spot_img
spot_img

ಯೋಗವು ಭಾರತೀಯ ಪ್ರಾಚೀನ ಸಂಸ್ಕೃತಿಯ ಪ್ರತೀಕವಾಗಿದೆ’

Must Read

- Advertisement -

ಮೂಡಲಗಿ: ‘ಯೋಗ ಮತ್ತು ಆರ್ಯುವೇದ ಇವು ಭಾರತವು ಜಗತ್ತಿಗೆ ಕೊಟ್ಟಿರುವ ಅಮೂಲ್ಯ ಮೌಲ್ಯಗಳಾಗಿವೆ’ ಎಂದು ಸಾಹಿತಿ, ಪತ್ರಕರ್ತ ಬಾಲಶೇಖರ ಬಂದಿ ಹೇಳಿದರು.

ಇಲ್ಲಿಯ ಕರುನಾಡು ಸೈನಿಕ ತರಬೇತಿ ಕೇಂದ್ರದ ಆತಿಥ್ಯದಲ್ಲಿ ಭಾರತ ಸರ್ಕಾರದ ನೆಹರು ಯುವ ಕೇಂದ್ರ, ಹಳ್ಳೂರದ ಜೈ ಕರ್ನಾಟಕ ಅಂಗವಿಕಲರ ಗ್ರಾಮೀಣ ಅಭಿವೃದ್ಧಿ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ಆಚರಿಸಿದ 10ನೇ ವಿಶ್ವ ಯೋಗ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ಯೋಗವು ಭಾರತದ ಪ್ರಾಚೀನ ಸಂಸ್ಕøತಿ, ಪರಂಪರೆಯೊಂದಿಗೆ ಬಂದಿರುವಂತ ಬಹುದೊಡ್ಡ ಶಕ್ತಿಯಾಗಿದೆ ಎಂದರು.

ಯೋಗವು ಕೇವಲ ದೇಹವನ್ನು ಗಟ್ಟಿಮಾಡುವ ವ್ಯಾಯಾಮ ಆಗಿರದೆ ಅದೊಂದು ದೇಹ ಮತ್ತು ಮನಸ್ಸನ್ನು ಸದೃಢಗೊಳಿಸುವ ಕ್ರಿಯೆಯಾಗಿದೆ. ಒತ್ತಡ ನಿವಾರಣೆ, ಜ್ಞಾಪಕ ಶಕ್ತಿಯ ವೃದ್ಧಿ, ಆರೋಗ್ಯ ವೃದ್ದಿ ಎಲ್ಲದಕ್ಕಿಂತಲೂ ನಿತ್ಯ ಉಲ್ಲಾಸ ಮತ್ತು ಸಂತೋಷವನ್ನುಂಟು ಮಾಡುವ ಶಕ್ತಿ ಯೋಗಕ್ಕೆ ಇದೆ ಎಂದರು.

- Advertisement -

ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಸಿದ್ದಣ್ಣ ದುರದುಂಡಿ ಮಾತನಾಡಿ, ನಿತ್ಯ ಯೋಗ ಮಾಡುವ ಮೂಲಕ ಸದೃಢವಾದ ದೇಹ ಮತ್ತು ಮಾನಸಿಕ ನೆಮ್ಮದಿಯನ್ನು ಪಡೆಯಲು ಸಾಧ್ಯ ಎಂದರು.

ಯೋಗ ಸಾಧಕರಾದ ಹಳ್ಳೂರದ ಅಮಿತ ಸಪ್ತಸಾಗರ ಮತ್ತು ಚಿಕ್ಕೋಡಿಯ ಮಧು ರಮಾಳದ ಅವರು ವಿವಿಧ ಯೋಗಾಸನಗಳ ಪ್ರಾತ್ಯಕ್ಷತೆಯೊಂದಿಗೆ ತರಬೇತಿ ಕೇಂದ್ರದ ಪ್ರಶಿಕ್ಷಣಾರ್ಥಿಗಳಿಗೆ ಯೋಗವನ್ನು ಮಾಡಿಸಿದರು.

ಕರುನಾಡು ಸೈನಿಕ ತರಬೇತಿ ಕೇಂದ್ರದ ಅಧ್ಯಕ್ಷ ಸವಿತಾ ಶಂಕರ ತುಕ್ಕನ್ನವರ ಅಧ್ಯಕ್ಷತೆ ವಹಿಸಿದ್ದರು.
ಬಿಜೆಪಿ ಅರಭಾವಿ ಮಂಡಲದ ಅಧ್ಯಕ್ಷ ಮಹಾದೇವ ಶೆಕ್ಕಿ, ಪ್ರಧಾನ ಕಾರ್ಯದರ್ಶಿ ಮಹಾಂತೇಶ ಕುಡಚಿ, ಮಹರ್ಷಿ ವಾಲ್ಮೀಕಿ ಕ್ರೀಡಾ ಮತ್ತು ಸಾಂಸ್ಕೃತಿಕ ಸಮಾಜ ಸೇವಾ ಸಂಘದ ಅಧ್ಯಕ್ಷ ಯಲ್ಲಾಲಿಂಗ ವಾಳದ, ರಾಷ್ಟ್ರೀಯ ಗಾಲಿ ಖುರ್ಚಿ ಕ್ರಿಕೆಟ್ ಆಟಗಾರ ಹಣಮಂತ ಹಾವಣ್ಣವರ, ಸಂಸ್ಥೆಯ ಸಂಚಾಲಕ ಶಂಕರ ತುಕ್ಕಣ್ಣವರ, ಪರಪ್ಪ ನಾವಿ ಅತಿಥಿಯಾಗಿ ಭಾಗವಹಿಸಿದ್ದರು. ಮಾನಶೆಟ್ಟಿ ಸ್ವಾಗತಿಸಿದರು,
ಯೋಗ ಕಾರ್ಯಕ್ರಮದಲ್ಲಿ 100ಕ್ಕೂ ಅಧಿಕ ಸಂಖ್ಯೆಯಲ್ಲಿ ಸೈನಿಕ ತರಬೇತಿ ಕೇಂದ್ರದ ಪ್ರಶಿಕ್ಷಣಾರ್ಥಿಗಳು ಭಾಗವಹಿಸಿದ್ದರು.

- Advertisement -
- Advertisement -

Latest News

ಬೆಳಗಾವಿ ಜಿಲ್ಲೆಯ ಒಂದೇ ಮನೆಯ ಇಬ್ಬರು ಪಿ ಎಸ್ ಐ ಹುದ್ದೆಗೆ ಆಯ್ಕೆ

ಮೂಡಲಗಿ : ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಇಟ್ನಾಳ ಗ್ರಾಮದ ಶಿವಾನಂದ ಬೆನ್ನಳ್ಳಿ ಮತ್ತು ಅವರ ಸಹೋದರನ ಮಗಳು ಶಿಲ್ಪಾ ಪ್ರವೀಣ ಬೆನ್ನಳ್ಳಿ ಇವರು ಪೋಲಿಸ್...
- Advertisement -

More Articles Like This

- Advertisement -
close
error: Content is protected !!
Join WhatsApp Group