ಬಾಗಲಕೋಟೆ : ಸಮಾಜದ ವಿವಿಧ ಕ್ಷೇತ್ರದ ಯುವ ಸಾಧಕರನ್ನು ಬೆಂಗಳೂರಿನ ಜೀ ಕನ್ನಡ ನ್ಯೂಸ್ ಚಾನೆಲ್ ವತಿಯಿಂದ ಯುವ ಸಾಧಕರನ್ನು ಗುರುತಿಸಿ ಕೊಡ ಮಾಡುವ ಯುವರತ್ನ ಅವಾರ್ಡ್ಸ್ 2025 ಪ್ರಶಸ್ತಿಯನ್ನು ವೈದ್ಯಕೀಯ ಕ್ಷೇತ್ರ, ಬಂಜೆತನ ಕ್ಷೇತ್ರದಲ್ಲಿ ಅವರ ಅತ್ಯದ್ಭುತ ಕೊಡುಗೆಯನ್ನು ಗುರುತಿಸಿ ಬಾಗಲಕೋಟೆ ಜಿಲ್ಲೆಯ ಖ್ಯಾತ ವೈದ್ಯರಾದ ಡಾ. ಶೇಖರ ಮಾನೆ ಅವರ ಧರ್ಮಪತ್ನಿಯಾದ ಡಾ. ವೈಶಾಲಿ ಮಾನೆ ಅವರಿಗೆ ದಿ. ೯ ರಂದು ನೀಡಲಾಯಿತು.
ಬೆಂಗಳೂರಿನ ಪೂರಾಸಿಸನ್ಸ್ ಹೋಟೆಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ ಪ್ರಶಸ್ತಿ ನೀಡಿ ಗೌರವಿಸಿದರು ಈ ಸಂದರ್ಭದಲ್ಲಿ ಎಂಎಲ್ಸಿ ಸಿಟಿ ರವಿ ಚಿತ್ರನಟಿ ಸುಧಾರಾಣಿ ನಟ ಅಜಯ್ ರಾವ್ ಸಂಪಾದಕ ರವಿ ಎಸ್ ಉಪಸ್ಥಿತರಿದ್ದರು