ಮೂಡಲಗಿ : ಮಾದಕ ವಸ್ತು ಸೇವನೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವದಲ್ಲದೆ ದೈಹಿಕ ಅನಾರೋಗ್ಯಕ್ಕೆ ಕಾರಣವಾಗುತ್ತದೆ ಇಂದಿನ ಯುವಕರು ಡ್ರಗ್ಸ್ ತಂಬಾಕು ಗಾಂಜಾ ಹಾಗೂ ಮದ್ಯಪಾನಗಳ ದುಶ್ಚಟಕ್ಕೆ ಬಲಿಯಾಗುತ್ತಿದ್ದು ಅವುಗಳನ್ನು ಸೇವನೆಯಿಂದ ದೂರ ಇರುವ ಯುವ ಸಮುದಾಯ ಸೃಷ್ಟಿಯಾಗುವುದು ಅವಶ್ಯಕವಿದೆ ಎಂದು ಆರ್.ಡಿ.ಎಸ್. ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಸಂತೋಷ ಪಾರ್ಶಿ ಹೇಳಿದರು.
ಪಟ್ಟಣದ ಆರ್.ಡಿ.ಎಸ್. ಕಲಾ, ವಾಣಿಜ್ಯ, ವಿಜ್ಞಾನ ಪದವಿ ಮಹಾವಿದ್ಯಾಲಯ ಹಾಗೂ ಸ್ವತಂತ್ರ ಪದವಿ ಪೂರ್ವ ಮಹಾವಿದ್ಯಾಲಯಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ ನಶಾ ಮುಕ್ತ ಭಾರತದ ಅಭಿಯಾನದ ಮಾದಕ ವಸ್ತು ಸೇವನೆ ಮಾಡದಿರಲು ಪ್ರತಿಜ್ಞೆ ಸ್ವೀಕಾರ ಕಾರ್ಯಕ್ರಮದಲ್ಲಿ ಮಾತನಾಡಿ, ನಮ್ಮ ಮನೆ ಕುಟುಂಬ ಹಾಗೂ ಸಮುದಾಯದ ಆರೋಗ್ಯ ಕಾಪಾಡಲು ಮಾದಕ ವಸ್ತುಗಳಿಂದ ನಾವೆಲ್ಲರೂ ದೂರ ಇರೋಣ ಭಾರತ ಸರಕಾರ ಯುವ ಸಮುದಾಯದ ಆರೋಗ್ಯಕ್ಕಾಗಿ ಮಾದಕ ವಸ್ತು ಸೇವನೆಯ ಪರಿಣಾಮಗಳು ಕುರಿತು ಜಾಗೃತಿಯನ್ನು ಹಮ್ಮಿಕೊಂಡು ಪ್ರತಿಯೊಬ್ಬರಿಗೆ ತಿಳಿವಳಿಕೆ ನೀಡುವುದು ಅದರ ಜೊತೆಗೆ ನಾವೆಲ್ಲರೂ ಪ್ರತಿಜ್ಞೆ ಸ್ವೀಕರಿಸಿ ಅದರಂತೆ ನಡೆದುಕೊಳ್ಳೋಣ ಎಂದರು.
ಉಪನ್ಯಾಸಕ ಎಸ್.ಎನ್. ಕುಂಬಾರ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋದಿಸಿದರು ಪ್ರಾಚಾರ್ಯರಾದ ಸತೀಶ ಗೋಟೂರೆ ಶಿವಾನಂದ ಸತ್ತಿಗೇರಿ ಹಾಗೂ ಕಾಲೇಜಿನ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಪ್ರತಿಜ್ಞೆಯನ್ನು ಸ್ವೀಕರಿಸಿದರು.