Homeಸುದ್ದಿಗಳುಒಂದು ಸಿಗರೆಟ್ ವಿಚಾರದಲ್ಲಿ ಗಲಾಟೆ ಕೊಲೆಯಲ್ಲಿ ಅಂತ್ಯ

ಒಂದು ಸಿಗರೆಟ್ ವಿಚಾರದಲ್ಲಿ ಗಲಾಟೆ ಕೊಲೆಯಲ್ಲಿ ಅಂತ್ಯ

spot_img

ಬೀದರ -_ಸಿಗರೇಟ್ ಸೇದುವ ವಿಚಾರಕ್ಕೆ ಆರಂಭವಾದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದ್ದು ಸಮಾಜ ಸೇವೆ ಮಾಡಿಕೊಂಡು ಎಲ್ಲರ ಅಚ್ಚುಮೆಚ್ಚಿನವನಾಗಿದ್ದ ಮನ್ನಾ ಏಖೆಳ್ಳಿ ಗ್ರಾಮದ ಯುವಕ ಕೊಲೆಯಾಗಿದ್ದಾನೆ

ಮನ್ನಾಏಖೇಳ್ಳಿ ಗ್ರಾಮದ ಗಣಪತಿ ವಗ್ಗೇರ್ (32) ಮೃತ ಯುವಕ.ಬೀದರ್ ಜಿಲ್ಲೆಯ ಚಿಟಗುಪ್ಪಾ ತಾಲೂಕಿನ ಮನ್ನಾಏಖೇಳ್ಳಿ ಗ್ರಾಮದ ನಿವಾಸಿ. ಈತನಿಗೆ ಸುಮಾರು 32ರ ಆಸುಪಾಸಿನ ವಯಸ್ಸಾಗಿದೆ. 9 ವರ್ಷದ ಹಿಂದೆ ಮದುವೆಯಾಗಿದ್ದು ಪುಟ್ಟ ಮೂವರು ಜನ ಮಕ್ಕಳಿದ್ದಾರೆ. ವಿಜಯದಶಮಿ ದಿನದಂದು ಮಧ್ಯರಾತ್ರಿ ಬರ್ಬರವಾಗಿ ಹತ್ಯೆಯಾಗಿದ್ದಾನೆ. ಚಾಕು‌ವಿನಿಂದ ಕುತ್ತಿಗೆ ಹಾಗೂ ಸೊಂಟಕ್ಕೆ ಚುಚ್ಚಿ ಕೊಂದಿದ್ದ ಮೂವರು ಆರೋಪಿಗಳು ಪರಾರಿಯಾಗಿದ್ದು ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ಮನ್ನಾಏಖೇಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮನ್ನಾಏಖೇಳ್ಳಿ ಗ್ರಾಮದ ಇಬ್ಬರು, ನಿಡವಂಚಿ ಗ್ರಾಮದ ಓರ್ವ ಸೇರಿ ಒಟ್ಟು 4 ಜನರಿಂದ ಕೃತ್ಯ ನಡೆದಿದೆ.

ಘಟನೆಯ ಹಿನ್ನೆಲೆ :
ಅಂದು ಇಡೀ ಊರಿಗೆ ಊರೇ ದಸರಾ ಸಂಭ್ರಮದಲ್ಲಿ ಮುಳುಗಿತ್ತು. ಆದರೆ ಸಂಭ್ರಮದಲ್ಲಿದ್ದ ಗ್ರಾಮಸ್ಥರಿಗೆ ಬೆಳ್ಳಂಬೆಳಗ್ಗೆ ಶಾಕ್ ಕಾದಿತ್ತು. ಇಡೀ ಊರಿನವರಿಗೆ ಚಿರಪರಿಚಿತನಾಗಿ, ಅವರಿವರ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದ ಅದರಿಂದ ಬಂದಿರುವ ಹಣದಿಂದಲೇ ಸುಂದರವಾದ ಬದುಕು ಕಟ್ಟಿಕೊಂಡಿದ್ದ. ಇನ್ನೂ ಹೆಂಡತಿ ಕೂಡಾ ಕೂಲಿ ಕೆಲಸ ಮಾಡಿಕೊಂಡು ಸುಂದರವಾದ ಸಂಸಾರ ಮಾಡಿಕೊಂಡಿದ್ರು. ಆದರೆ ನಿನ್ನೆ ತಡರಾತ್ರಿ ಯಾರೋ ದುಷ್ಕರ್ಮಿಗಳು ಗಣಪತಿ ವಗ್ಗೇರಿಯನ್ನ ಚಾಕುವಿನಿಂದ ಇರಿದು ಕೊಲೆ ಮಾಡಿ ಪರಾರಿಯಾಗಿದ್ದಾರೆ.

ಯುವಕನ ಕೊಲೆಯ ಸುದ್ದಿ ತಿಳಿಯುತ್ತಿದಂತೆ ಇಡೀ ಊರಿಗೆ ಊರೇ ಬೆಚ್ಚಿ ಬಿದ್ದಿದೆ. ಹಬ್ಬದ ಸಡಗರದಲ್ಲಿದ್ದ ಗ್ರಾಮಸ್ಥರಿಗೆ ಈ ಕೊಲೆ ವಿಚಾರ ತಿಳಿದು ಹಬ್ಬದ ಸಡಗರವೇ ಮಾಯವಾಗಿದೆ. ಇದೆ. ಈ ಬಗ್ಗೆ ಕೊಲೆ ಪ್ರಕರಣವನ್ನ ದಾಖಲಿಸಿಕೊಂಡಿರುವ ಮನ್ನಾಏಖೇಳ್ಳಿ ಪೊಲೀಸರು ಕೊಲೆಗೈದು ಪರಾರಿಯಾಗಿರುವ ಕೊಲೆ ಪಾತಕರ ಹುಡುಕಾಟದಲ್ಲಿ ತೊಡಗಿದ್ದಾರೆ. ಕೊಲೆಯಾದ ಗಣಪತಿ ವಗ್ಗೇರಿಗೆ ಯಾರು ಕೂಡಾ ಶತ್ರುಗಳಿಲ್ಲ‌. ಆದರೆ ನಿನ್ನೆ ರಾತ್ರಿ ದುಷ್ಕರ್ಮಿಗಳು ಕೊಲೆ ಭೀಕರವಾಗಿ ಕೊಲೆ ಮಾಡಿ ಹೋಗಿದ್ದು ಚಿಕ್ಕ ಚಿಕ್ಕ ಮೂರು ಮಕ್ಕಳು ತಬ್ಬಲಿಗಳಾಗಿದ್ದಾರೆ. ಗಣಪತಿಯನ್ನ ಯಾರು ಕೊಲೆ ಮಾಡಿದ್ದಾರೋ ಅವರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಕೊಲೆಯಾದ ಗಣಪತಿ ವಗ್ಗೇರಿಯ ಸಂಬಂಧಿಗಳು ಆಗ್ರಹಿಸುತ್ತಿದ್ದಾರೆ

ಚಿಕ್ಕ ಚಿಕ್ಕ ವಿಷಯಕ್ಕೆ ಕೊಲೆ ನಡೆದರೆ ಮುಂದೆ ಎತ್ತ ಸಾಗುತ್ತದೆ ಸಮಾಜ ಎಂಬುದೆ ಯಕ್ಷ ಪ್ರಶ್ನೆಯಾಗಿದೆ.

ವರದಿ : ನಂದಕುಮಾರ ಕರಂಜೆ, ಬೀದರ

RELATED ARTICLES

LEAVE A REPLY

Please enter your comment!
Please enter your name here

Most Popular

error: Content is protected !!
Join WhatsApp Group