ಮೂಡಲಗಿ – ಮೈಸೂರಿನ ಖ್ಯಾತ ಫ್ಯಾಷನ್ ಮಾಡೆಲ್ ,ಮಿ ಏಷ್ಯಾ 2020 ಇಂಟರ್ನ್ಯಾಷನಲ್ ಮೇಲ್ ಮಾಡೆಲ್ ಆಗಿರುವ ನಾಗೇಶ್ ಡಿ ಸಿ ರವರ ಸಂಸ್ಥೆಯ ತಿಬ್ಬಾಸ್ ಗ್ರುಪ್ , “ ತಿಬ್ಬಾಸ್ ಫ್ಯೂಚರ್ ಮಾಡೆಲ್ ಆಫ್ ಇಂಡಿಯಾ – 2022” ಸೀಸನ್ 2 ರ ಫ್ಯಾಷನ್ ಮೇಳ ಬರುವ ಜನವರಿಯಲ್ಲಿ ನಡೆಯಲಿದ್ದು, ಈ ಫ್ಯಾಷನ್ ಮೇಳದಲ್ಲಿ ಬೆಳಗಾವಿ ಜಿಲ್ಲೆಯ ಮೂಡಲಗಿಯ ಯುವ ನಟ ಮಂಜುನಾಥ ರೇಳೆಕರ ಹೆಜ್ಜೆ ಹಾಕಲು ಹೊರಟಿದ್ದಾರೆ.
ತಿಬ್ಬಾಸ್ ಗ್ರುಪ್ ಇದೇ ಮೊದಲ ಬಾರಿಗೆ ಮಕ್ಕಳು, ವಯಸ್ಕರು, ವಯೋವೃದ್ಧರ ವರೆಗೆ ಎಲ್ಲಾ ಮಾದರಿಯ ಜನತೆಗೆ ಅವಕಾಶ ಕಲ್ಪಿಸಿಕೊಡುತ್ತಿರುವ ಸಂಸ್ಥೆ ಇದಾಗಿದೆ.
ಮಂಜುನಾಥ ರೇಳೇಕರ ಈಗಾಗಲೇ ನಟನೆಯಿಂದ ಸಿನಿಮಾ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದು ಎಲ್ಲರಿಗೂ ಗೊತ್ತಿದೆ. ಇದರ ಜೊತೆಯಲ್ಲಿ ಈಗ ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟಿದ್ದು ಜನರಿಗೆ ಸಂತಸ ತಂದಿದೆ.
ಮಂಜುನಾಥ ನಿಗೆ ಈಗಾಗಲೇ ಸ್ಟಾರ್ ನಟರೊಂದಿಗೆ ಅಭಿನಯಿಸುವ ಅವಕಾಶ ಸಿಕ್ಕಿವೆ. ಶೂಟಿಂಗ್ ನ ಬಿಡುವಿನ ವೇಳೆಯಲ್ಲಿ ವಿಶೇಷ ವ್ಯಕ್ತಿಗಳನ್ನು ಸಂದರ್ಶನ ಮಾಡಿ ತನ್ನ ಮೂಡಲಗಿ ಟ್ಯಾಲೆಂಟ್ಸ್ ಯೂಟ್ಯೂಬ್ ಚಾನಲ್ ನಲ್ಲಿ ಪ್ರಕಟಿಸಿ ಎಲೆಮರೆಯ ಕಾಯಿಯಂತೆ ಇರುವ ಕಲಾವಿದರನ್ನು ಪರಿಚಯ ಕೂಡ ಮಾಡುತ್ತಿದ್ದಾನೆ ಎನ್ನುವುದು ಹೆಮ್ಮೆಯ ವಿಷಯ.
ಬಡಮಧ್ಯಮ ವರ್ಗದ ಕುಟುಂಬದ ಹಿನ್ನೆಲೆಯಿಂದ ಬಂದ ಮೂಡಲಗಿಯ ಯುವಕ ಹೀಗೆ ಸಿನಿಮಾ ಅಲ್ಲದೆ ಈಗ ಪ್ರತಿಷ್ಠಿತ ಮಾಡೆಲ್ಲಿಂಗ್ ಕ್ಷೇತ್ರಕ್ಕೂ ಕಾಲಿಟ್ಟಿದ್ದು ಮೂಡಲಗಿಯಂಥ ಗ್ರಾಮೀಣ ಭಾಗಕ್ಕೆ ಮಹತ್ವ ಬಂದಂತಾಗಿದೆ.
ಏನೇ ಆಗಲಿ ಮೂಡಲಗಿ ಯುವಕ ಹೀಗೆಯೇ ಮೂಡಲಗಿಯ ಕೀರ್ತಿ ಹೆಚ್ಚಿಸಲೆಂದು ನಾಗರಿಕರು ಶುಭ ಹಾರೈಸಿದ್ದಾರೆ.