ಬೀದರ – ಬೀದರ ನಗರದ ಹಬ್ಸಿಕೋಟ್‌ನ ಗೆಸ್ಟ್ ಹೌಸ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಯುವಕನ ಶವ ಪತ್ತೆಯಾಗಿದ್ದು ಹಲ್ಲೆ ಮಾಡಿ ಕೊಲೆಗೈದಿದ್ದಾರೆ ಎಂದು ಮೃತನ ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ.
ಪರಮೇಶ್ವರ ಹೊಡಮನೆ (30) ಎಂಬ ಯುವಕನ ಶವ ಗೆಸ್ಟ್‌ಹೌಸ್ ರೂಮ್‌ನಲ್ಲಿ ಪತ್ತೆಯಾಗಿದೆ. ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಗೋದಿಹಿಪ್ಪರಗಾ ಗ್ರಾಮದ ಯುವಕ ಪರಮೇಶ್ವರ.
ಈ ಸಂಬಂಧ 4 ಜನರ ವಿರುದ್ಧ ಬೀದರ್‌ನ ಮಾರ್ಕೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಕಳೆದ ಹಲವು ವರ್ಷಗಳಿಂದ ಬೆಂಗಳೂರಿನಲ್ಲಿ ವ್ಯಾಪಾರ ಮಾಡಿಕೊಂಡಿದ್ದ ಮೃತ ಯುವಕ ಬೆಂಗಳೂರು ಮೂಲದ ಯುವತಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದನೆಂದೂ, ಯುವತಿ 4 ತಿಂಗಳ ಗರ್ಭಿಣಿಯಾಗಿದ್ದಳು ಎಂದು ವಿದ್ಯಾರಣ್ಯಪುರ ಠಾಣೆಯಲ್ಲಿ ದೂರು ದಾಖಲಾಗಿತ್ತು ಎನ್ನಲಾಗಿದೆ.
ಗರ್ಭಿಣಿಯಾಗಿರುವ ವಿಚಾರ ತಿಳಿದು ಮದುವೆ ಮಾಡಿಕೊಳ್ಳುವಂತೆ ಯುವತಿ ದುಂಬಾಲು ಬಿದ್ದಿದ್ದು ಯುವತಿಯ ಟಾರ್ಚರ್‌ನಿಂದಾಗಿ ಬೆಂಗಳೂರಿ ಬಿಟ್ಟು ಬೀದರ್‌ಗೆ ಬಂದಿದ್ದ. ಬೆಂಗಳೂರಿನಿಂದ ಮಹಿಳಾ ಹೋರಾಟಗಾರ್ತಿಯನ್ನುಜೊತೆಗೆ ಕರೆದುಕೊಂಡು ಯುವತಿ ಮೃತ ಯುವಕನ ಮನೆಗೆ ಬಂದಿದ್ದಳು ನಿನ್ನೆ ಗೋದಿಹಿಪ್ಪರಗಾ ಗ್ರಾಮದಲ್ಲಿರುವ ಯುವಕನ ಮನೆಗೆ ಬಂದು ಯುವತಿ ಗಲಾಟೆ, ಮದುವೆ ಮಾಡಿಕೊಳ್ಳುವಂತೆ ಆಗ್ರಹಿಸಿದ್ದಳು. ಮಾತುಕತೆಗಾಗಿ ಮೃತ ಯುವಕ, ಆತನ ಸ್ನೇಹಿತ ಮತ್ತು ಯುವತಿ ಸೇರಿದಂತೆ ನಾಲ್ವರು ಐಬಿಯಲ್ಲಿದ್ದರು. ಆದರೆ, ರಾತ್ರಿ ನೇಣು ಬಿಗಿದ ಸ್ಥಿತಿಯಲ್ಲಿ ಯುವಕನ ಶವ ಪತ್ತೆಯಾಗಿದೆ.
ಯುವಕನ ಮನೆಯವರಿಂದ ಬೀದರ್‌ನ ಮಾರ್ಕೇಟ್ ಪೊಲೀಸ್ ಠಾಣೆಯಲ್ಲಿ ಕೊಲೆ ಕೇಸ್ ದಾಖಲಾಗಿದ್ದು ತನಿಖೆ ಮುಂದುವರೆದಿದೆ.
ವರದಿ : ನಂದಕುಮಾರ ಕರಂಜೆ, ಬೀದರ