Homeಸುದ್ದಿಗಳುಯುವ ಚೇತನ ಸ್ವಾಮಿ ವಿವೇಕಾನಂದರು – ಸಿದ್ದಾರೂಡ ಬೆಳವಿ

ಯುವ ಚೇತನ ಸ್ವಾಮಿ ವಿವೇಕಾನಂದರು – ಸಿದ್ದಾರೂಡ ಬೆಳವಿ

ಮೂಡಲಗಿ: ಜಗತ್ತಿನ ಜೀವಾಳ, ಭಾರತದ ದಿವ್ಯ ಚೇತನ, ಯುವ ಶಕ್ತಿಯ ನೇತಾರ, ಭಾರತೀಯ ಸಮಾಜದ ಪ್ರಚಾರಕ ಮತ್ತು ಯುವ ಪೀಳಿಗೆಯನ್ನು ದೇಶದ ಅಭಿವೃದ್ಧಿಯಲ್ಲಿ ತೊಡಗಿಸಿದ ವಿಶ್ವ ಯುವ ಚೇತನ ಸ್ವಾಮಿ ವಿವೇಕಾನಂದರ ಆದರ್ಶಗಳ ಮೂಲಕ ದೇಶವನ್ನು ನಾವು ಸದೃಢಗೊಳಿಸಬೇಕಾಗಿದೆ ಎಂದು ಮೂಡಲಗಿ ಸ್ವತಂತ್ರ ಪದವಿ ಪೂರ್ವ ಮಹಾವಿದ್ಯಾಲಯದ ಉಪನ್ಯಾಸಕ ಸಿದ್ದಾರೂಡ ಬೆಳವಿ ಯುವ ಶಕ್ತಿಗೆ ಕರೆ ನೀಡಿದರು.

        ಅವರು ಸ್ಥಳೀಯ ರೂರಲ್ ಡೆವಲಪ್‍ಮೆಂಟ್ ಸೊಸೈಟಿಯ ಸ್ವತಂತ್ರ ಪದವಿ ಪೂರ್ವ ಮಹಾವಿದ್ಯಾಲಯ ಹಾಗೂ ಆರ್.ಡಿ.ಎಸ್. ಪದವಿ ಮಹಾವಿದ್ಯಾಲಯದಲ್ಲಿ ಆಯೋಜಿಸಿದ ಸ್ವಾಮಿ ವಿವೇಕಾನಂದರ ಜಯಂತಿಯ ಅಂಗವಾಗಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡುತ್ತಾ, ಭಾರತೀಯ ಸಾಮಾಜಿಕ ಮೌಲ್ಯಗಳನ್ನು ಅಳವಡಿಸಿಕೊಳ್ಳದೆ ಇಂದಿನ ವಾಸ್ತವಿಕ ಸಮಾಜವು ನೈತಿಕತೆಯನ್ನು ಬಿಟ್ಟು ವಿದೇಶಿ ಸಂಸ್ಕೃತಿಗೆ ಮಾರು ಹೋಗಿ ಯುವ ಶಕ್ತಿ ಹಾಳಾಗಿ ಭಾರತೀಯ ನೆಲೆ ಮಾಯವಾಗುತ್ತಿದೆ ಇದರಿಂದ ಭಾರತ ಬದಲಾಗಬೇಕಾದರೆ ಯುವ ಶಕ್ತಿ ಸ್ವಾಮಿ ವಿವೇಕಾನಂದರ ಮೌಲ್ಯಗಳನ್ನು ಅಳವಡಿಸಿಕೊಂಡು ಸುಭದ್ರ ದೇಶವನ್ನು ಕಟ್ಟಲು ಮುಂದಾಗಬೇಕು ಎಂದರು.

          ಇನೋರ್ವ ಅತಿಥಿಗಳಾದ ಸಂತೋಷ ಲಟ್ಟಿ ಮಾತನಾಡಿ, ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ಇಂದು ಪ್ರತಿಯೊಬ್ಬ ಯುವಕರು ಅಳವಡಿಸಿಕೊಂಡು ತಮ್ಮ ಅಭಿವೃದ್ಧಿಯ ಜೊತೆಗೆ ಉತ್ತಮ ಸಂಸ್ಕಾರಗಳನ್ನು ಬೆಳಸಿಕೊಳ್ಳವುದು ಮತ್ತು ಇಂದಿನ ವ್ಶೆಜ್ಞಾನಿಕ ಬದುಕಿನಿಂದ ಸಾಮಾಜಿಕ ನೆಲೆಯನ್ನು ನಮ್ಮ ದೇಶ ಕಂಡು ಕೊಳ್ಳಬೇಕಾಗಿದೆ ಎಂದರು.

       ಪದವಿ ಕಾಲೇಜಿನ ಉಪನ್ಯಾಸಕ ಪ್ರಕಾಶ ಚೌಡಕಿ ಮಾತನಾಡಿ, ಸ್ವಾಮಿ ವಿವೇಕಾನಂದರು ನೀಡಿದ ವಿಚಾರಧಾರೆಗಳು ಇಂದಿನ ಯುವಕರಿಗೆ ಸಾಧನೆಯ ಸ್ಪೂರ್ತಿಯನ್ನು ನೀಡುತ್ತವೆ ಪ್ರತಿಯೊಬ್ಬ ವಿದ್ಯಾರ್ಥಿ ವಿವೇಕಾನಂದರ ವಿಚಾರಧಾರೆಗಳಂತೆ ಬೆಳೆಯುವುದು ಅವಶ್ಯವಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ಸಂತೋಷ ತಮ್ಮಣ್ಣಾ ಪಾರ್ಶಿ ವಹಿಸಿಕೊಂಡು ಪ್ರಾಸ್ತಾವಿಕವಾಗಿ ಮಾತನಾಡಿದರು ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಪ್ರಾಚಾರ್ಯ ಸತ್ಯಪ್ಪ ಗೋಟೂರೆ, ಉಪನ್ಯಾಸಕರಾದ ಸಂಜೀವ ವಾಲಿ, ಸಂಗಪ್ಪಾ ಕುಂಬಾರ, ಮಹಾದೇವ ಸಿದ್ನಾಳ, ಸಂಜೀವ ಮಂಟೂರ ಮತ್ತಿತರರು ಹಾಜರಿದ್ದರು.

ಉಪನ್ಯಾಸಕರಾದ ರಾಜು ಪತ್ತಾರ ನಿರೂಪಿಸಿದರು ಮಲ್ಲಪ್ಪ ಜ್ಯಾಡರ ಸ್ವಾಗತಿಸಿ ವಂದಿಸಿದರು.

RELATED ARTICLES

Most Popular

error: Content is protected !!
Join WhatsApp Group