- Advertisement -
ಬೀದರ – ಜಾತ್ರೆಯಲ್ಲಿ ದಲಿತರ ಓಣಿಯಿಂದ ಮೆರವಣಿಗೆ ತೆಗೆದುಕೊಂಡು ಹೋಗುವ ವಿಷಯದಲ್ಲಿ ದಲಿತರು ಹಾಗೂ ಮೇಲ್ಜಾತಿಯ ಯುವಕರಲ್ಲಿ ಗಲಾಟೆ ನಡೆದು ಪೊಲೀಸ್ ಸ್ಟೇಶನ್ ಮೆಟ್ಟಿಲೇರಿದ ಪ್ರಕರಣ ಭಾಲ್ಕಿ ತಾಲೂಕಿನ ಚಳಕಾಪುರ ಗ್ರಾಮದಲ್ಲಿ ನಡೆದ ಬಗ್ಗೆ ವರದಿಯಾಗಿದೆ .
ಈ ಸಂಬಂಧ ಸುಮಾರು ೭೩ ಜನರ ವಿರುದ್ಧ ಎಫ್ಆಯ್ಆರ್ ದಾಖಲಾಗಿದೆ.
ಗ್ರಾಮದ ಹನುಮಾನ್ ದೇವರ ಜಾತ್ರೆಯಲ್ಲಿ ಮೆರವಣಿಗೆಯನ್ನು ದಲಿತರ ಓಣಿಯಿಂದ ಕೊಂಡೊಯ್ಯಲು ಒಂದು ಸಮುದಾಯದ ಯುವಕರು ಒತ್ತಾಯಿಸಿದರೆ, ಪ್ರತಿವರ್ಷ ಹೇಗೆ ಹೋಗುತ್ತದೆಯೋ ಹಾಗೇ ಹೋಗಲಿ ಎಂದಿದ್ದಕ್ಕೆ ಮಾತಿನ ಚಕಮಕಿ ನಡೆದು ಯುವಕರು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಈ ಸಂಬಂಧ ಶಿವರಾಜ ದೊಡ್ಮನೆ ಎಂಬಾತನ ದೂರಿನ ಮೇರೆಗೆ ೧೫ ಜನರನ್ನು ಅಟ್ರಾಸಿಟಿ ಕೇಸ್ ಅಡಿ ಬಂಧಿಸಲಾಗಿದೆ.
ಖಟಕ ಚಿಂಚೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಜಿಲ್ಲಾ ವರಿಷ್ಠಾಧಿಕಾರಿ ಪ್ರದೀಒ ಗುಂಟಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
- Advertisement -
ವರದಿ : ನಂದಕುಮಾರ ಕರಂಜೆ, ಬೀದರ