ಯುವಕರು ವ್ಯಸನಮುಕ್ತರಾಗಬೇಕು – ರವಿ ಗೋಲಾ

Must Read

ಸಿಂದಗಿ:  ಪ್ರಸಕ್ತ ದಿನಗಳಲ್ಲಿ ಯುವಕರು ವ್ಯಸನ ಮುಖಿ ಆಗುತ್ತಿದ್ದು ಇದರಿಂದ ಹೊರಬರಲು ಪ್ರಯತ್ನಿಸಬೇಕು, ಅಲ್ಲದೆ ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಮಹಾವಿದ್ಯಾಲಯದ ದೈಹಿಕ ನಿರ್ದೇಶಕ ರವಿ ಗೋಲಾ ಹೇಳಿದರು.

ಪಟ್ಟಣದ ಜಿ. ಪಿ. ಪೋರವಾಲ ಕಲಾ ವಾಣಿಜ್ಯ ಮತ್ತು ವಿ. ವಿ. ಸಾಲಿಮಠ ವಿಜ್ಞಾನ ಮಹಾವಿದ್ಯಾಲಯದಲ್ಲಿ ಲಿಂ. ಪ. ಪೂ. ಶ್ರೀ  ಮಹಾಂತ ಶಿವಯೋಗಿಗಳ ೯೪ ನೇ ಜನ್ಮ ದಿನದ ಪ್ರಯುಕ್ತ ವ್ಯಸನ ಮುಕ್ತ ದಿನಾಚರಣೆ ಕಾರ್ಯಕ್ರಮದಲ್ಲಿ ಅದರ ಕರಾಳತೆಯನ್ನು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪ್ರಾಚಾರ್ಯ ಡಿ. ಎಂ. ಪಾಟೀಲ ಮಾತನಾಡಿದರು. ಮಹಾವಿದ್ಯಾಲಯದ ಐಕ್ಯೂಎಸಿ ಸಂಯೋಜಕ ಡಾ. ರವಿ ಲಮಾಣಿ ಅವರು ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿಯನ್ನು ಭೋದಿಸಿದರು. ಪ್ರಸಕ್ತ ಸಾಲಿನ ವಿದ್ಯಾರ್ಥಿ ಒಕ್ಕೂಟದ ಸಂಚಾಲಕಿ ಶ್ರೀಮತಿ ಶ್ರೀದೇವಿ ಸಿಂದಗಿ ಹಾಗೂ ಎನ್. ಎಸ್. ಎಸ್. ಜಿಲ್ಲಾ ನೂಡಲ್ ಅಧಿಕಾರಿ ಡಾ. ಪ್ರಕಾಶ್ ರಾಠೋಡ ಉಪಸ್ಥಿತರಿದ್ದರು. ಬಸವರಾಜ ಮಹಾಜನಶೆಟ್ಟಿ ನಿರೂಪಿಸಿದರು.

Latest News

ಬೆಳ್ಳಿ ಬಂಗಾರ ಕದ್ದ ಖದೀಮರ ಹೆಡೆಮುರಿ ಕಟ್ಟಿದ ಗೋಕಾಕ ಪೋಲಿಸರು

ಗೋಕಾಕ ನಗರದ ಬೀಗ ಹಾಕಿದ್ದ ಮನೆಯೊಂದರ ಕೀಲಿ ಮುರಿದು ಬೆಳ್ಳಿ ಬಂಗಾರ ಸೇರಿದಂತೆ ನಗದು ಹಣ ಕದ್ದು ಪರಾರಿಯಾಗಿದ್ದ ಕುಖ್ಯಾತ ಖದೀಮರನ್ನು ಗೋಕಾಕ ಪೋಲಿಸರು ಬಂಧಿಸುವಲ್ಲಿ...

More Articles Like This

error: Content is protected !!
Join WhatsApp Group