ಮೂಡಲಗಿ: ಮಕ್ಕಳ ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಬೆಳೆವಣಿಗೆಗೆ ಯೋಗವು ಪ್ರಮುಖ ಪಾತ್ರ ವಹಿಸುತ್ತದೆ. ಜತೆಗೆ ಭಾವನಾತ್ಮಕ, ಸಾಮಾಜಿಕ ಹಾಗೂ ಆಧ್ಯಾತ್ಮಿಕ ಅಂಶಗಳನ್ನು ಒಳಗೊಂಡ ಯೋಗ ಅಧ್ಯಯನ ತುಂಬಾ ಅವಶ್ಯಕವಾಗಿದೆ ಎಂದು ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಕ್ರೀಡಾ ವಿಭಾಗದ ಸಹಾಯಕ ನಿರ್ದೇಶಕ ಡಾ. ಜಗದೀಶ ಎಸ್. ಗಸ್ತಿ ನುಡಿದರು.
ಕಲ್ಲೋಳಿ ಪಟ್ಟಣದ ಶ್ರೀ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ 2024-25 ನೇ ಸಾಲಿನ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಅಂತರ್ ಕಾಲೇಜುಗಳ ಏಕವಲಯ ಪುರುಷರ ಹಾಗೂ ಮಹಿಳೆಯರ ಯೋಗಾಸನ ಪಂದ್ಯಾವಳಿ ಮತ್ತು ವಿಶ್ವವಿದ್ಯಾಲಯದ ತಂಡದ ಆಯ್ಕೆಯ ಪ್ರಕ್ರಿಯೆ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಎಲ್ಲ ಕ್ರೀಡೆಗಳಿಗೆ ದೈಹಿಕ ಸಧೃಡತೆ ಮತ್ತು ಏಕಾಗ್ರತೆ ಅವಶ್ಯಕ ಅದನ್ನು ಯೋಗ ನೀಡುತ್ತದೆ. ಯೋಗ ಪಟುಗಳಿಗೆ ದೇಶ ವಿದೇಶಗಳಲ್ಲಿ ಸಾಕಷ್ಟು ಅವಕಾಶಗಳಿವೆ ಎಂದರು.
ಎಸ್.ಆರ್.ಇ. ಸಂಸ್ಥೆಯ ಚೇರಮನ್ನರಾದ ಬಸನಗೌಡ ಶಿವಗೌಡ ಪಾಟೀಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಯೋಗಾಸನ ಪಂದ್ಯಾವಳಿಯು ಯಶಸ್ವಿಯಾಗಿ ಜರುಗಲಿ ಎಂದು ಶುಭ ಹಾರೈಸಿದರು. ಕಾಲೇಜಿನ ಪ್ರಾಚಾರ್ಯ ಡಾ. ಸುರೇಶ ಹನಗಂಡಿ ಪ್ರಾಸ್ತಾವಿಕ ಮಾತನಾಡುತ್ತಾ, ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ತೊಡಗಿಕೊಳ್ಳಬೇಕು ಆಗ ಮಾತ್ರ ಸರ್ವಾಂಗೀಣ ಪ್ರಗತಿ ಹೊಂದಲು ಸಾಧ್ಯ ಎಂದರು.
ಬೆಂಗಳೂರಿನ ಅಂತಾರಾಷ್ಟ್ರೀಯ ಯೋಗಾಸನ ತಾಂತ್ರಿಕ ಮುಖ್ಯಾಧಿಕಾರಿಗಳಾದ ಡಾ. ಪ್ರೇಮಕುಮಾರ ಮುದ್ದಿ, ಬಾದಾಮಿ ಪದವಿ ಕಾಲೇಜಿನ ದೈಹಿಕ ನಿರ್ದೇಶಕರಾದ ಬಿ.ಎಸ್. ಪಾಟೀಲ, ಶ್ರೀಶೈಲ್ ಗೋಪಶೆಟ್ಟಿ, ಜಿಮ್ ಕೋಚ್ ದೇವರಾಜ ಚೌಗಲೆ, ಬೆನನ್ ಸ್ಮಿತ್ ಕಾಲೇಜಿನ ಪ್ರಾಚಾರ್ಯ ಡೇನಿಯಲ್ ಸ್ಯಾಮ್ಯುಯೆಲ್, ಎಸ್.ಆರ್.ಇ. ಸಂಸ್ಥೆಯ ಉಪಾಧ್ಯಕ್ಷರಾದ ಬಿ.ಆರ್. ಕಡಾಡಿ, ನಿರ್ದೇಶಕರುಗಳಾದ ಬಿ.ಎಸ್.ಗೋರೋಶಿ, ಎಸ್.ಎಂ. ಖಾನಾಪೂರ, ಎಂ.ಎಸ್. ಕಪ್ಪಲಗುದ್ದಿ, ಎಂ.ಡಿ.ಕುರಬೇಟ, ಕಾಲೇಜಿನ ಕ್ರೀಡಾ ಸಂಘಟನಾ ಕಾರ್ಯದರ್ಶಿ ಬಿ.ಕೆ. ಸೊಂಟನವರ, ವಿವಿಧ ಕಾಲೇಜುಗಳಿಂದ ಆಗಮಿಸಿದ ದೈಹಿಕ ನಿರ್ದೇಶಕರುಗಳು, ಯೋಗಪಟುಗಳು ಇನ್ನೀತರರು ಉಪಸ್ಥಿತರಿದ್ದರು.
ಕು. ರಾಧಿಕಾ ಕರೆಪ್ಪಗೋಳ ಪ್ರಾರ್ಥಿಸಿದರು, ಡಿ.ಎಸ್. ಹುಗ್ಗಿ ಸ್ವಾಗತಿಸಿದರು, ಡಾ. ಕೆ.ಎಸ್. ಪರವ್ವಗೋಳ ನಿರೂಪಿಸಿದರು, ಬಿ.ಸಿ. ಮಾಳಿ ವಂದಿಸಿದರು