- Advertisement -
ಮತ್ತೆ ಹುಟ್ಟಿ ಬನ್ನಿ
ದಿಟ್ಟೆದೆ ತೋರುತ ಆದರ್ಶವಾಗಿ ಜಗದೆಲ್ಲೆಡೆ
ವಿವೇಕ ಮೆರೆದೆ
ತಟ್ಟುತ ತರುಣರ ಹೃದಯವ ಜಾಗೃತಗೊಳಿಸಿ
- Advertisement -
ಮೌಲ್ಯವ ಎರೆದೆ
ಅಟ್ಟುತ ದೂರಕೆ ಆಲಸ್ಯವ ಮೈಕೊಡವಿ
ಬನ್ನಿರೆಂದಿರಲ್ಲವೇ
- Advertisement -
ಮೆಟ್ಟುತ ಚಿಕ್ಯಾಗೋ ನೆಲವ ಭಾಷಣದೊಳು
ಎಲ್ಲರ ಕಣ್ ತೆರೆದೆ
ವೀರ ಸನ್ಯಾಸಿಯೇ ದೇಶವಿದೇಶಗಳ ತುಂಬೆಲ್ಲ
ಪ್ರಖ್ಯಾತಿ ಪಡೆದಿರಿ
ಸಾರುವ ಘೋಷವಾಕ್ಯ ಮನ ಪರಿವರ್ತಿಸಿ
ಸಂಸ್ಕೃತಿ ಪೊರೆದೆ
ವ್ಯಕ್ತಿತ್ವ ವಿಕಸನಕೆ ದಿವ್ಯೌಷಧಿ ನಿಮ್ಮ ನುಡಿ
ಓರೆಕೋರೆಯ ತಿದ್ದುವಲ್ಲಿ
ಶಕ್ತಿ ಪ್ರವೇಶ ಕಾಯದಿ ಸ್ವಾಮಿ ವಿವೇಕಾನಂದ
ಎಂದು ಹೆಸರು ಕರೆದೆ
ಕರಕಮಲ ಜೋಡಿಸಿ ಶಿರಬಾಗುವೆನಿಂದು
ತಮ್ಮ ಜಯಂತಿಯ ಆಚರಿಸಿ
ಮರಳಿ ಮತ್ತೆ ಹುಟ್ಟಿ ಬನ್ನಿರೆಂಬ ಹಂಬಲವ ಗಝಲ್ ಮೂಲಕ ಬರೆದೆ.
ಶ್ರೀಮತಿ ಕಮಲಾಕ್ಷಿ ಕೌಜಲಗಿ