತರೆ ನಿನಗಾಗಿ ಅಳಬೇಕೆ ಹೊರತು ನಿನ್ನಿಂದಲ್ಲ ಅಳು ನೋವು ನೀಡದಿರುನೀನು ನಕ್ಕಾಗ ಅವರು ನಕ್ಕು ನೀನು ಅತ್ತಾಗ ಅವರು ಅತ್ತರೆ ಅದುವೇ ಸ್ನೇಹ ಪ್ರೀತಿ ಜೀವನ ನಕ್ಕು ಬಿಡು ನಿನ್ನ...

More Articles Like This

error: Content is protected !!
Join WhatsApp Group